ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಕಲ್ಲಹಕ್ಕಲ ಓಣಿಯ ಗಣೇಶ ರಮೇಶ ಮೂಡಿ ಶಿಕ್ಷೆಗೊಳಗಾದ ಆರೋಪಿ| ಅಪ್ರಾಪ್ತ ಬಾಲಕಿ ಮದುವೆಯಾಗುವುದಾಗಿ ನಂಬಿಸಿ ಅಪಹರಿಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ| ಆರೋಪಿತನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಪೊಲೀಸರು|
ಹಾವೇರಿ(ಮಾ.18): ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ಹಾಗೂ 9,500 ದಂಡ ವಿಧಿಸಿ ಪೊಕ್ಸೊ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜ್ಯೋತಿಶ್ರೀ ತೀರ್ಪು ನೀಡಿದ್ದಾರೆ.
ಹಾನಗಲ್ ತಾಲೂಕಿನ ಕಲ್ಲಹಕ್ಕಲ ಓಣಿಯ ಗಣೇಶ ರಮೇಶ ಮೂಡಿ ಶಿಕ್ಷೆಗೊಳಗಾದ ಆರೋಪಿ. ಆರೋಪಿಯು ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ 17-08-2016ರಂದು ಅಪಹರಿಸಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ಈ ಪ್ರಕರಣ ಕುರಿತಂತೆ ಹಾನಗಲ್ ಆರಕ್ಷಕ ವೃತ್ತ ನಿರೀಕ್ಷಕರಾದ ಆರ್.ಎಚ್. ಕಟ್ಟಿಮನಿ ಅವರು ತನಿಖೆ ನಡೆಸಿ ಆರೋಪಿತನ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಶಿರಸಿ: ಮಗಳ ಮೇಲೆಯೇ ರೇಪ್ ಮಾಡಿದ ಕಾಮುಕ ತಂದೆಗೆ ಕಠಿಣ ಶಿಕ್ಷೆ
ಪ್ರಕರಣದ ಕುರಿತು ವಿಚಾರಣೆ ನಡೆದು ದೋಷಾರೋಪಗಳು ರುಜುವಾತಾದ ಕಾರಣ ಆರೋಪಿ ಗಣೇಶ ರಮೇಶ ಮೂಡಿ ಎಂಬಾತನಿಗೆ 10 ವರ್ಷಗಳ ಕಠಿಣ ಸಜೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ವಿನಾಯಕ ಎಸ್. ಪಾಟೀಲ ಅವರು ವಾದ ಮಂಡಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.