ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯ, ಇನ್ನೊಂದಡೆ ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ!

By Kannadaprabha News  |  First Published Jun 17, 2023, 5:21 AM IST

ಗಂಡ-ಹೆಂಡತಿ ಪರಸ್ಪರ ಜಗಳವಾಡಿ, ಪತ್ನಿಯ ಸಾವಿನಲ್ಲಿ ಅಂತ್ಯವಾಗಿರುವ ದುರ್ಘಟನೆ ತಾಲೂಕಿನ ಹೊಸಳ್ಳಿ ಇ.ಜೆ. ಕ್ಯಾಂಪಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.


ಸಿಂಧನೂರು (ಜೂ.17) : ಗಂಡ-ಹೆಂಡತಿ ಪರಸ್ಪರ ಜಗಳವಾಡಿ, ಪತ್ನಿಯ ಸಾವಿನಲ್ಲಿ ಅಂತ್ಯವಾಗಿರುವ ದುರ್ಘಟನೆ ತಾಲೂಕಿನ ಹೊಸಳ್ಳಿ ಇ.ಜೆ. ಕ್ಯಾಂಪಿನಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.

ಗೌರಮ್ಮ (28) ಮೃತ ದುರ್ದೈವಿ. ಕಳೆದ ಹಲವು ದಿನಗಳಿಂದ ಮನೆಯಲ್ಲಿ ಗೌರಮ್ಮ ಮತ್ತು ಆಕೆಯ ಗಂಡ ಶಶಿಕಾಂತ ನಡುವೆ ಜಗಳ ನಡೆಯುತ್ತಲೇ ಬಂದಿದೆ. ಈ ವಿಷಯ ತಿಳಿದು ಗೌರಮ್ಮಳ ಅಣ್ಣ ಹುಲ್ಲೇಶ ಹೊಸಳ್ಳಿ ಇ.ಜೆ ಕ್ಯಾಂಪ್‌ಗೆ ಬಂದು ಶಶಿಕಾಂತನಿಗೆ ಪ್ರಶ್ನಿಸಿದ್ದಕ್ಕೆ ಆತನೊಂದಿಗೆ ಜಗಳವಾಡಿ ಹಲ್ಲೆವೆಸಲು ಪ್ರಯತ್ನಿಸಿದ್ದಾನೆ.

Latest Videos

undefined

ನನ್ನಿಂದ ಮಗಳಿಗೂ ಕ್ಯಾನ್ಸರ್ ಬಂತು... ನೊಂದು ನೇಣಿಗೆ ಶರಣಾದ ಪೊಲೀಸ್ ಅಪ್ಪ..!

ನಂತರ ಗುರುವಾರ ಬೆಳಗ್ಗೆ ಪುನಃ ಗಂಡ-ಹೆಂಡತಿ ಮಧ್ಯ ಜಗಳ ನಡೆದಿದೆ. ಇವರಿಗೆ ಓರ್ವ ಪುತ್ರ, ಓರ್ವ ಪುತ್ರಿ ಇದ್ದು, ಇವರಿಬ್ಬರು ಶಾಲೆಗೆ ಹೋಗಿದ್ದ ಸಂದರ್ಭದಲ್ಲಿ ಮನೆಯಲ್ಲಿ ಸೀರೆಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗೌರಮ್ಮಳ ಮೃತದೇಹ ಕಂಡು ಬಂದಿದೆ. ಇದನ್ನು ಕಂಡ ಶಶಿಕಾಂತ ಅವರ ತಂದೆ ರಾಮಣ್ಣ ಮತ್ತಿತರರು ತಕ್ಷಣವೆ ಮನೆ ಬಾಗಿಲು ಮುರಿದು ಗೌರಮ್ಮಳನ್ನು ಶಾಂತಿ ಆಸ್ಪತ್ರೆಗೆ ಕರೆತಂದಿದ್ದಾರೆ. ವೈದ್ಯರು ಪರೀಕ್ಷೆ ಮಾಡಿದಾಗ ಗೌರಮ್ಮ ಮೃತಪಟ್ಟಿರುವುದು ತಿಳಿದು ಬಂದಿದೆ. ಇದರಿಂದ ಪುನಃ ಹೊಸಳ್ಳಿ ಇ.ಜೆ ಕ್ಯಾಂಪಿಗೆ ಮೃತದೇಹ ತೆಗೆದುಕೊಂಡು ಹೋಗಿ, ತದನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತಂದು ಶವಗಾರದಲ್ಲಿ ಇಟ್ಟಿದ್ದರು.

ತಮ್ಮ ಮಗಳನ್ನು ಅಳಿಯ ಶಶಿಕಾಂತ ಹಾಗೂ ಅವರ ತಂದೆ-ತಾಯಿ ಹೊಡೆದು ಕೊಂದು ನೇಣು ಹಾಕಿದ್ದಾರೆಂದು ಶಂಕಿಸಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೌರಮ್ಮಳ ಪತಿ ಶಶಿಕಾಂತ ಘಟನೆ ನಡೆದ ನಂತರದಿಂದ ಪರಾರಿಯಾಗಿದ್ದು, ಸಬ್‌ ಇನ್ಸ್‌ಪೆಕ್ಟರ್‌ ಮಣಿಕಂಠ ತನಿಖೆ ಕೈಗೊಂಡಿದ್ದಾರೆ.

ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆ

ಸಿಂಧನೂರು: ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಜವಳಗೇರಾ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಶರಣಬಸವ ತಂಗಪ್ಪ ಹಚ್ಚೊಳ್ಳಿ ಮೃತ ದುರ್ದೈವಿ. ಶರ​ಣ​ಬ​ಸವ ಬುಧವಾರ ರಾತ್ರಿ ಊಟ ಮಾಡಿದ ನಂತರ ಮನೆಯಲ್ಲಿದ್ದ ವೈಯರ್‌ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈತ ಆತ್ಮ​ಹ​ತ್ಯೆ: ಕುಟುಂಬ​ಗ​ಳಿಗೆ ಪರಿ​ಹಾರ ವಿಳಂಬ​ವಾ​ಗ​ದಂತೆ ಈಶ್ವರ್ ಖಂಡ್ರೆ ಖಡಕ್ ಸೂಚನೆ

ಮೃತರ ಹೆಸರಿನಲ್ಲಿ ಎರಡು ಎಕರೆ ಜಮೀನು ಇರುವುದಲ್ಲದೆ, ಬೇರೆಯವರ ಜಮೀನನ್ನು ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡುತ್ತಿದ್ದರು. ಸಿಂಡಿಕೇಟ್‌ ಬ್ಯಾಂಕ್‌ನಲ್ಲಿ ರು.2 ಲಕ್ಷ ಸಾಲವಿದ್ದು, ರು.6 ಲಕ್ಷ ಕೈ ಸಾಲ ಮಾಡಿದ್ದನು. ಮೃತನ ಪತ್ನಿ ಅಪಘಾತಕ್ಕೀಡಾಗಿ ಅಂಗಹೂನಳಾಗಿ ತವರು ಮನೆಯಲ್ಲಿ ವಾಸವಾಗಿದ್ದಾರೆ. ಇವರಿಗೆ ಮೂರು ಹೆಣ್ಣುಮಕ್ಕಳಿದ್ದು ಅವರ ಪೋಷಣೆ ಮಾಡ​ಲಾ​ಗದೆ ಮತ್ತು ಬಿತ್ತಿದ ಹತ್ತಿ ಬೆಳೆ ನಾಶವಾಗಿದ್ದರಿಂದ ಮನನೊಂದು ರೈತ ಶರಣಬಸವ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಬಳಗಾನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!