ರೈತ ಆತ್ಮಹತ್ಯೆ: ಕುಟುಂಬಗಳಿಗೆ ಪರಿಹಾರ ವಿಳಂಬವಾಗದಂತೆ ಈಶ್ವರ್ ಖಂಡ್ರೆ ಖಡಕ್ ಸೂಚನೆ
ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5ಲಕ್ಷ ರು.ಗಳ ಪರಿಹಾರ ಹಾಗೂ ರೈತನ ಪತ್ನಿಗೆ 3ಸಾವಿರ ರು.ಗಳ ಮಾಶಾಸನ ತಲುಪಿಸುವಲ್ಲಿ ವಿಳಂಬವಾಗದಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಬೀದರ್ (ಜೂ.13) ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 5ಲಕ್ಷ ರು.ಗಳ ಪರಿಹಾರ ಹಾಗೂ ರೈತನ ಪತ್ನಿಗೆ 3ಸಾವಿರ ರು.ಗಳ ಮಾಶಾಸನ ತಲುಪಿಸುವಲ್ಲಿ ವಿಳಂಬವಾಗದಿರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.
ಅವರು ಜಿಪಂ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಮಾತನಾಡಿ, ಕಳೆದ ಸಾಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡ 19 ಜನ ರೈತರ ಕುಟುಂಬಗಳಿಗೆ ಪರಿಹಾರ ಧನ ಮತ್ತು ಮಾಶಾಸನ ವ್ಯವಸ್ಥೆಯನ್ನು ಜಿಲ್ಲಾಡಳಿತ ಮುತುವರ್ಜಿ ವಹಿಸಿ ಮಾಡಬೇಕೆಂದರು.
ಸರ್ಕಾರಿ ಆಸ್ಪತ್ರೆ ಸೇವಾ ಗುಣಮಟ್ಟ ಹೆಚ್ಚಳ: ಸಿಎಂ ಸಿದ್ದರಾಮಯ್ಯ
ಪ್ರವಾಹದಲ್ಲಿ ಇಬ್ಬರ ಸಾವು; ಕುಟುಂಬಕ್ಕೆ ತಲಾ 5ಲಕ್ಷ ರು. ಪರಿಹಾರ ವಿತರಣೆ:
ಸೋಮವಾರ ಕುಂಟೆಸಿರ್ಸಿ ಮಾರ್ಗ ಮಧ್ಯದ ಸೇತುವೆ ಮೇಲಿನ ಪ್ರವಾಹಕ್ಕೆ ಹರಿದುಹೋಗಿ ಸಾವನ್ನಪ್ಪಿದ್ದ ಇಬ್ಬರು ವ್ಯಕ್ತಿಗಳ ಕುಟುಂಬಸ್ಥರಿಗೆ ತಲಾ 5ಲಕ್ಷ ರು.ಗಳ ಪರಿಹಾರ ಧನವನ್ನು ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಹಾಗೂ ಪೌರಾಡಳಿತ ಸಚಿವ ರಹೀಮ್ ಖಾನ್ ಸೇರಿದಂತೆ ಮತ್ತಿತರರು ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಶೈಲೇಂದ್ರ ಬೆಲ್ದಾಳೆ, ಬೀದರ್ ದಕ್ಷಿಣ ಕ್ಷೇತ್ರದ ಬುಧೇರಾ ಗ್ರಾಮದಲ್ಲಿ ಭಾರಿ ಗಾಳಿ ಮಳೆಯಿಂದ ಮನೆಯ ಛಾವಣಿ ಶೀಟ್ ಹಾರಿಬಿದ್ದು ಗಾಯಗೊಂಡಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದು ಇವರ ಕುಟುಂಬಕ್ಕೂ ಪರಿಹಾರ ಧನ ಒದಗಿಸಬೇಕೆಂಬ ಬೇಡಿಕೆಗೆ ಸಚಿವ ಖಂಡ್ರೆ ತಕ್ಷಣವೇ 5ಲಕ್ಷ ರು. ಪರಿಹಾರವನ್ನು ಬಿಡುಗಡೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.
ಬಸವಕಲ್ಯಾಣದಲ್ಲಿ ಶೀಘ್ರ ಅನುಭವ ಮಂಟಪ ಕಟ್ಟಡ ಉದ್ಘಾಟನೆ: ಈಶ್ವರ ಖಂಡ್ರೆ
ಬೀದರ್ ಜಿಪಂ ಸಭಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಇತ್ತೀಚೆಗೆ ಕುಂಟೆಸಿರ್ಸಿ ಮಾರ್ಗದ ಸೇತುವೆಯ ಪ್ರವಾಹದಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿರುವ ಇಬ್ಬರು ವ್ಯಕ್ತಿಗಳ ಕುಟುಂಬಕ್ಕೆ ತಲಾ 5ಲಕ್ಷ ರು.ಗಳ ಪರಿಹಾರ ಧನ ಚೆಕ್ ವಿತರಿಸಲಾಯಿತು.