ಭಾಲ್ಕಿ ತಾಲೂಕಿನ ಬರದಾಪೂರ -ಡಾವರಗಾಂವ್ ಮಾರ್ಗ ಮಧ್ಯದ ಸೇತುವೆ ಮಧ್ಯ ಡಾವರಗಾಂವ್ ಗ್ರಾಮದ ಕೆಲವು ಹುಡುಗರು ಶಾಲಾ ಬಸ್‌ನ್ನು ಅಡಗಟ್ಟಿಬಸ್ನಲ್ಲಿದ್ದ ಅಪ್ರಾಪ್ತ ಬಾಲಕಿಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಬೀದರ್ (ಜೂ.17) ಭಾಲ್ಕಿ ತಾಲೂಕಿನ ಬರದಾಪೂರ -ಡಾವರಗಾಂವ್ ಮಾರ್ಗ ಮಧ್ಯದ ಸೇತುವೆ ಮಧ್ಯ ಡಾವರಗಾಂವ್ ಗ್ರಾಮದ ಕೆಲವು ಹುಡುಗರು ಶಾಲಾ ಬಸ್‌ನ್ನು ಅಡಗಟ್ಟಿಬಸ್ನಲ್ಲಿದ್ದ ಅಪ್ರಾಪ್ತ ಬಾಲಕಿಯರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಹಿನ್ನೆಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನಾಲ್ವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ನಡೆದಿದೆ.
ಗುರುವಾರ ಸಂಜೆ 6ರ ಸುಮಾರಿಗೆ ಕಾಲೇಜಿನ ವಿದ್ಯಾರ್ಥಿ ಅಭಿಶೇಕ ಸಂತೋಷ ಮದರಗಾಂವೆ ಹಾಗೂ ಆತನ ಐದಾರು ಜನ ಸ್ನೇಹಿತರು ಕೂಡಿ 4 ಬೈಕ್ಗಳ ಮೇಲೆ ಶಾಲಾ ಬಸ್ಸಿಗೆ ಅಡ್ಡಗಟ್ಟಿನಿಲ್ಲಿಸಿ ಒಮ್ಮೇಲೆ ಬಸ್ಸಿನೊಳಗೆ ಬಂದು ಪೃಥ್ವಿರಾಜ್ ಎಂಬ ವಿದ್ಯಾರ್ಥಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ಮಾಡುತ್ತಿದ್ದ ಸಂದರ್ಭ ಜಗಳ ಬಿಡಿಸಲು ಮುಂದಾದ ಅಪ್ರಾಪ್ತ ವಿದ್ಯಾರ್ಥಿನಿಯರ ಖಾಸಗಿ ಅಂಗಗಳನ್ನು ಮುಟ್ಟಿ, ಹಿಂದಕ್ಕೆ ತಳ್ಳಿ ಹಲ್ಲೆ ಮಾಡಿದ್ದಾರೆ. ನಂತರ ಬಸ್‌ನ ಹಿಂದಿನ ಗಾಜು ಒಡೆದು ಜೀವ ಬೆದರಿಕೆಯೊಡ್ಡಿದ್ದಾರೆ. ಈ ಸಂದರ್ಭದಲ್ಲಿ ಬಸ್ ಚಾಲಕ ಸಂಜುಕುಮಾರ ಸಹ ಹಲ್ಲೆಗೆ ಪ್ರಚೋದನೆ ನೀಡಿದ್ದಾನೆ ಎಂದು ಕಾಲೇಜಿನ ಪ್ರಾಂಶುಪಾಲ ಮಸ್ತಾನ್ ವಲಿ ಖಟಕಚಿಂಚೋಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
undefined
ಅಪ್ರಾಪ್ತ ಬಾಲಕಿ ರೇಪ್ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ
ಡಾವರಗಾಂವ್ ಗ್ರಾಮ ಮೂಲದ ಅಭಿಷೇಕ, ಸಿದ್ಧಲಿಂಗ ಕುಂಬಾರ, ಶೇಖ್ ಅವೇಶ ಮಂಜಲಿಸಾಬ, ಶ್ರೀಕಾಂತ ಮೇತ್ರೆ, ಕುರಬಬೇಳಗಿ ಗ್ರಾಮದ ಮಲಿಕಾರ್ಜುನ ಮೇತ್ರೆ, ಮಹೇಂದ್ರ ವೆಂಕಟ ಮೇತ್ರೆ ಹಾಗೂ ಬಸ್ ಚಾಲಕ ಸಂಜುಕುಮಾರ ವಿರುದ್ಧ ದೂರು ದಾಖಲಿಸಿದ್ದು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಖಟಕಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಕಲಂ 109,323,341,427,504,506 ಜೊತೆ 149 ಐಪಿಸಿ ಮತ್ತು ಕಲಂ: 08 ಫೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಘಟನೆ ಖಂಡಿಸಿ ವಿದ್ಯಾರ್ಥಿಗಳು, ಪಾಲಕರು, ಕೆಲ ಸಂಘಟನೆಗಳ ಪ್ರಮುಖರು ಕಿಡಿಗೇಡಿ ಯುವಕರನ್ನು ಕೂಡಲೇ ಬಂಧಿಸಲು ಆಗ್ರಹಿಸಿ ಕೆಲ ಕಾಲ ಪ್ರತಿಭಟನೆ ಕೂಡ ನಡೆಸಿದ್ದಾರೆ.