Ballari: ಟ್ಯೂಷನ್ ಹೇಳೋ ನೆಪದಲ್ಲಿ ಕರೆಸಿ ಮಕ್ಕಳ ಜೊತೆಗೆ ಅನುಚಿತ ವರ್ತನೆ, ಕಾಮುಕ ಶಿಕ್ಷಕ ಅಮಾನತು

By Gowthami K  |  First Published Jun 16, 2023, 11:22 PM IST

ಶಾಲೆಯಲ್ಲಿ ಪಾಠ ಮಾಡದೇ ಮೈಗಳ್ಳತನ ಮಾಡೋ ಈ ಶಿಕ್ಷಕ ತನ್ನ ಮನೆಯಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳೋ ನೆಪದಲ್ಲಿ ಕರೆಸಿ ಮಾನಸಿಕ ಕಿರುಕುಳ ಜೊತೆಗೆ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತಿಸಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್ ಸುವರ್ಣನ್ಯೂಸ್

ಬಳ್ಳಾರಿ (ಜೂ.16): ಆ ಶಿಕ್ಷಕ ಮಕ್ಕಳಿಗೆ ಪಾಠ ಮಾಡಿ ಮಕ್ಕಳನ್ನು ಸರಿದಾರಿಗೆ ತರಬೇಕಾದ ಜವಾಬ್ದಾರಿ ಹೊತ್ತಿರವವನು. ಆದ್ರೆ, ಆತ ಮಾಡಿರೋ ಕೆಲಸ ನೋಡಿದ್ರೇ ಇಡೀ ಶಿಕ್ಷಕರ ಸಮೂಹವೇ ತಲೆ ತಗ್ಗಿಸುವಂತೆ ಮಾಡಿದ್ದಾನೆ. ಶಾಲೆಯಲ್ಲಿ ಪಾಠ ಮಾಡದೇ ಮೈಗಳ್ಳತನ ಮಾಡೋ ಈ ಶಿಕ್ಷಕ ತನ್ನ ಮನೆಯಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳೋ ನೆಪದಲ್ಲಿ ಕರೆಸಿ ಮಾನಸಿಕ ಕಿರುಕುಳ ನೀಡೋದ್ರ ಜೊತೆಗೆ ವಿದ್ಯಾರ್ಥಿನಿಯರ ಜೊತೆಗೆ ಅನುಚಿತವಾಗಿ ವರ್ತಿಸುತ್ತಿದ್ದನು. ಇಂತಹ ಶಿಕ್ಷಕನ ವಿರುದ್ಧ  ವಿದ್ಯಾರ್ಥಿ ನಿಯರೇ ದೂರು ನೀಡಿ ಅಮಾನತು ಮಾಡಿಸಿರೋ ಘಟನೆ ಕುರುಗೋಡು ತಾಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.  ಕೃಷ್ಣಮೂರ್ತಿ ಎನ್ನುವ ಶಿಕ್ಷಕನ ಕರ್ಮಕಾಂಡದಿಂದ ಬೇಸತ್ತ ಮಕ್ಕಳು ಸದ್ದಿಲ್ಲದೇ ಎಎಸ್‌ಡಿಎಂಸಿ ಸದಸ್ಯರ ಮೂಲಕ ದೂರನ್ನು ನೀಡೋ ಮೂಲಕ ಶಿಕ್ಷಕನ್ನು ಅಮಾನತು ಮಾಡಿಸಿದ್ದಾರೆ.

Latest Videos

undefined

ಮನೆಗೆಲಸ ಮಾಡಿಸೋದು ಮಾಡದೇ ಇದ್ರೆ ಬೈಯುವುದು ಹೊಡೆಯುವದು. ಇನ್ನೂ ಶಾಲೆಗಳ ಪ್ರಾರಂಭವಾಗಿ ಒಂದು ತಿಂಗಳು ಕೂಡ ಸರಿಯಾಗಿ ಆಗಿಲ್ಲ. ಅಷ್ಟರಲ್ಲೇ ಈ ಶಿಕ್ಷಕ ಇಂತಹದ್ದೊಂದು ಕೆಲಸ ಮಾಡೋ ಮೂಲಕ ಇಡೀ ಗ್ರಾಮದ ಜನರಿಂದಲೇ ಛೀಮಾರಿ ಹಾಕಿಸಿಕೊಂಡಿದ್ದಾನೆ. ಕಳೆದ ಮೂರು ನಾಲ್ಕು ವರ್ಷದಿಂದ ಇದೇ ಶಾಲೆಯಲ್ಲಿ ಕೆಲಸ ಮಾಡ್ತಿದ್ದ ಶಿಕ್ಷಕ ಕೃಷ್ಣಮೂರ್ತಿ ಕಳೆದ ವರ್ಷವಷ್ಟೇ ಯಲ್ಲಾಪುರ ಗ್ರಾಮದಲ್ಲಿ ಮನೆ ಮಾಡಿದ್ದನು. ಶಾಲೆ ರಜೆ ಇರೋ ವೇಳೆ ಕೃಷ್ಣಮೂರ್ತಿ ಶಾಲಾ ಬಾಲಕಿಯರನ್ನು ಮನೆಗೆಲಸಕ್ಕೆ ಕರೆಸಿಕೊಳ್ಳುತ್ತಿದ್ದನು. ಆದ್ರೆ ಇದೆಲ್ಲಾ ಹಳ್ಳಿ ಶಾಲೆಗಳಲ್ಲಿ ಮಾಮೂಲಿ. ಹೀಗಾಗಿ ಪೋಷಕರಿಗೂ ಈ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ.

ಬೇಡಿಕೆ ಕಳೆ​ದು​ಕೊಂಡ ಶಿಕ್ಷಣ ಹಕ್ಕು ಕಾಯಿದೆ: ಬದ​ಲಾದ ನಿಯ​ಮ​ದಿಂದಾಗಿ ಸೀಟು ಕೇಳು​ವ​ವರೇ ಇಲ್ಲ!

ಇನ್ನು ಶಾಲೆ ಪ್ರಾರಂಭವಾದ ಬಳಿಕ‌ ಸರಿಯಾಗಿ ಪಾಠ ಮಾಡುತ್ತಿರಲಿಲ್ಲ. ವಿದ್ಯಾರ್ಥಿಗಳು ಏನಾದರೂ ಕೇಳಿದ್ರೇ ಮನೆಗೆ ಬನ್ನಿ ಅಲ್ಲಿ‌ ನಿಮಗೆ ಟ್ಯೂಷನ್ ಹೇಳಿ‌ಕೊಡ್ತೇನೆ ಅಲ್ಲಿಯೇ ನಿಮಗೆ ಪಾಠ ಮಾಡೋದಾಗಿ ಹೇಳುತ್ತಿದ್ದನಂತೆ. ಆದ್ರೇ, ವಿದ್ಯಾರ್ಥಿನಿಯರು ಮನೆಗೆ ಬಂದಾಗ ಮನೆಗೆಲಸ ಮಾಡಿಸೋ ನೆಪದಲ್ಲಿ ಹೊಡೆಯುವದು ಬೈಯುವದು ಸೇರಿದಂತೆ ಮಾನಸಿಕ ಹಿಂಸೆ ನೀಡಿ ಅನುಚಿತವಾಗಿ ವರ್ತನೆ ಮಾಡುತ್ತಿದ್ದನು. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು ಅನುಚಿತ ವರ್ತನೆ ಬಗ್ಗೆ ಪೋಷಕರಿಗೆ ಮೊದಲು ತಿಳಿಸಿದ್ದಾರೆ ಬಳಿಕ ಎಸ್ಡಿಎಂಸಿ ಸದಸ್ಯರಿಗೆ ತಿಳಿಸಿ ಅಲ್ಲಿಂದ  ಕುರುಗೋಡು ಬಿಇಓ ಅವರಿಗೆ ದೂರನ್ನು ನೀಡಿದ್ದಾರೆ.

ಟೆಸ್ಟ್ ಬರೆಯುವಾಗ ವಿದ್ಯಾರ್ಥಿನಿ ಮೇಲೆ ಗಂಭೀರ ಹಲ್ಲೆ, ಚಿಕ್ಕಮಗಳೂರು ಕಾಲೇಜಿನ

ಪ್ರಕರಣ ಗಂಭೀರ ವಾಗ್ತಿದ್ದಂತೆ ಅಮಾನತು ಮಾಡಿದ ಶಿಕ್ಷಣ ಇಲಾಖೆ
ಮಕ್ಕಳಿಂದ ಪೋಷಕರು, ಅಲ್ಲಿಂದ ಎಸ್ಡಿಎಂಸಿ ಸದಸ್ಯರು ಸೇರಿದಂತೆ ವಿಷಯ ಎಲ್ಲೇಡೆ ಹರಡುತ್ತಿದ್ದಂತೆ ಎಚ್ಚತ್ತ   ಡಿಡಿಪಿಐ ಅಂದಾನಪ್ಪ ವಡಿಗೇರಿ ಮೊದಲು ತನಿಖೆ ಮಾಡಿಸಿದ್ದಾರೆ. ಪ್ರಕರಣ‌ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ   ಶಿಕ್ಷಕ ಕೃಷ್ಣಮೂರ್ತಿ ಅಮಾನತು ಮಾಡಿದ್ದಾರೆ. ಈ ಎಲ್ಲಾ ಘಟನೆಯಿಂದ ಶಾಲೆಯ ಮತ್ತು ಗ್ರಾಮದಲ್ಲಿನ ವಾತಾವರಣ ಒಂದಷ್ಟು ದಿನ ಕಲುಷಿತಗೊಂಡಿತ್ತು. ಆದರೆ ಸದ್ಯ ಉಳಿದ ಶಿಕ್ಷಕರು ಧೈರ್ಯ ತುಂಬೋ ಮೂಲಕ ಮಕ್ಕಳು ಎಂದಿನಂತೆ ಶಾಲೆಗೆ ಬರುತ್ತಿದ್ದಾರೆ.

click me!