ಲಿಫ್ಟ್ ಜೊತೆ ಆಟ ಬೇಡ : ಲಿಫ್ಟ್‌ನಲ್ಲಿ ಸಿಲುಕಿ ಟೀಚರ್ ಸಾವು

By Anusha Kb  |  First Published Sep 18, 2022, 11:52 AM IST

ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ವಾಣಿಜ್ಯನಗರಿ ಮುಂಬೈನಲ್ಲಿ ನಡೆದಿದೆ. ಮುಂಬೈನ ವೆಸ್ಟ್ ಮಲ್ನಾಡ್  (West Malad) ಸಮೀಪದ ಸೇಂಟ್ ಮೆರಿಸ್ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಈ ಅನಾಹುತ ನಡೆದಿದೆ.


ಮುಂಬೈ: ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಲಿಫ್ಟ್‌ನಲ್ಲಿ ಸಿಲುಕಿ ಸಾವನ್ನಪ್ಪಿದ ಆಘಾತಕಾರಿ ಘಟನೆ ವಾಣಿಜ್ಯನಗರಿ ಮುಂಬೈನಲ್ಲಿ ನಡೆದಿದೆ. ಮುಂಬೈನ ವೆಸ್ಟ್ ಮಲ್ನಾಡ್  (West Malad) ಸಮೀಪದ ಸೇಂಟ್ ಮೆರಿಸ್ ಆಂಗ್ಲ ಮಾಧ್ಯಮಿಕ ಶಾಲೆಯಲ್ಲಿ ಈ ಅನಾಹುತ ನಡೆದಿದೆ. ಮೃತ ಶಿಕ್ಷಕಿಯನ್ನು 26 ವರ್ಷದ ಗಿನೆಲ್ ಫರ್ನಾಂಡಿಸ್ (Ginel Fernandez) ಎಂದು ಗುರುತಿಸಲಾಗಿದೆ. ಶುಕ್ರವಾರ (ಸೆ.16) ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 

ಶಿಕ್ಷಕಿ ಗಿನೆಲ್ ಲಿಫ್ಟ್‌ಗೆ ಸಂಪೂರ್ಣವಗಿ ಪ್ರವೇಶಿಸುವುದಕ್ಕೂ ಮೊದಲೇ ಲಿಫ್ಟ್ ಬಾಗಿಲು (Lift door)ಹಾಕಿಕೊಂಡಿದೆ. ಪರಿಣಾಮ ಗಿನೆಲ್ ಕಾಲು ಲಿಫ್ಟ್ ಒಳಗಡೆ ದೇಹ ಸಂಪೂರ್ಣ ಹೊರಗಡೆ ಬಾಕಿಯಾಗಿದೆ. ಅಲ್ಲದೇ ಮುಂದೆ 7ನೇ ಮಹಡಿಗೆ ಲಿಫ್ಟ್‌ ಸಾಗಿದ್ದು, ಈಕೆಯನ್ನು ಜೊತೆಗೆ ಎಳೆದೊಯ್ದಿದೆ. ಪರಿಣಾಮ ಲಿಫ್ಟ್‌ಗೆ ಸಿಲುಕಿ ಗಿನೆಲ್ ದೇಹ ನಜ್ಜುಗುಜ್ಜಾಗಿದೆ. ಮಧ್ಯಾಹ್ನ 1 ರಿಂದ ಎರಡು ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದೆ. ಪ್ರಾಥಮಿಕ ಶಾಲೆ ಟೀಚರ್ ಆಗಿದ್ದ ಗಿನೆಲ್ ಕಟ್ಟಡದ 6ನೇ ಮಹಡಿಯಲ್ಲಿ ತರಗತಿ ಮುಗಿಸಿ 2ನೇ ಮಹಡಿಯಲ್ಲಿರುವ ಸ್ಟಾಪ್ ರೂಮ್‌ಗೆ (Staff RoomO) ಬರಲು ಲಿಫ್ಟ್ ಬಳಿ ಸಮೀಪಿಸಿದ್ದರು. ಈ ವೇಳೆ ಅನಾಹುತ ಸಂಭವಿಸಿದ್ದು, ಲಿಫ್ಟ್ ಅವರನ್ನು 7ನೇ ಮಹಡಿಗೆ ಎಳೆದೊಯ್ದಿದೆ. 

Tap to resize

Latest Videos

ಲಿಫ್ಟ್ ಹಾಗೂ ಗೋಡೆ ಮಧ್ಯೆ ಸಿಲುಕಿದಾಗ ಜೋರಾಗಿ ಬೊಬ್ಬೆ ಹೊಡೆದ ಅವರ ಬಳಿಗೆ ಶಾಲಾ ಶಿಕ್ಷಕರು, ಮಕ್ಕಳು (students) ಹಾಗೂ ಇತರ ಸಿಬ್ಬಂದಿ ಧಾವಿಸಿ ಬಂದಿದ್ದಾರೆ. ಅಲ್ಲದೇ ಕೂಡಲೇ ಆಕೆಯನ್ನು ಸಮೀಪದ ಲೈಫ್‌ಲೈನ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ಬರುವ ವೇಳೆಗಾಗಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆಸ್ಪತ್ರೆಯಲ್ಲಿ ವೈದ್ಯರು ಘೋಷಿಸಿದ್ದಾರೆ. ಘಟನೆ ಬಗ್ಗೆ ಅಸಹಜ ಸಾವು ಪ್ರಕರಣ ದಾಖಲಿಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಿನೆಲ್ ಫರ್ನಾಂಡಿಸ್ ಸಹಾಯಕ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಝೋಮ್ಯಾಟೋ ಡೆಲಿವರಿ ಬಾಯ್‌ ಖಾಸಗಿ ಅಂಗ ಕಚ್ಚಿದ ಜರ್ಮನ್ ಶೆಫರ್ಡ್ ಶ್ವಾನ: ಭಯಾನಕ ವಿಡಿಯೋ


ಕೆಲದಿನಗಳ ಹಿಂದಷ್ಟೇ ನಿರ್ಮಾಣ ಹಂತದ ಕಟ್ಟಡದ ಲಿಫ್ಟ್‌  ಕುಸಿದು 8 ಜನ ಕಾರ್ಮಿಕರು ದಾರುಣವಾಗಿ ಸಾವಿಗೀಡಾದ ಘಟನೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದಿತ್ತು. ಬಹುಮಹಡಿ ಕಟ್ಟಡದಲ್ಲಿದ್ದ ತಾತ್ಕಾಲಿಕ ಲಿಫ್ಟ್ ಕಾರ್ಮಿಕರನ್ನು ಮೇಲೆ ಕರೆದೊಯ್ಯುತ್ತಿದ್ದು 7 ನೇ ಮಹಡಿಗೆ ತಲುಪಿದಾಗ ಅಲ್ಲೇ ಸ್ಥಗಿತಗೊಂಡು ಅಲ್ಲಿಂದ ಕೆಳಗೆ ಬಿದ್ದಿದೆ. ಪರಿಣಾಮ 8 ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗುಜರಾತ್ ವಿಶ್ವವಿದ್ಯಾನಿಲಯದ ಸಮೀಪದಲ್ಲಿ  ಈ ಅವಘಡ ಸಂಭವಿಸಿತ್ತು. ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ 7ನೇ ಮಹಡಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಲಿಫ್ಟ್‌  ಸ್ಥಗಿತಗೊಂಡ ವೇಳೆ ಇದರಲ್ಲಿ ಎಂಟು ಜನ ಕಾರ್ಮಿಕರು ಇದ್ದರು. ಇವರು ಜೊತೆಯಲ್ಲಿ ಕಟ್ಟಡ ನಿರ್ಮಾಣದ ಹಲವು ವಸ್ತುಗಳನ್ನು ಲಿಫ್ಟ್‌ನಲ್ಲಿ ತೆಗೆದುಕೊಂಡು ಹೋಗುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಮಹೇಂದ್ರ (Mahedra) ಎಂಬುವವರು ಹೇಳಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೆಲ್ಲರೂ ಪಂಚಮಾಲಾ ಜಿಲ್ಲೆಗೆ ಸೇರಿದವರು ಎಂದು ಅವರು ಹೇಳಿದ್ದಾರೆ. 

ಲಿಫ್ಟ್‌ನಲ್ಲಿ ಬಾಲಕನನ್ನು ಕಚ್ಚಿದ ನಾಯಿ, ಹೃದಯವೇ ಇಲ್ಲದ ಕಟುಕಿಯಂತೆ ನಿಂತಿದ್ಲು ಮಹಿಳೆ !

ಘಟನೆ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅಹ್ಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಅಧಿಕಾರಿಗಳು ಹೇಳಿದ್ದಾರೆ. ಆದರೆ ಈ ಘಟನೆಗೆ ಸಂಬಂಧಿಸಿದಂತೆ ಅಹ್ಮದಾಬಾದ್‌ನ ಮುನ್ಸಿಪಲ್ ಕಾರ್ಪೋರೇಷನ್‌ನ ಅಗ್ನಿ ಶಾಮಕ ಹಾಗೂ ತುರ್ತು ಸೇವಾ ವಿಭಾಗಕ್ಕೆ ಯಾವುದೇ ಕರೆ ಬಂದಿಲ್ಲ ಎಂದು ಹೇಳಿದೆ. ಹೀಗಾಗಿ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಅವಘಡ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ತಂಡ (fire and police team ) ತಡವಾಗಿ ಭೇಟಿ ನೀಡಿದೆ. 

click me!