ತಾನು ಎಚ್‌ಐವಿ ಪಾಸಿಟಿವ್ ಎಂದು ಪತ್ತೆ ಹಚ್ಚಿರುವುದಾಗಿ ಮನೋಜ್ ಸಾಹ್ನಿ ಒಪ್ಪಿಕೊಂಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬೈ (ಜೂನ್ 9, 2023): ಮುಂಬೈನ ಮೀರಾ ರೋಡ್ ಮರ್ಡರ್ ಕೇಸ್ ದೇಶದ ಅನೇಕರನ್ನು ಬೆಚ್ಚಿ ಬೀಳಿಸಿದೆ. ಕೊಲೆ ಆರೋಪಿ ಮನೋಜ್ ಸಾಹ್ನಿ ಆಘಾತಕಾರಿ ತಪ್ಪೊಪ್ಪಿಗೆ ನೀಡಿದ್ದು, ಇದು ಪೊಲೀಸ್ ಅಧಿಕಾರಿಗಳನ್ನು ಬೆಚ್ಚಿಬೀಳಿಸಿದೆ. ತಾನು ಎಚ್‌ಐವಿ ಪಾಸಿಟಿವ್ ಎಂದು ಹೇಳಿರುವ ಈತ, ತಾನು ಸರಸ್ವತಿ ವೈದ್ಯಳನ್ನು ಮಗಳಂತೆ ಪರಿಗಣಿಸುತ್ತೇನೆ ಎಂದೂ ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯ ವೇಳೆ 2008ರಲ್ಲಿ ತಾನು ಎಚ್‌ಐವಿ ಪಾಸಿಟಿವ್ ಎಂದು ಪತ್ತೆ ಹಚ್ಚಿರುವುದಾಗಿ ಮನೋಜ್ ಸಾಹ್ನಿ ಒಪ್ಪಿಕೊಂಡಿದ್ದಾರೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಂದಿನಿಂದ, ಔಷಧಿ ತೆಗೆದುಕೊಳ್ಳುತ್ತಿರುವುದಾಗಿಯೂ ಹೇಳಿದ್ದಾರೆ.
ಇದನ್ನು ಓದಿ: ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್ ಹಂತಕನೇ ಇವನಿಗೆ ಸ್ಪೂರ್ತಿ!
ಅಪಘಾತಕ್ಕೆ ಒಳಗಾದ ನಂತರ ಬಹಳ ಹಿಂದೆಯೇ ತಮ್ಮ ಚಿಕಿತ್ಸೆಯ ಸಮಯದಲ್ಲಿ ಸೋಂಕಿತ ರಕ್ತವನ್ನು ಬಳಸಿದ್ದರಿಂದ ತಾನು ರೋಗಕ್ಕೆ ತುತ್ತಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮನೋಜ್ ಸಾಹ್ನಿ ಅವರ 5 ಆಘಾತಕಾರಿ ತಪ್ಪೊಪ್ಪಿಗೆಗಳು ಹೀಗಿದೆ.. ಅದು ಇಡೀ ರಾಷ್ಟ್ರವನ್ನು ನಂಬಲಾಗದಷ್ಟು ಗೊಂದಲಕ್ಕೀಡು ಮಾಡಿದೆ.
ಇದನ್ನೂ ಓದಿ: ಸಂಗಾತಿಯನ್ನು ಬರ್ಬರ ಹತ್ಯೆ ಮಾಡಿ 20ಕ್ಕೂ ಹೆಚ್ಚು ತುಂಡು ತುಂಡಾಗಿ ಕತ್ತರಿಸಿದ ಪಾಪಿ: ಬೆಚ್ಚಿಬಿದ್ದ ಮುಂಬೈ
ಇನ್ನು, ತನಿಖೆ ಮುಂದುವರೆಸಿದ ಪೊಲೀಸರು, ಮಧ್ಯಮ-ವರ್ಗದ ವಸತಿ ಪ್ರದೇಶದ ಪ್ಲ್ಯಾಟ್‌ನಲ್ಲಿ ಈ ಕೋಲ್ಡ್ ಬ್ಲಡೆಡ್ ಮರ್ಡರ್ ನಡೆದಿದೆ ಎಂದು ಹೇಳಿದರು. ಮೃತಳ ದೇಹದ ಭಾಗಗಳನ್ನು ತುಂಬಿದ ಕನಿಷ್ಠ 3 ಬಕೆಟ್‌ಗಳು, ನೆಲ, ಗೋಡೆಗಳು ಮತ್ತು ಸ್ನಾನಗೃಹದ ಮೇಲೆ ಸಾಕಷ್ಟು ರಕ್ತ ಚೆಲ್ಲಿದೆ. ವಿದ್ಯುತ್ ಗರಗಸ, ಹರಿತವಾದ ಚಾಕುಗಳು, ಮಿಕ್ಸರ್-ಗ್ರೈಂಡರ್ ಮತ್ತು ಪ್ರೆಶರ್ ಕುಕ್ಕರ್, ಅಲ್ಲಿಂದ ವಾಕರಿಕೆ ಬರುವ ದುರ್ನಾತ, ಏರ್-ಫ್ರೆಶನರ್‌ಗಳನ್ನು ಸಿಂಪಡಿಸುವ ಮೂಲಕ "ಕೊಲ್ಲಲು" ಮನೋಜ್ ಸಾಹ್ನಿ ಪ್ರಯತ್ನಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ.
ಪೊಲೀಸರು ಕೆಲವು ತೈಲ ಬಾಟಲಿಗಳನ್ನು ಸಹ ವಶಪಡಿಸಿಕೊಂಡಿದ್ದು, ದುರ್ವಾಸನೆ ತಡೆಯಲು ದೇಹದ ಭಾಗಗಳಿಗೆ ಹಾಕಲು ಬಳಸುತ್ತಿದ್ದರು ಮತ್ತು ನಂತರ ರಹಸ್ಯವಾಗಿ ಅನೇಕ ತುಂಡುಗಳನ್ನು ವಿಲೇವಾರಿ ಮಾಡಿದ್ದಾರೆ ಎಂದೂ ತಿಳಿಸಿದ್ದಾರೆ. ಮಹಿಳೆಯ ದೇಹದ ಭಾಗಗಳು ಮತ್ತು ಇತರ ಪುರಾವೆಗಳ ಕುರಿತು ಫೋರೆನ್ಸಿಕ್ ವರದಿಗಳಿಗಾಗಿ ಪೊಲೀಸರು ಕಾಯುತ್ತಿದ್ದಾರೆ.
ಇದನ್ನೂ ಓದಿ: ಶ್ರದ್ಧಾ ವಾಕರ್ ಹತ್ಯೆ ಕೇಸ್: ತಾನು ನಿರಪರಾಧಿ, ವಿಚಾರಣೆ ಎದುರಿಸಲು ಸಿದ್ಧ ಎಂದ ಅಫ್ತಾಬ್ ಪೂನಾವಾಲ