ಗದಗ: ಯುವಕನ ಕತ್ತು ಸೀಳಿತು ಗಾಳಿಪಟದ ದಾರ; ಆರು ದಿನ ನರಳಿ ನರಳಿ ಪ್ರಾಣಬಿಟ್ಟ ಯುವಕ!

By Ravi JanekalFirst Published Jun 9, 2023, 3:54 PM IST
Highlights

ಗಾಳಿಪಟದ ದಾರ(ಮಾಂಜಾ) ಯುವಕನೋರ್ವನ ಕುತ್ತಿಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಗದಗ ನಗರದ ಡಂಬಳ ನಾಕಾ ಬಳಿ ನಡೆದಿದೆ.

ಗದಗ (ಜೂ.9) : ಗಾಳಿಪಟದ ದಾರ(ಮಾಂಜಾ) ಯುವಕನೋರ್ವನ ಕುತ್ತಿಗೆ ಸಿಲುಕಿ ಸಾವನ್ನಪ್ಪಿರುವ ದುರ್ಘಟನೆ ಗದಗ ನಗರದ ಡಂಬಳ ನಾಕಾ ಬಳಿ ನಡೆದಿದೆ.

ಪಿ ರವಿ ಮೃತ ದುರ್ದೈವಿ. ಆರು ದಿನಗಳ ಹಿಂದೆ ಗಾಳಿಪಟದ ದಾರ ಸಿಲುಕಿ ಕುತ್ತಿಗೆ ಸೀಳಿಹೋಗಿತ್ತು. ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆರುದಿನಗಳಿಂದ ಸಾವುಬದುಕಿನೊಂದಿಗೆ ಹೋರಾಟ ನಡೆಸಿದ್ದ ರವಿ. ಆದರೆ ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ನಾರಾಯಣ ದೇವರಕೆರೆ ನಿವಾಸಿಯಾಗಿರುವ ರವಿ. ಗದಗ ನಗರದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಕಳೆದ ಭಾನುವಾರ ಬೈಕ್ ಮೇಲೆ ಹೋಗುವಾಗ ಅಡ್ಡಲಾಗಿದ್ದ ಗಾಳಿಪಟದ ಮಾಂಜಾ ದಾರ ಕತ್ತಿಗೆ ಸಿಲುಕಿದೆ. ಬೈಕ್ ವೇಗಕ್ಕೆ ಯುವಕನ ಕತ್ತು ಸೀಳಿರುವ ದಾರ

ಗಾಳಿಪಟದ‌ ಮಾಂಜಾ ದಾರ ಕುತ್ತಿಗೆಗೆ ಸಿಲುಕಿ 6 ವರ್ಷದ ಬಾಲಕ ಸಾವು!

 

ಕಾರ ಹುಣ್ಣಿಮೆಯೆಂದು ಅವಳಿನಗರದಲ್ಲಿ ಗಾಳಿಪಟ ಹಾರಾಟ ನಡೆಸಲಾಗಿತ್ತು. ಹೀಗಾಗಿ ಎಲ್ಲೆಂದರಲ್ಲೇ ಗಾಳಿಪಟದ ದಾರಗಳು ಸಿಲುಕಿವೆ. ಇದನ್ನು ಗಮನಿಸದೇ ಬೈಕ್‌ಮೇಲೆ ಹೋಗಿದ್ದ ಯುವಕ ರವಿ ದಾರಕ್ಕೆ ಸಿಲುಕಿ ಸಾವು. ಮಗನನ್ನು ಕಳೆದುಕೊಂಡು ಕಣ್ಣೀರು ಹಾಕಿದ ತಾಯಿ.

ಗಾಳಿಪಟದ ದಾರಕ್ಕೆ ಅಮಾಯಕ ಯುವಕ ಬಲಿಯಾಗಿದೆ. ಡೇಂಜರ್ ಮಾಂಝಾ ದಾರ ನಿಷೇಧ ಮಾಡಿದ್ರೂ ನಿಂತಿಲ್ಲ ಮಾರಾಟ. ಅವಳಿ ನಗರದಲ್ಲಿ ಗಾಳಿಪಟಗಳ ಭರ್ಜರಿ‌ ಮಾರಾಟ. ಮಕ್ಕಳು ಎಲ್ಲೆಂದಲ್ಲೇ ಗಾಳಿಪಟ ಹಾರಿಸಿ ಬಿಸಾಡುತ್ತಿದ್ದಾರೆ. ತುಂಡಾದ ದಾರಗಳು ರಸ್ತೆಗಳಿಗೆ ಮರಗಳಿಗೆ ಅಡ್ಡಲಾಗಿ ವಾಹನ ಸವಾರರ ಕತ್ತು ಸೀಳುತ್ತಿವೆ..

ಗದಗ ಶಹರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ.

click me!