ಸಾರ್ವಜನಿಕರೆದುರೇ ಚಾಕು ಇರಿತ: ಮಹಿಳೆ ಕೂಗಿಕೊಂಡ್ರೂ ಯಾರೂ ಸಹಾಯಕ್ಕೆ ಬರಲಿಲ್ಲ; ವಿಡಿಯೋ ಸೆರೆ..!

Published : Jun 09, 2023, 03:28 PM IST
ಸಾರ್ವಜನಿಕರೆದುರೇ ಚಾಕು ಇರಿತ: ಮಹಿಳೆ ಕೂಗಿಕೊಂಡ್ರೂ ಯಾರೂ ಸಹಾಯಕ್ಕೆ ಬರಲಿಲ್ಲ; ವಿಡಿಯೋ ಸೆರೆ..!

ಸಾರಾಂಶ

ಈಶಾನ್ಯ ದೆಹಲಿಯಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬನ ಮೇಲೆ ಸಾರ್ವಜನಿಕವಾಗಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಸ್ಥಳದಲ್ಲಿದ್ದವರು ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಸಹಾಯ ಮಾಡಲಿಲ್ಲ ಎಂದು ತಿಳಿದುಬಂದಿದೆ.

ನವದೆಹಲಿ (ಜೂನ್ 9, 2023): ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ಗರ್ಲ್‌ಫ್ರೆಂಡ್‌ ಅನ್ನು ಬರ್ಬರವಾಗಿ ಚಾಕು ಇರಿದು, ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಲಾಗಿತ್ತು. ಇದು ಸಿಸಿ ಕ್ಯಾಮೆರಾದಲ್ಲೂ ಸೆರೆಯಾಗಿತ್ತು. ಈಗ ಮತ್ತೆ ಘಟನೆಯೊಂದು ವಿಡಿಯೋದಲ್ಲಿ ಸೆರೆಯಾಗಿದೆ. ಅದರೆ, ಇದು ವೈಯಕ್ತಿಕ ದ್ವೇಷ ಎನ್ನಲಾಗಿದ್ದು, ಪುರುಷ ಮತ್ತೊಬ್ಬ ಪುರುಷನಿಗೆ ಚಾಕುವಿನಿಂದ ಇರಿದಿದ್ದಾನೆ.

ಈಶಾನ್ಯ ದೆಹಲಿಯಲ್ಲಿ ಗುರುವಾರ ರಾತ್ರಿ ವ್ಯಕ್ತಿಯೊಬ್ಬನ ಮೇಲೆ ಸಾರ್ವಜನಿಕವಾಗಿ ಅಮಾನುಷವಾಗಿ ಹಲ್ಲೆ ನಡೆಸಲಾಗಿದ್ದು, ಸ್ಥಳದಲ್ಲಿದ್ದವರು ತೀವ್ರ ಗಾಯಗೊಂಡಿದ್ದ ವ್ಯಕ್ತಿಗೆ ಸಹಾಯ ಮಾಡಲಿಲ್ಲ ಎಂದು ತಿಳಿದುಬಂದಿದೆ. ನಂದ್ ನಾಗ್ರಿ ಎಂಬ ಪ್ರದೇಶದಲ್ಲಿ ವೈರಲ್‌ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಮುಖಾಮುಖಿಯಾಗಿ ಮತ್ತು ಚಲನೆಯಿಲ್ಲದೆ ಮಲಗಿರುವುದನ್ನು ತೋರಿಸಿದೆ.

ಇದನ್ನು ಓದಿ: ಅಪ್ರಾಪ್ತ ಬಾಲಕಿ ರೇಪ್‌ ಮಾಡಿ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹಾಕಿದ ಗಾಯಕನ ಬಂಧನ

ಅಲ್ಲದೆ, ದಾಳಿಕೋರನು ವಿಡಿಯೋ ಕ್ಲಿಪ್‌ನಲ್ಲಿ ಗೋಚರಿಸದ ಯಾರೋ ಒಬ್ಬರ ಮೇಲೆ ದೊಡ್ಡ ಚಾಕುವನ್ನು ತೋರಿಸಿ ಬೆದರಿಸುತ್ತಿದ್ದನು. ನಂತರ ಅವನು ಕೆಳಗೆ ಬಿದ್ದಿದ್ದ ವ್ಯಕ್ತಿಗೆ ಬಲವಂತವಾಗಿ  ತನ್ನ ಎಡ ಮೊಣಕೈಗೆ ಚಾಕುವಿನಿಂದ ಹೊಡೆಯುತ್ತಾನೆ. ದಾಳಿಕೋರನು ನಂತರ ಸ್ಥಳದಿಂದ ಕಾಲ್ಕಿತ್ತಿದ್ದಾನೆ, ಆದರೆ ನೋಡುಗರು ಮಧ್ಯಪ್ರವೇಶಿಸಲು ಅಥವಾ ಕೆಳಗೆ ಬಿದ್ದಿದ್ದ ವ್ಯಕ್ತಿಗೆ ಸಹಾಯ ಮಾಡಲು ಯಾರೂ ಪ್ರಯತ್ನ ಮಾಡುವುದಿಲ್ಲ ಎಂದೂ ವಿಡಿಯೋದಲ್ಲಿ ತಿಳಿಯುತ್ತದೆ.

ನಂತರ ಒಬ್ಬರು ಮಹಿಳೆ ಆ ವ್ಯಕ್ತಿಯ ಬಳಿಗೆ ಧಾವಿಸುತ್ತಿರುವುದನ್ನು ಕಾಣಬಹುದು, ಅಲ್ಲದೆ, ಅವನನ್ನು ಹಿಡಿದುಕೊಂಡು ತನ್ನ ಮಗ ಕೊಲ್ಲಲ್ಪಟ್ಟಿದ್ದಾನೆ ಎಂದು ಪದೇ ಪದೇ ಕಿರುಚಿದರೂ ಯಾರೂ ಸಹಾಯಕ್ಕೆ ಬರಲಿಲ್ಲ ಎಂದೂ ತಿಳಿದುಬಂದಿದೆ. ರಾತ್ರಿ 10: 30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದೂ ತಿಳಿದುಬಂದಿದೆ.

ಇದನ್ನೂ ಓದಿ: ಅಪ್ರಾಪ್ತ ಬಾಲಕಿ ಮೇಲೆ ಹಲವು ಬಾರಿ ಗ್ಯಾಂಗ್‌ ರೇಪ್‌: ಕೃತ್ಯ ಸೆರೆ ಹಿಡಿದು ಕಾಮುಕರ ಬ್ಲ್ಯಾಕ್‌ಮೇಲ್‌

ತೀವ್ರ ಗಾಯಗೊಂಡಿದ್ದ ವ್ಯಕ್ತಿಯನ್ನು ಖಾಸಿಂ ಎಂದು ಗುರುತಿಸಲಾಗಿದ್ದು, ಬಳಿಕ ಅವರನ್ನು ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್‌) ಗೆ ರವಾನಿಸಲಾಗಿದ್ದು, ಅಲ್ಲಿ ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ. ದಾಳಿಕೋರ ಶೋಯೆಬ್ ಅದೇ ಪ್ರದೇಶದಲ್ಲಿ ವಾಸವಾಗಿದ್ದು, ಇಬ್ಬರ ನಡುವೆ ಹಳೆ ವೈಷಮ್ಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಇಬ್ಬರೂ ಜಗಳವಾಡಿದಾಗ ಖಾಸಿಂ ಶೋಯೆಬ್‌ನ ಮುಖಕ್ಕೆ ಹೊಡೆದು, ಮೂಗು ವಿರೂಪಗೊಳಿಸಿದ್ದ ಮತ್ತು ಅವನ ಕಣ್ಣುಗಳಿಗೆ ಹಾನಿ ಮಾಡಿದ್ದಾನೆ ಎಂದೂ ತಿಳಿದುಬಂದಿದೆ.

ಅಂದಿನಿಂದ ಶೋಯೆಬ್ ದ್ವೇಷ ಸಾಧಿಸಿ ನಿನ್ನೆ ರಾತ್ರಿ ಸೇಡು ತೀರಿಸಿಕೊಳ್ಳಲು ಯತ್ನಿಸಿದ್ದ. ಕೊಲೆ ಯತ್ನದ ಆರೋಪದ ಮೇಲೆ ಪೊಲೀಸರು ಸದ್ಯ ಆತನನ್ನು ಬಂಧಿಸಿದ್ದಾರೆ.
ಘಟನೆಯ ಸಂದರ್ಭದಲ್ಲಿ, ಆರೋಪಿ ಆ ವ್ಯಕ್ತಿಗೆ ಇರಿದ ಮತ್ತು ಬೆದರಿಕೆ ಹಾಕಿದ್ದರಿಂದ ಯಾರೂ ಮಧ್ಯಪ್ರವೇಶಿಸಲು ಧೈರ್ಯ ಮಾಡಲಿಲ್ಲ. ಆದರೆ, ಆರೋಪಿ ಸ್ಥಳದಿಂದ ತೆರಳಿದ ಕೆಲವೇ ಕ್ಷಣಗಳಲ್ಲಿ ಮಹಿಳೆಯೊಬ್ಬರು ಸಹಾಯಕ್ಕಾಗಿ ಕಿರುಚುತ್ತಾ ಸಂತ್ರಸ್ತೆಯ ಬಳಿಗೆ ಧಾವಿಸಿದ್ದಾರೆ. ಆತನಿಗೆ ಸಹಾಯ ಮಾಡಲು ಅವಳು ನೋಡುಗರನ್ನು ಒಟ್ಟುಗೂಡಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾಳೆ.

ಇದನ್ನೂ ಓದಿ: ಮುಸ್ಲಿಂ ಸೋದರರ ಬಲೆಯಲ್ಲಿ ಬಿದ್ದ ಇಬ್ಬರು ಹಿಂದೂ ಸೋದರಿಯರು: ಪೋಷಕರ ವಿರೋಧಕ್ಕೆ ಬೇಸತ್ತು ಯುವತಿಯರ ಆತ್ಮಹತ್ಯೆ!

ಆಸ್ಪತ್ರೆಯ ಮೆಡಿಕೋ ಲೀಗಲ್ ಕೇಸ್ (MLC) ವರದಿಯ ಪ್ರಕಾರ, ಆ ವ್ಯಕ್ತಿಯ ಎಡಗೈ, ಎಡ ಕಾಲು ಮತ್ತು ಬಲ ಪಾದದ ಮೇಲೆ ಛೇದನದ ಗಾಯಗಳು ಮತ್ತು ಅವನ ಮುಖದ ಬಲಭಾಗದಲ್ಲಿ ಸವೆತಗಳಾಗಿವೆ. ಆತ ನಿದ್ರೆ ಮಾಡುತ್ತಿದ್ದರಿಂದ ಘಟನೆಗೆ ಸಂಬಂಧಿಸಿದಂತೆ ಹೇಳಿಕೆ ನೀಡಲು ಸಾಧ್ಯವಾಗಲಿಲ್ಲ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಸಂಗಾತಿ ಮೃತದೇಹ ತುಂಡು ತುಂಡು ಮಾಡಿ ಬೀದಿ ನಾಯಿಗೆ ಹಾಕ್ದ: ಶ್ರದ್ಧಾ ವಾಕರ್‌ ಹಂತಕನೇ ಇವನಿಗೆ ಸ್ಪೂರ್ತಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಿರ್ಜಾ ಇಸ್ಮಾಯಿಲ್ ಮೊಮ್ಮಗಳ ಹಂತಕನಿಗೆ ಜೈಲೇ ಗತಿ, ಏನಿದು ಪ್ರಕರಣ?
ಬೆಂಗಳೂರಿನ ಬಾಡಿಗೆ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆ