ಸ್ಯಾಂಟ್ರೋ ರವಿ ಪ್ರಕರಣ: ಸಿಐಡಿ ತನಿಖೆಗೆ ವಹಿಸಿದ ರಾಜ್ಯ ಸರ್ಕಾರ

By Sathish Kumar KHFirst Published Jan 16, 2023, 1:19 PM IST
Highlights

ವರ್ಗಾವಣೆ ದಂಧೆ, ಅಕ್ರಮ ವೇಶ್ಯಾವಾಟಿಕೆ ಹಾಗೂ ಪತ್ನಿಗೆ ಕಿರುಕುಳ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ ನಟೋರಿಯಸ್‌ ಆರೋಪಿ ಸ್ಯಾಂಟ್ರೋ ರವಿ ಪ್ರಕರಣವನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಗೆ ವಹಿಸಲಾಗಿದೆ. 

ಮೈಸೂರು  (ಜ.16):  ವರ್ಗಾವಣೆ ದಂಧೆ, ಅಕ್ರಮ ವೇಶ್ಯಾವಾಟಿಕೆ ಹಾಗೂ ಪತ್ನಿಗೆ ಕಿರುಕುಳ ಆರೋಪದಲ್ಲಿ ಪೊಲೀಸರ ವಶದಲ್ಲಿದ್ದ ನಟೋರಿಯಸ್‌ ಆರೋಪಿ ಸ್ಯಾಂಟ್ರೋ ರವಿ ಪ್ರಕರಣವನ್ನು ರಾಜ್ಯ ಸರ್ಕಾರ ಅಪರಾಧ ತನಿಖಾ ಇಲಾಖೆ (ಸಿಐಡಿ) ತನಿಖೆಗೆ ವಹಿಸಲಾಗಿದೆ. 

ಸ್ಯಾಂಟ್ರೋ ರವಿ ಕುರಿತ ಸಮಗ್ರ ಪ್ರಕರಣಗಳನ್ನು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ವಹಿಸಿದೆ. ಈ ಹಿನ್ನೆಲೆಯಲ್ಲಿ ಸ್ಯಾಂಟ್ರೋ ರವಿಗೆ ಮತ್ತೆ ನ್ಯಾಯಾಂಗ ಬಂಧನವಾಗಿದೆ. ಮೈಸೂರು ನ್ಯಾಯಾಲಯ ಆದೇಶ ಹೊರಡಿಸಿದೆ. ಒಮ್ಮೆ ಸಿಐಡಿಗೆ ವಹಿಸಿದ ಮೇಲೆ ಮೈಸೂರು ವಿಜಯನಗರ ಪೊಲೀಸರಿಂದ ತನಿಖೆ ಸಾಧ್ಯವಿಲ್ಲ. ಸಂಪೂರ್ಣ ಮಾಹಿತಿಯನ್ನು ವಿಜಯನಗರ ಪೊಲೀಸರು ಸಿಐಡಿಗೆ ನೀಡಲಿದ್ದಾರೆ. ಈಗಾಘಲೇ ಮೈಸೂರು ಕೋರ್ಟ್‌ ಸ್ಯಾಂಟ್ರೋ ರವಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಸಿಐಡಿ ಅಧಿಕಾರಿಗಳು ಬಂದು ವಶಕ್ಕೆ ಪಡೆಯುವವರೆಗೆ ಮಾತ್ರ ರಾಜ್ಯ ಪೊಲೀಸ್‌ ಇಲಾಖೆಯ ಸುಪರ್ದಿಯಲ್ಲಿ ಇರುತ್ತಾನೆ.

ಪಿಂಪ್‌ಗಳಿಂದ ಹಣ ಮಾಡೋದಾದ್ರೆ ಸೂಸೈಡ್‌ ಮಾಡಿಕೊಳ್ಳುವೆ: ಸಚಿವ ಅರಗ ಜ್ಞಾನೇಂದ್ರ

ಈವರೆಗೆ ಸ್ಯಾಂಟ್ರೋ ರವಿ ಬಗ್ಗೆ ಎಸಿಪಿ ಶಿವಶಂಕರ್ ಅವರಿಂದ ತನಿಖೆ ನಡೆಸಲಾಗುತ್ತಿತ್ತು. ಇಂದು ನ್ಯಾಯಾಲಯಕ್ಕೆ ಈ ಬಗ್ಗೆ ಮಾಹಿತಿ ನೀಡಿದ ಮೈಸೂರು ಪೊಲೀಸರು. ಮುಂದಿನ ತನಿಖೆಗೆ ಸಿಐಡಿ ಅಧಿಕಾರಿಗಳು ಸ್ಯಾಂಟ್ರೋ ರವಿಯನ್ನು ವಶಕ್ಕೆ ಪಡೆಯಬೇಕು. ಇದೇ ಕಾರಣಕ್ಕೆ ಸದ್ಯ ಸ್ಯಾಂಟ್ರೋ ರವಿಗೆ ನ್ಯಾಯಾಂಗ ಬಂಧನ ಮಾಡಲಾಗಿದೆ. ಸ್ಯಾಂಟ್ರೋ ರವಿ ಹಾಗೂ ಆತನಿಗೆ ಸಂಬಂಧಪಟ್ಟಂತೆ ಈವರೆಗೆ ನಡೆಸಲಾದ ಎಲ್ಲ ಮಾದರಿಯ ತನಿಖಾ ಮಾಹಿತಿಯನ್ನು ಸಿಐಡಿಗೆ ಹಸ್ತಾಂತರ ಮಾಡಲಾಗುತ್ತದೆ.

ಸಿಐಡಿ ತನಿಖೆಗೆ ವಹಿಸಲು ಸಾಧ್ಯವಿಲ್ಲ: ಸ್ಯಾಂಟ್ರೋ ರವಿ ಪರ ವಕೀಲ ಹರೀಶ್ ಪ್ರಭು ಮಾತನಾಡಿ, ಸರ್ಕಾರ ಈ ಪ್ರಕರಣವನ್ನ ಸಿಒಡಿಗೆ ವಹಿಸಲು ಬರುವುದಿಲ್ಲ. ಸಿಒಡಿಗೆ ವಹಿಸಿದರೆ ಅದರ ರದ್ಧತಿಗೆ ನಾವು ಹೈ ಕೋರ್ಟ್ ಗೆ ಹೋಗುತ್ತೇವೆ. ವಾಟ್ಸ್ ಆಪ್ ಸ್ಟೇಟಸ್ ಆಧಾರದ ಮೇಲೆ ಯಾವಾದುದಾರು ತನಿಖೆ ಸಾಧ್ಯನಾ? ಈಗ ಕೌಂಟುಂಬಿಕ ಕಲಹದ ಬಗ್ಗೆ ಮಾತ್ರ ಕೇಸ್ ದಾಖಲಾಗಿದೆ. ಉಳಿದಂತೆ ಯಾವ ಕೇಸ್ ಗಳು ದಾಖಲಾಗಿಲ್ಲ. ತಾಜ್ ಮಹಲ್ ಫೋಟೊವನ್ನ ದೇವರ ಫೋಟೊವನ್ನ ಸ್ಟೇಟಸ್ ಹಾಕಿಕೊಂಡ ಕೂಡಲೇ ಅದು ಸ್ಟೇಟಸ್ ಹಾಕಿಕೊಂಡವರ ಸ್ವಂತದು ಆಗುವುದಿಲ್ಲ. ಸರ್ಕಾರಕ್ಕೆ ಈ ಸಾಮಾನ್ಯ ಲಾಜಿಕ್ ಕೂಡ ಅರ್ಥವಾಗಿಲ್ಲ ಎಂದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ಸ್ಯಾಂಟ್ರೋ ರವಿಗೆ ಸಾಥ್‌ ನೀಡಿದ್ದ ಚೇತನ್‌ ಅರೆಸ್ಟ್: ಪೊಲೀಸರ ಕಾರ್ಯಾಚರಣೆ ಹೇಗಿತ್ತು ಗೊತ್ತಾ?

ಇನ್ನೆರಡು ದಿನದಲ್ಲಿ ಜಾಮೀನು ಅರ್ಜಿ ಸಲ್ಲಿಕೆ: ಸ್ಯಾಂಟ್ರೋ ರವಿ ವಿರುದ್ಧ ಸಿಒಡಿ ತನಿಖೆ ಮಾಡಿಸಲು ಯಾವ ನೂಜವಾದ ಗ್ರೌಂಡ್ಸ್ ಇಲ್ಲ. ಇದು ಕೌಂಟುಂಬಿಕ ಕಲಹ ಮಾತ್ರ. ಇನ್ನೆರೆಡು ದಿನದಲ್ಲಿ ಸ್ಯಾಂಟ್ರೋ ರವಿ ಗೆ ಜಾಮೀನು ಅರ್ಜಿ ಸಲ್ಲಿಸುತ್ತೇವೆ. ನಿರಿಕ್ಷೀಣಾ ಜಾಮೀನು ಅರ್ಜಿ ಈಗ ಊರ್ಜಿತ ಆಗುವುದಿಲ್ಲ. ಹೀಗಾಗಿ ಇನ್ನೆರೆಡು ದಿನ ಬಿಟ್ಟು ಈ ಪ್ರಕರಣದಲ್ಲಿ ಜಾಮೀನು ಅರ್ಜು ಸಲ್ಲಿಸುತ್ತೇವೆ. ಆದರೆ, ಸರ್ಕಾರ ಏಕಾಏಕಿ ಸಿಐಡಿ ತನಿಖೆಗೆ ಹೇಗೆ ವಹಿಸಿದೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಸ್ಯಾಂಟ್ರೋ ರವಿ ಪರ ವಕೀಲ ಹರೀಶ್ ಪ್ರಭು ಹೇಳಿದ್ದಾರೆ. 

ಜ.25 ರಂದು ಕೋರ್ಟ್‌ ಮುಂದೆ ಆರೋಪಿಗಳ ಹಾಜರು:  ಸ್ಯಾಂಟ್ರೋ ರವಿ ಪ್ರಕರಣದಲ್ಲಿ ಆರೋಪಿಗಳಿಗೆ ನ್ಯಾಯಾಂಗ ಬಂಧನ ಮುಂದುವರಿಸಲಾಗಿದೆ. ಜನವರಿ 25ರ ವರೆಗೂ ನ್ಯಾಯಾಂಗ ಬಂಧನ ಮುಂದುವರಿಕೆ ಮಾಡಲಾಗಿದೆ. ಜನವರಿ 18ಕ್ಕೆ ಜಾಮೀನು ತಕರಾರು ಅರ್ಜಿ ಸಲ್ಲಿಕೆ ಮಾಡಿ. ಜ.25 ರಂದು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕು ಎಂದು ನ್ಯಾಯಾಧೀಶರಾದ ಗುರುರಾಜ್ ಆದೇಶ ನೀಡಿದ್ದಾರೆ.

ಸ್ಯಾಂಟ್ರೋ ರವಿಯ ಬಂಧನದ ನಂತರ ಆಗಿದ್ದೇನು?: ಇಲ್ಲಿದೆ ಡಿಟೇಲ್ಸ್

ಇನ್ನು ವಕಾಲತ್ತು ದಾಖಲಿಸಿದ ಸ್ಯಾಂಟ್ರೋ ರವಿ ಪರ ವಕೀಲ ಹರೀಶ್‌ ಪ್ರಭು ಅವರು, ಸ್ಯಾಂಟ್ರೋ ರವಿ ಅವರ ಮೇಲೆ ಅತ್ಯಾಚಾರ, ಜಾತಿ ನಿಂದನೆ, ವಂಚನೆ ಆರೋಪ ಇದೆ. ವರ್ಗಾವಣೆ ಸೇರಿದಂತೆ ಬೇರಾವುದೇ ಆರೋಪಗಳಿಗೆ ಸಾಕ್ಷ್ಯಾಧಾರ ಇಲ್ಲ. ಸ್ಯಾಂಟ್ರೋ ರವಿಗೆ ಬೆದರಿಕೆಯೂ ಇದೆ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಈ ಮನವಿ ಪುರಸ್ಕರಿಸಿದ ನ್ಯಾಯಾಲಯ ಜ.18ರಂದು ತರಕಾರು ಸಲ್ಲಿಸಲು ಸರ್ಕಾರಿ ವಕೀಲರಿಗೆ ಸೂಚನೆ ನೀಡಿದೆ.

click me!