
ಬೆಂಗಳೂರು (ಜ.16): ಎರಡು ಮಕ್ಕಳ ತಾಯಿಯಾಗಿದ್ದ ಮಹಿಳೆಯು ತನ್ನೊಂದಿಗೆ ಅಕ್ರಮ ಸಂಬಂಧಕ್ಕೆ ಒಪ್ಪದ ಹಿನ್ನೆಲೆಯಲ್ಲಿ ಮಹಿಳೆಗೆ ಚಾಕು ಇರಿದು ಕೊಲೆ ಮಾಡಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಇಬ್ಬರಿಗೂ ಮದುವೆಯಾಗಿದೆ. ಇಬ್ಬರಿಗೂ ಮಕ್ಕಳು ಮೂಡ ಇದ್ದಾರೆ. ಆದರೂ, ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಶೇಕ್ ಮಹಬೂಬ್ ಎಂಬಾತ ಅನೈತಿಕ ಸಂಬಂಧ ಬೆಳೆಸಲು ಮುಂದಾಗಿದ್ದಾನೆ. ಇಲ್ಲಿ ಮುಖ್ಯವಾಗಿ ಮಹಿಳೆಗೆ ಮದುವೆಯಾಗಿ 6 ವರ್ಷಗಳಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆದರೆ, ಇತ್ತೀಚೆಗೆ ಗಂಡ ಸಾವನ್ನಪ್ಪಿದ್ದನು. ಗಂಡ ಮೃತಪಟ್ಟಿರುವ ಹಾಗೂ ಒಂಟಿ ಮಹಿಳೆ ಸಿಕ್ಕಿದ್ದಾಳೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಬೆಳೆಸಲು ಮುಂದಾಗಿದ್ದಾನೆ. ಈ ವೇಳೆ ಅನೈತಿಕ ಸಂಬಂಧ ಒಲ್ಲೆಎಂದಮಹಿಳೆಗೆ ಚಾಕುವನ್ನು ಚುಚ್ಚಿ ಕೊಲೆಗೈದಿದ್ದಾನೆ.
ಮದ್ದೂರು: ಅನೈತಿಕ ಸಂಬಂಧದ ಶಂಕೆ: ವಿಧವೆ ಕೊಲೆ, ಮಂಚದ ಸಮೇತ ಶವಕ್ಕೆ ಬೆಂಕಿ
ಬೇರೆ ಮದುವೆಯಾಗುತ್ತೇನೆ ಎಂದರೂ ಬಿಡಲಿಲ್ಲ: ಇನ್ನು ಇಬ್ಬರು ಮಕ್ಕಳು ಇದ್ದು ಒಂಟಿಯಾಗಿ ಜೀವನ ನಡೆಸುತ್ತಿದ್ದರಿಂದ ಮಹಿಳೆಯನ್ನು ಈಗಾಗಲೇ ಪುಸಲಾಯಿಸಿದ್ದ ಆಟೋಚಾಲಕ ಶೇಕ್ ಮಹಬೂಬ್ ಅನೈತಿಕ ಸಂಬಂಧವನ್ನು ಬೆಳಡೆಸಿಕೊಂಡಿದ್ದನು. ಕೆಲವು ದಿನಗಳವರೆಗೆ ಇಬ್ಬರೂ ಸಂಬಂಧವನ್ನು ಮುಂದುವರೆಸಿದ್ದಾರೆ. ಆದರೆ, ಮಹಿಳೆಗೆ ಆಕೆಯ ಮನೆಯ ಹಿರಿಯವರು ಮದುವೆ ಮಾಡುವುದಾಗಿ ತಿಳಿಸಿದ್ದಾರೆ. ಇದರಿಂದ ತನಗೆ ಸಮಾಜದಲ್ಲಿ ಗೌರವ ಸಿಗುವುದರ ಜೊತೆಗೆ ತನ್ನ ಮಕ್ಕಳಿಗೆ ಭದ್ರತೆ ಮತ್ತು ಉತ್ತಮ ಭವಿಷ್ಯವೂ ಸಿಗಲಿದೆ ಎಂದು ಸಂತಸದಿಂದ ಮಹಿಳೆಯೂ ಒಪ್ಪಿಕೊಂಡಿದ್ದಾರೆ. ಆದರೆ, ಈಗಾಗಲೇ ಅನೈತಿಕ ಸಂಬಂಧವನ್ನು ತನ್ನೊಂದಿಗೆ ಇಟ್ಟುಕೊಂಡಿದ್ದರೂ ಬೇರೊಬ್ಬನೊಂದಿಗೆ ಮದುವೆಯಾಗಲು ಬಿಡುವುದಿಲ್ಲ ಎಂದು ಜಗಳ ತೆಗೆದಿದ್ದಾನೆ. ಹೀಗೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆ ಮಾಡಿ ಪರಾರಿಯಾದ ಆರೋಪಿ: ಹಬೀಬಾ ತಾಜ್ (30) ಗೆ ಚಾಕು ಇರಿತಕ್ಕೊಳಗಾದ ಮಹಿಳೆ ಆಗಿದ್ದಾಳೆ. ಶೇಕ್ ಮೆಹಬೂಬ್ ನಿಂದ (32) ಚಾಕು ಇರಿದ ಆರೋಪಿ ಆಗಿದ್ದಾನೆ. ಈ ಘಟನೆ ಆರ್. ಟಿ. ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಟದಹಳ್ಳಿಯಲ್ಲಿ ನಡೆದಿದೆ. ಇನ್ನು ಮಹಿಳೆಯ ಮನೆಯಲ್ಲಿ ಇಬ್ಬರೂ ಗಲಾಟೆ ಮಾಡಿಕೊಳ್ಳುವಾಗ ಸಮಯ ಮಧ್ಯರಾತ್ರಿ 12 ಗಂಟೆ ಆಗಿತ್ತು. ಯಾವಾಗ ಹಬೀಬಾ ತಾಜ್ ಗೆ ಆರೋಪಿ ಶೇಕ್ ಮೆಹಬೂಬ್ ಚಾಕು ಇರಿದನೋ ರಕ್ತದ ಮಡುವಿನಲ್ಲಿ ಮಹಿಳೆ ಬಿದ್ದು ಒದ್ದಾಡಿದ್ದಾಳೆ. ನಂತರ, ನೆರೆಹೊರೆಯವರು ಆಗಮಿಸಿ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಇನ್ನು ಆರೋಪಿ ಸ್ಥಳದಿಂದ ಪರಾರಿ ಆಗಿದ್ದು, ಆತನ ಬಂಧನಕ್ಕೆ ಆರ್.ಟಿ. ನಗರ ಠಾಣೆಯ ಪೊಲೀಸರು ಬಲೆ ಬೀಸಿದ್ದಾರೆ.
Bengaluru Crime: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನ ಕೊಲೆ: ಮಕ್ಕಳಿಂದಲೇ ಜೈಲು ಸೇರಿದ ತಾಯಿ
ಅನಾಥವಾದ ಮಕ್ಕಳು: ಈಗಾಗಲೇ ತಂದೆಯನ್ನು ಕಳೆದುಕೊಂಡು ತಾಯಿಯೊಂದಿಗೆ ಬೆಳೆಯುತ್ತಿದ್ದ ಚಿಕ್ಕ ಮಕ್ಕಳಿಬ್ಬರಿಗೆ ತಂದೆ ಇಲ್ಲವೆಂಬ ಕೊರಗು ಬರದಂತೆ ತಾಯಿ ಪೋಷಣೆ ಮಾಡುತ್ತಿದ್ದರು. ಆದರೆ, ಈಗ ಕಿರಾತಕನೊಬ್ಬನ ಬಲವಂತದ ಅನೈತಿಕ ಸಂಬಂಧಕ್ಕೆ ಒಪ್ಪಿಕೊಳ್ಳದ ಹಿನ್ನೆಲೆಯಲ್ಲಿ ಅಮಾನವೀಯವಾಗಿ ಸಾವನ್ನಪ್ಪಿದ್ದಾಳೆ. ಇದರಿಂದ ತಂದೆ ಮತ್ತು ತಾಯಿ ಇಬ್ಬರನ್ನೂ ಕಳೆದುಕೊಂಡು ಮಕ್ಕಳಿಬ್ಬರು ಅನಾಥವಾಗಿದ್ದಾರೆ. ಇನ್ನು ಅಜ್ಜ- ಅಜ್ಜಿ ಸೇರದಂತೆ ಹಿರಿಯರಿದ್ದರೂ ತಂದೆ- ತಾಯಿಯಂತೆ ಪೋಷಣೆ ಮಾಡುವುದು ಸಾಧ್ಯವೇ ಎಂಬ ಅನುಮಾನ ಕಾಡುತ್ತಿದೆ. ಇನ್ನು ಆಟೋ ಚಾಲಕನ ಕುಟುಂಬವೂ ಕೂಡ ಈಗ ಬೀದಿಗೆ ಬಿದ್ದಂತಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ