ಡಾಕ್ಟರ್‌ ವೇಷ ಧರಿಸಿ ಕಳ್ಳತನ: ಆಸ್ಪತ್ರೆಯಲ್ಲಿ ರೋಗಿಯ ಚಿನ್ನದ ಸರ ಕದ್ದು ಪರಾರಿ

By Sathish Kumar KHFirst Published Jan 16, 2023, 12:26 PM IST
Highlights

ಅಶೋಕ್‌ ನಗರದ ಸೇಂಟ್‌ ಫಿಲೋಮಿನಾ ಆಸ್ಪತ್ರೆಯಲ್ಲಿ ಕಳ್ಳತನ
ವೈದ್ಯರ ವೇಷ ಧರಿಸಿ ಚಿಕಿತ್ಸೆ ಕೊಡುವುದಾಗಿ ಹೇಳಿ ಚಿನ್ನದ ಸರ ಕದ್ದ ಮಹಿಳೆ
ಚಿನ್ನದ ಒಡವೆಗಳನ್ನು ಕದ್ದು, ಕೆಲವರಿಗೆ ನಕಲಿ ಸರ ಹಾಕುತ್ತಿದ್ದ ಚಾಲಾಕಿ ಕಳ್ಳಿ
 

ಬೆಂಗಳೂರು (ಜ.16):  ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದುಡಿದು ಜೀವನ ಮಾಡಲು ಸಾವಿರಾರು ದಾರಿಗಳಿವೆ. ಆದರೂ, ದುಡಿದು ತಿನ್ನುವುದನ್ನು ಬಿಟ್ಟು ಇಲ್ಲೊಬ್ಬ ಖತರ್ನಾಕ್‌ ಮಹಿಳೆ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ವೈದ್ಯರ ವೇಷವನ್ನು ಧರಿಸಿಕೊಂಡು ಹೋಗಿ ರೋಗಿಗೆ ಚಿಕಿತ್ಸೆ ನೀಡುವುದಾಗಿ ಚಿಕಿತ್ಸಾ ಕೊಠಡಿಗೆ ತೆರಳಿ ಎಚ್ಚರವಿಲ್ಲದೆ ಮಲಗಿದ್ದ  ರೋಗಿಯ ಚಿನ್ನದ ಸರ ಮತ್ತು ಉಂಗುರವನ್ನು ಕದ್ದು ಪರಾರಿ ಆಗಿದ್ದಾಳೆ.

ನಾನಾ ವೇಷ ಧರಿಸಿ ಕಳ್ಳತನ ಮಾಡುವುದನ್ನೇ ರೂಢಿ ಮಾಡಿಕೊಂಡಿರುವ ಹಲವು ಆರೋಪಗಳಿಗೆ ಶಿಕ್ಷೆ ಆಗುವುದನ್ನು ನಾವು ಪ್ರತಿನಿತ್ಯ ನೋಡುತ್ತಿದ್ದೇವೆ. ಆದರೆ, ಇಲ್ಲೊಬ್ಬ ಚಾಲಾಕಿ ಕಳ್ಳಿ ಕಳ್ಳತನ ಮಾಡುವುದಕ್ಕಾಗಿಯೇ ಡಾಕ್ಟರ್‌ ವೇಷ ಧರಿಸಿ ಆಸ್ಪತ್ರೆಗೆ ನುಗ್ಗಿರುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗುವುದು. ಇನ್ನು ವೈದ್ಯರ ವೇಷ ಧರಿಸಿಕೊಂಡು ಹೋದ ಮಹಿಳೆ ಚಿಕಿತ್ಸಾ ಕೊಠಡಿಯ ಹೊರಗೆ ಕಾದು ಕುಳಿತಿದ್ದ ರೋಗಿಯ ಸಂಬಂಧಿಕರನ್ನು ಯಾಮಾರಿಸಿ ಚಿನ್ನದ ಒಡವೆಗಳನ್ನು ಕದ್ದು ಪರಾರಿ ಆಗಿದ್ದಾಳೆ ಎನ್ನುವುದು ಇನ್ನು ಆತಂಕಕಾರಿ ಆಗಿದೆ.

Bengaluru crime: ಕೆಲಸಕ್ಕೆ ಇದ್ದ ಮನೆಯಲ್ಲಿ 6 ತಿಂಗಳಿಂದ ಒಂದೊಂದೇ ಚಿನ್ನ ಕದ್ದ ಕಳ್ಳಿ ಪೊಲೀಸರ ಬಲೆಗೆ

ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಘಟನೆ: 
ಬೆಂಗಳೂರಿನ ಆಶೋಕ ನಗರದಲ್ಲಿರುವ ಸೇಂಟ್ ಫಿಲೋಮಿನಾ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ರಮೇಶ್ ಎಂಬುವವರು ಅವರ ತಾಯಿಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಶನಿವಾರ ಡಾಕ್ಟರ್ ಎಂದು ಹೇಳಿಕೊಂಡು ರೋಗಿ ಮಲಗಿರುವ ವಾರ್ಡ್ ಒಳಗೆ ಹೋಗಿದ್ದ ಚಾಲಾಕಿ ಕಳ್ಳಿ ನುಗ್ಗಿದ್ದಾಳೆ. ಈ ವೇಳೆ ನೀವು ಯಾವ ಡಾಕ್ಟರ್‌ ಎಂದು ರೋಗಿಯ ಸಂಬಂಧಿಕರು ಪ್ರಶ್ನೆ ಮಾಡಿದ್ದಾರೆ. ಆದರೆ, ಈ ವೇಳೆ ನಿಮ್ಮ ತಾಯಿಗೆ ಚಿಕಿತ್ಸೆ ಕೊಡಬೇಕು ಎಂದು ವಾರ್ಡ್‌ನಲ್ಲಿದ್ದ ರೋಗಿಯ ಸಂಬಂಧಿಕರನ್ನು ಹೊರಗಡೆ ಹೋಗಿ ಕಳುಹಿಸಿದ್ದಾಳೆ. ನಂತರ, ರಮೇಶ್ ತಾಯಿಯ ಕೈನಲ್ಲಿದ್ದ ಉಂಗುರ ಮತ್ತು ಕತ್ತಿನಲ್ಲಿದ್ದ 41 ಗ್ರಾಂ ಚಿನ್ನದ ಸರವನ್ನು ಕದ್ದು ಪರಾರಿ ಆಗಿದ್ದಾಳೆ.

ಅನುಮಾನ ಬರದಂತೆ ನಕಲಿ ಸರ ಹಾಕಿದ ಮಹಿಳೆ:
ಇನ್ನು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆ ಮೇಲಿದ್ದ ಒಡವೆಗಳನ್ನು ಕದ್ದ ತಕ್ಷಣವೇ ರೋಗೊಯ ಸಂಬಂಧಿಕರು ಗುರುತಿಸಿ ತನ್ನನ್ನು ಹಿಡಿದುಕೊಳ್ಳಬಹುದು ಎಂದು ಭಾವಿಸಿ, ಅಸಲಿ ಚಿನ್ನದ ಸರಗಳನ್ನು ಕದ್ದು, ನಕಲಿ ಸರವನ್ನು ರೋಗಿಯ ಕೊರಳಿಗೆ ಹಾಕಿದ್ದಾಳೆ. ಇನ್ನು ರಮೇಶ್ ಅವರ ತಾಯಿಯಲ್ಲದೆ ಬೇರೆ ವಾರ್ಡ್ ನಲ್ಲಿದ್ದ ಕೆಲವರ ಚಿನ್ನದ ಸರಗಳನ್ನೂ ಕೂಡ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.

ಗ್ರಾಹಕರ ವೇಷದಲ್ಲಿ ಚಿನ್ನ ಕದಿಯುತ್ತಿದ್ದ ಯುವಕ-ಯುವತಿ ಬಂಧನ, ಬಂಧಿತರಿಂದ ಬಂಗಾರ ವಶ!

ಪೊಲೀಸರಿಂದ ಸಿಸಿಟಿವಿ ಪರಿಶೀಲನೆ: ಈ ಕುರಿತು, ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸಿಸಿಟಿವಿಯಲ್ಲಿ ಡಾಕ್ಟರ್ ವೇಷದಲ್ಲಿರೋ ಮಹಿಳೆಯನ್ನು ಸಿಸಿಟಿವಿ ಮೂಲಕ ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಆದರೆ, ಸಿಸಿಟಿವಿಯಲ್ಲಿ ಇರುವ ವೈದ್ಯರ ವೇಷ ಧರಿಸಿದ ಮಹಿಳೆ ನಮ್ಮ ಆಸ್ಪತ್ರೆಯ ಸಿಬ್ಬಂದಿ ಅಲ್ಲವೆಂದು ಸೇಂಟ್‌ ಫಿಲೋಮಿನಾ ಆಸ್ಪತ್ರೆಯ ಆಡಳಿತ ಮಂಡಳಿ ಸಿಬ್ಬಂದಿ ತಿಳಿಸಿದ್ದಾರೆ. ಜೊತೆಗೆ, ಈ ಹಿಂದೆಯೂ ಇಂತಹ ಘಟನೆಗಳು ನಡೆದಿದ್ದು, ರೋಗಿಗಳ ಸಂಬಂಧಿಕರು ದೂರು ದಾಖಲಿಸಿರಲಿಲ್ಲ ಎಂದು ತಿಳಿದುಬಂದಿದೆ.

click me!