ದರ್ಶನ್‌ನಿಂದ ಕೊಲೆಯಾದ ಬಜರಂಗದಳ ಕಾರ್ಯಕರ್ತ ರೇಣುಕಾಸ್ವಾಮಿ ಹೆಂಡ್ತಿ 5 ತಿಂಗಳ ಗರ್ಭಿಣಿ

By Sathish Kumar KH  |  First Published Jun 11, 2024, 1:50 PM IST

ನಟ ದರ್ಶನ್‌ನಿಂದ ಕೊಲೆ ಆಗಿದ್ದಾರೆ ಎನ್ನಲಾದ ಚಿತ್ರದುರ್ಗದ ಭಜರಂಗದಳ ಕಾರ್ಯಕರ್ತ ರೇಣುಕಾಸ್ವಾಮಿಯ ಹೆಂಡತಿ 5 ತಿಂಗಳ ಗರ್ಭಿಣಿ ಆಗಿದ್ದಾಳೆ. 


ಬೆಂಗಳೂರು (ಜೂ.11): ನಟ ದರ್ಶನ್‌ನಿಂದ ಕೊಲೆ ಆಗಿದ್ದಾರೆ ಎನ್ನಲಾದ ಚಿತ್ರದುರ್ಗದ ಭಜರಂಗದಳ ಕಾರ್ಯಕರ್ತ ರೇಣುಕಾಸ್ವಾಮಿಯ ಹೆಂಡತಿ 5 ತಿಂಗಳ ಗರ್ಭಿಣಿ ಆಗಿದ್ದಾಳೆ.  ಆದರೆ, ಜೂ.28ಕ್ಕೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ಮುನ್ನವೇ ಕೊಲೆಯಾಗಿ ಬೀದಿ ಹೆಣವಾಗಿದ್ದಾನೆ.

ನಟ ದರ್ಶನ್‌ನಿಂದ ಕೊಲೆ ಆಗಿದ್ದಾನೆ ಎನ್ನಲಾದ ಚಿತ್ರದುರ್ಗ ನಗರದ ರೇಣುಕಾಸ್ವಾಮಿ ಅವರಿಗೆ ಕಳೆದ 2023ರ ಜೂನ್ ತಿಂಗಳಲ್ಲಿ ಮದುವೆ ಆಗಿದ್ದು, ಈಗ ಆತನ ಹಂಡತಿ 5 ತಿಂಗಳ ಗರ್ಭಿಣಿ ಆಗಿದ್ದಾಳೆ. ಇನ್ನು ಇದೇ ತಿಂಗಳ ಜೂ.28ರಂದು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದರು. ಜೊತೆಗೆ, ಮುಂದಿನ ನಾಲ್ಕೈದು ತಿಂಗಳಲ್ಲಿ ಒಂದು ಮಗುವಿನ ತಂದೆ ಆಗುವ ಖುಷಿಯಲ್ಲಿದ್ದನು. ಈತ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದು, ಭಜರಂಗದಳದ ಕಾರ್ಯಕರ್ತನಾಗಿದ್ದನು. ಆದರೆ, ದರ್ಶನ್ 2ನೇ ಪತ್ನಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದಾರೆಂದು, ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಿ ರಸ್ತೆ ಬದಿ ಕಸದಲ್ಲಿ ಬೀಸಾಡಲಾಗಿದೆ.

Tap to resize

Latest Videos

undefined

ಕೊಲೆ ಆರೋಪಿಗಳು ದರ್ಶನ್ ಹೆಸರು ಹೇಳಿದ್ದಕ್ಕೆ ಅರೆಸ್ಟ್ ಮಾಡಲಾಗಿದೆ; ಗೃಹ ಸಚಿವ ಪರಮೇಶ್ವರ

ಚಿತ್ರದುರ್ಗ ನಗರದಲ್ಲಿ ನಿಔರತ್ತ ಸರ್ಕಾರಿ ನೌಕರನ ಮಗನಾಗಿರುವ ರೇಣುಕಾಸ್ವಾಮಿ ಅವರದ್ದು ಕೂಡು ಕುಟುಂಬವಾಗಿದೆ. ಅಲ್ಲಿ ತಂದೆ, ತಾಯಿ, ಹೊಸದಾಗಿ ಮದುವೆಯಾದ ಹೆಂಡ್ತಿ, ಮಾಡಲಿಕ್ಕೆ ಅಪೊಲೊ ಫಾರ್ಮಸಿಯಲ್ಲಿ ಕೆಲಸ ಎಲ್ಲವೂ ಸುಸೂತ್ರವಾಗಿ ಜೀವನ ನಡೆದುಕೊಂಡು ಹೋಗುತ್ತಿತ್ತು. ಕಳೆದ 2023ರ ಜೂನ್ ತಿಂಗಳಲ್ಲಿ ರೇಣುಕಾಸ್ವಾಮಿ ಸಹನ ಎಂಬ ಯುವತಿಯನ್ನು ಮದುವೆ ಮಾಡಿಕೊಂಡಿದ್ದನು. ಇನ್ನು ಒಂದು ವರ್ಷದ ಸಂಸಾರವನ್ನು ಸುಸೂತ್ರವಾಗಿ ತೂಗಿಸಿಕೊಂಡು ಹೋಗುತ್ತಿದ್ದ ರೇಣುಕಾಸ್ವಾಮಿ ಮಾಡಿದ್ದ ಒಂದೇ ಒಂದು ಮೆಸೇಜ್ ಮರಣ ಮೃದಂಗವಾಗಿ ಮಾರ್ಪಟ್ಟಿದೆ.

ಹೌದು, ಕೊಲೆಯಾದ ರೇಣುಕಾಸ್ವಾಮಿ ಅವರ ತಂದೆ ಶಿವನಗೌಡ ಮಾತನಾಡಿ, ಶನಿವಾರ ಮಧ್ಯಾಹ್ನ ಮನೆಯಿಂದ ಹೋದವನು ವಾಪಸ್ದು ಬಂದಿಲ್ಲ. ರೇಣುಕಸ್ವಾಮಿ ಕಳೆದ ವರ್ಷ ತಾನೇ ಮದುವೆ ಆಗಿದ್ದನು. ಪತ್ನಿ ಐದು ತಿಂಗಳ ಗರ್ಭಿಣಿ ಆಗಿದ್ದಾರೆ. ಇನ್ನು ಅಪೊಲೋ ಫಾರ್ಮಸಿಯಲ್ಲಿ ಕೆಲಸ ಮಾಡುತ್ತಿದ್ದ ರೇಣುಕಸ್ವಾಮಿ ಭಜರಂಗದಳದ ಕಾರ್ಯಕರ್ತನೂ ಆಗಿದ್ದು, ಹಿಂದೂ ಮಹಾಗಣಪತಿ ಸೇವಾ ಸಮಿತಿಯ ಸದಸ್ಯನೂ ಆಗಿದ್ದನು. ಆದರೆ, ನಟ ದರ್ಶ್ಮನ್ ಅಭಿಮಾನಿಗಳ ಸಂಘದ ಚಿತ್ರದುರ್ಗ ಜಿಲ್ಲಾಧ್ಯಕ್ಷ ರಾಘವೇಂದ್ರ, ಶನಿವಾರ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದೊಯ್ದಿದ್ದನು. ಈಗ ಬೆಂಗಳೂರಿನಲ್ಲಿ ನನ್ನ ಮಗ ಅನಾಥ ಶವವಾಗಿ ಪತ್ತೆಯಾಗಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.

ದರ್ಶನ್ ಅರೆಸ್ಟ್ ಕೇಸ್; ಶೆಡ್‌ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿ ಹತ್ಯೆ, ಮೃತದೇಹ ಮೋರಿಗೆ ಎಸೆದು ಪರಾರಿ!

ಮಗನ ಮೃತದೇಹ ಕಂಡು ಗೋಳಾಡಿದ ಪೋಷಕರು: ದರ್ಶನ್‌ನಿಂದ ಕೊಲೆಯಾದಗಿ ಬೀದಿ ಹೆಣವಾಗಿದ್ದ ವ್ಯಕ್ತಿ ರೇಣುಕಾಸ್ವಾಮಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇಂದು ಮಧ್ಯಾಹ್ನ ರೇಣುಕಾ ಸ್ವಾಮಿ ಶಿವನಗೌಡ್ರು ಹಾಗೂ ಆತನ ತಾಯಿ ಶವಾಗಾರದ ಬಳಿ ಬಂದು ಮಗನ ಮೃತದೇಹವನ್ನು ಪತ್ತೆ ಮಾಡಿದ್ದಾರೆ. ರೇಣುಕಾ ಸ್ವಾಮಿಯ ದೇಹ ಗುರುತು ಖಚಿತ ಪಡಿಸಿದ ಬಳಿಕ ವೈದ್ಯರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ಮಾಡಲಿದ್ದಾರೆ. ಆದರೆ, ಊರಿನಲ್ಲಿ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದ ರೇಣುಕಾಸ್ವಾಮಿ ಭೀಕರವಾಗಿ ಕೊಲೆ ಆಗಿರುವುದನ್ನು ಕಂಡು ಪೋಷಕರು ಮಮ್ಮಲ ಮರುಗಿ, ಬಿಕ್ಕಳಿಸಿ ಅಳುತ್ತಿದ್ದಾರೆ.

click me!