Darshan and Pavithra Gowda Arrest: ಕೊಲೆ ಕೇಸ್‌ನಲ್ಲಿ ಪಾತ್ರದ ಬಗ್ಗೆ ದರ್ಶನ್ ಕಂಗಲಾಗಿ ಶೂಟಿಂಗ್ ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ. ಇದೀಗ ಇದೇ ಪ್ರಕರಣದಲ್ಲಿ ದರ್ಶನ್ ಎರಡನೇ ಪತ್ನಿ ಸೇರಿದಂತೆ 10ಕ್ಕೂ ಹೆಚ್ಚು ಜನರ ಬಂಧನವಾಗಿದೆ.
ಬೆಂಗಳೂರು: ನಟ ದರ್ಶನ್‌ಗೆ ಬಂಧನದ (Actor Darshan) ಸುಳಿವು ಮೊದಲೇ ಸಿಕ್ಕಿತ್ತಾ ಎಂಬ ಅನುಮಾನ ಮೂಡಿದೆ. ಇಂದು ಬೆಳಗಿನ ಜಾವ ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಬರಲಾಗಿದೆ. ಎರಡನೇ ಪತ್ನಿ ಪವಿತ್ರಾ ಗೌಡ, (Darshan Second Wife Pavithra Gowda) ಆಪ್ತ ಉದ್ಯಮಿ ವಿನಯ್, ಇಬ್ಬರು ಬಾಡಿಗಾರ್ಡ್ ಸೇರಿದಂತೆ 10ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದ್ದು, ಎಲ್ಲಾ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಜೂನ್ 8ರ ಶನಿವಾರ ಉದ್ಯಮಿ ವಿನಯ್ ಕಾರ್ ಶೆಡ್‌ನಲ್ಲಿ ರೇಣುಕಾಸ್ವಾಮಿಯ ಕೊಲೆ ನಡೆದಿತ್ತು ಎಂದು ತಿಳಿದು ಬಂದಿತ್ತು. ನಂತರ ಶವವನ್ನು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಸುಮ್ಮನಹಳ್ಳಿ ಬ್ರಿಡ್ಜ್ ಬಳಿ ಶವ ಎಸೆಯಲಾಗಿತ್ತು. ಆನಂತರ ದರ್ಶನ್ ಮೈಸೂರಿಗೆ ತೆರಳಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಚಿತ್ರೀಕರಣ ಸ್ಥಗಿತಗೊಳಿಸಿದ್ದ ದರ್ಶನ್!
ಮೈಸೂರಿನಲ್ಲಿ ನಿನ್ನೆ ಚಿತ್ರೀಕರಣ ಅರ್ಧಕ್ಕೆ ನಿಲ್ಲಿಸಿದ್ದ ದರ್ಶನ್ ಶೂಟಿಂಗ್‌ನಿಂದ ಹೊರ ಬಂದಿದ್ದರು. ಕಲೆಕ್ಷನ್ ವಿಚಾರಕ್ಜೆ ಬೇಸತ್ತು ಶೂಟಿಂಗ್ ಸ್ಥಗಿತಮಾಡಲಾಗಿದೆ ಎಂದು ದರ್ಶನ್ ಹೇಳಿರುವ ಮಾಹಿತಿ ಲಭ್ಯವಾಗಿದೆ. ಆದ್ರೆ ಕೊಲೆ ಕೇಸ್‌ನಲ್ಲಿ ಪಾತ್ರದ ಬಗ್ಗೆ ದರ್ಶನ್ ಕಂಗಲಾಗಿ ಶೂಟಿಂಗ್ ಸ್ಥಗಿತಗೊಳಿಸಿದ್ದರು ಎನ್ನಲಾಗಿದೆ.
ದರ್ಶನ್ ಸಿನಿಮಾಗಳು
ಸದ್ಯ ಮಿಲನ ಪ್ರಕಾಶ್ ನಿರ್ಮಾಣ ಮತ್ತು ನಿರ್ದೆಶನದ ಡೆವಿಲ್ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಸಹ ರಿವೀಲ್ ಆಗಿದೆ. ಇತ್ತ ತರುಣ್ ಸುಧೀರ್ ನಿರ್ದೇಶನದ ಡಿ 59 ಸಿನಿಮಾವನ್ನು ದರ್ಶನ್ ಒಪ್ಪಿಕೊಂಡಿದ್ದು, 5ನೇ ಅಕ್ಟೋಬರ್ 2024ರಂದು ಚಿತ್ರ ರಿಲೀಸ್ ಆಗಲಿದೆ ಎಂದು ವರದಿಯಾಗಿದೆ. ಡೆವಿಲ್ ಡಿಸೆಂಬರ್ 25 ಮತ್ತು ರಾಜವೀರ ಮದಕರಿ ನಾಯಕ ಚಿತ್ರ 20 ಡಿಸೆಂಬರ್ 2024 ತೆರೆಗೆ ಬರಲಿದೆ ಎಂದು ಸಿನಿಮಾ ತಂಡಗಳು ಘೋಷಿಸಿಕೊಂಡಿವೆ. ಇದೀಗ ದರ್ಶನ್ ಬಂಧನದಿಂದ ಚಿತ್ರೀಕರಣ ಸ್ಥಗಿತಗೊಳ್ಳುವ ಸಾಧ್ಯತೆಗಳಿವೆ.
ಜೂನ್ 9ರಂದು ಪತ್ತೆಯಾದ ಶವದ ಮೇಲೆ ಹಲ್ಲೆಯ ಗುರುತುಗಳು ಪತ್ತೆಯಾಗಿದ್ದವು. ಹಾಗಾಗಿ ಇದೊಂದು ಕೊಲೆ ಎಂದು ಅನುಮಾನಸ್ಪಿಸಿದ್ದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದರು. ಯಾವಾಗ ದರ್ಶನ್ ಪಾತ್ರದ ಕುರಿತು ಮಾಹಿತಿ ಲಭ್ಯವಾಯ್ತೋ ಪೊಲೀಸರು ಮೈಸೂರಿಗೆ ತೆರಳಿ ದರ್ಶನ್ ಬಂಧಿಸಿ ಬೆಂಗಳೂರಿಗೆ ಕರೆ ತಂದಿದ್ದರು.
ಏನಿದು ಪ್ರಕರಣ?
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬಾತ ದರ್ಶನ್ ಎರಡನೇ ಪತ್ನಿ ಪವಿತ್ರಾಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎನ್ನಲಾಗಿದೆ. ಈ ಹಿನ್ನೆಲೆ ಕೋಪಗೊಂಡಿದ್ದ ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ಮೂಲಕ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆ ತರಲಾಗಿತ್ತು. ಉದ್ಯಮಿ ವಿನಯ್ ಕಾರ್ ಶೆಡ್‌ನಲ್ಲಿ ರೇಣುಕಾಸ್ವಾಮಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿತ್ತು. ಹಲ್ಲೆಯ ತೀವ್ರತೆಗೆ ರೇಣುಕಾಸ್ವಾಮಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ರೇಣುಕಾಸ್ವಾಮಿ ಕೊಲೆ & ದರ್ಶನ್ ಅರೆಸ್ಟ್ ; ಏನಿದು ಪ್ರಕರಣ? ಪೊಲೀಸ್ ಆಯುಕ್ತರು ಹೇಳಿದ್ದೇನು? https://t.co/XrOcJUEp1b
— Asianet Suvarna News (@AsianetNewsSN)ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ಏನಿದೆ?
ಘಟನೆ ಸಂಬಂದ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಶವವನ್ನು ಮೊದಲ ಬಾರಿ ನೋಡಿದ್ದ ಅನುಗ್ರಹ ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯುರಿಟಿ ಗಾರ್ಡ್ ಈ ಸಂಬಂಧ ದೂರು ದಾಖಲಿಸಿದ್ದರು. ಅಪಾರ್ಟ್ಮೆಂಟ್ ಮುಂಭಾಗ ಗಸ್ತು ಮಾಡುತ್ತಿದ್ದಾಗ ಪತ್ತೆಯಾಗಿತ್ತು. 35 ವರ್ಷ ಅಪರಿಚಿತ ವ್ಯಕ್ತಿ ಮೃತದೇಹ ಪತ್ತೆ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.