ಜಿಮ್‌ ಮಾಡ್ತಿದ್ದ ನಟನಿಗೆ ಜೀಪು ಹತ್ತು ಎಂದ ಪೊಲೀಸ್‌, ಕಾರಲ್ಲಿ ಬರುವೆ ಎಂದಿದ್ಯಾಕೆ ದರ್ಶನ್?

By Gowthami K  |  First Published Jun 11, 2024, 1:09 PM IST

ರೇಣುಕಾಸ್ವಾಮಿ ಪ್ರಕರಣದಲ್ಲಿ ಮೈಸೂರಿನಲ್ಲಿ ಜಿಮ್‌ ಮಾಡುತ್ತಿದ್ದ ದರ್ಶನನ್ನು ಅಲ್ಲಿಂದಲೇ ವಶಕ್ಕೆ ಪಡೆದು ಬಂಧಿಸಲಾಗಿದೆ. ಏನೇನು ಬೆಳವಣಿಗೆ ಆಯ್ತು ಇಲ್ಲಿದೆ ಮಾಹಿತಿ.


ಬೆಂಗಳೂರು (ಜೂ.11): ಚಿತ್ರದುರ್ಗ ಮೂಲದ ವ್ಯಕ್ತಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್  (Actor Darshan), ಅವರ ಎರಡನೇ ಪತ್ನಿ ಪವಿತ್ರಾ ಗೌಡ  (Darshan Second Wife Pavithra Gowda)  ಸೇರಿ ಸುಮಾರು 10 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಮೈಸೂರಿನಲ್ಲಿ ಜಿಮ್‌ ಮಾಡುತ್ತಿದ್ದ ದರ್ಶನನ್ನು ಅಲ್ಲಿಂದಲೇ ವಶಕ್ಕೆ ಪಡೆದು ಬಂಧಿಸಲಾಗಿದೆ.

ಮೈಸೂರಿನ  ರ‍್ಯಾಡಿಸನ್ ಹೋಟೆಲ್ (Radisson Hotel)ನಲ್ಲಿ ಜಿಮ್‌ ಮಾಡಿ ಹೊರಗಡೆ ಬರುತ್ತಿದ್ದಂತೆಯೇ ಬೆಳಗ್ಗೆ 8.30ರ ಸಮಯದಲ್ಲಿ ಬಂಧಿಸಲಾಯ್ತು. ಈ ವೇಳೆ ನಾನು ಕಾರಿನಲ್ಲಿ ಬರುತ್ತೇನೆ ಎಂದು ದರ್ಶನ್ ಉತ್ತರಿಸಿದ್ದಾರೆ. ಈ ವೇಳೆ ಜೀಪ್‌ ಹತ್ತು ಎಂದು ದರ್ಶನ್‌ ಗೆ ಪೊಲೀಸ್ ಭಾಷೆಯಲ್ಲೇ ಹೇಳಿದ್ದು,   ದರ್ಶನ್‌ ನನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಜೀಪ್‌ನಲ್ಲೇ ಕರೆ ತರಲಾಗಿತ್ತು.

Tap to resize

Latest Videos

ಜೀಮ್ ಟ್ರೈನರ್ ಜೊತೆಗೆ ದರ್ಶನ್  ಜೀಮ್ ಗೆ ಹೋಗಿದ್ದ, ಕಾಮಾಕ್ಷಿಪಾಳ್ಯ ಪೊಲೀಸರು ಈ ವೇಳೆ ದರ್ಶನ್ ಫಾಲೋ  ಮಾಡುತ್ತಿದ್ದರು.  ಪೋನ್ ಸಿಫ್ಚ್ ಆಫ್ ಮಾಡಿಕೊಂಡು ಪರಾರಿಯಾಗಲು ಕೂಡ ದರ್ಶನ್ ಪ್ಲಾನ್ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ರಾಜಕೀಯ ಪ್ರಭಾವ ಬಳಸಿ ಕೇಸ್ ನಿಂದ ಬಚಾವ್ ಆಗಲು ಕೂಡ ಪ್ರಯತ್ನಿಸಿದ್ದರು.  ಬೆಂಗಳೂರು, ಮೈಸೂರು ಭಾಗದ ರಾಜಕೀಯ ಮುಖಂಡರ ಸಂಪರ್ಕ  ಮಾಡಿ ತನಗೆ ಆಪ್ತರಾಗಿರೋ ರಾಜಕೀಯ ಮುಖಂಡರ ಸಂಪರ್ಕಿಸಿ ಕೊಲೆ ಮಾಡಿರುವ ಬಗ್ಗೆ ಹೇಳಿಕೊಂಡು ಹೇಗಾದ್ರೂ ಬಚಾವ್ ಮಾಡುವಂತೆ ದುಂಬಾಲು ಬಿದ್ದಿದ್ದರು ಎಂದು ತಿಳಿದುಬಂದಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್ ಬೆನ್ನಲ್ಲೇ ಎರಡನೇ ಪತ್ನಿ ಪವಿತ್ರಾ ಗೌಡ ಬಂಧನ!

ಇನ್ನು ಕೊಲೆಯಾದ ಬಳಿಕ  ಮೈಸೂರಿಗೆ ತೆರಳಿದ್ದ ದರ್ಶನ್ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ, ಬಳಿಕ ಅರ್ಧ ದಿನ ಚಿತ್ರೀಕರಣ ನಡೆಸಿ ಬಳಿಕ ಕಲೆಕ್ಷನ್ ವಿಚಾರಕ್ಜೆ ಬೇಸತ್ತು ಶೂಟಿಂಗ್ ಸ್ಥಗಿತಗೊಳಿಸಿಸುತ್ತೇನೆ ಎಂದಿದ್ದು, ಕೊಲೆ ಕೇಸ್ ನಲ್ಲಿ ಪಾತ್ರದ ಬಗ್ಗೆ ದರ್ಶನ್ ಕಂಗಲಾಗಿದ್ದರು. ಬಳಿಕ ರ‍್ಯಾಡಿಸನ್ ಹೋಟೆಲ್ ನಲ್ಲಿ ತಂಗಿದ್ದರು.

ಕೊಲೆಯಾದ ರೇಣುಕಾಸ್ವಾಮಿ ದರ್ಶನ್ ಎರಡನೇ ಪತ್ನಿ ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಮಾಡಿದ್ದನಂತೆ. ಇದೇ ಕೋಪಕ್ಕೆ  ಚಿತ್ರದುರ್ಗದಿಂದ ಆತನನ್ನ ಕಿಡ್ನಾಪ್‌ ಮಾಡಿಕೊಂಡು ಬರಲಾಗಿತ್ತು. ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ, ರಾಘವೇಂದ್ರ ಬೆಂಗಳೂರಿಗೆ ರೇಣುಕಾಸ್ವಾಮಿಯನ್ನ ಕರೆದುಕೊಂಡು ಬರಲಾಗಿತ್ತು.  ಆ ಬಳಿಕ  ದರ್ಶನ್‌ ಬಲಗೈ ಬಂಟ ವಿನಯ್‌ ಎಂಬಾತನಿಗೆ ಸೇರಿದ ವಾಹನ ಸೀಜರ್ ಮಾಡಿ ಇಡುವ ಶೆಡ್ ನಲ್ಲಿ ಇಟ್ಟು  ಮನಬಂದಂತೆ ಥಳಿಸಿದ್ದಾರೆ.

ನಟ ದರ್ಶನ್ ಕೊಲೆ ಆರೋಪದಲ್ಲಿ ಗೆಳತಿ ಪವಿತ್ರಾ ಗೌಡ ಹೆಸರು!

ಸಿಗರೇಟ್‌ನಿಂದ ಮೈಯನ್ನು ಸುಟ್ಟಿದ್ದು, ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿದ್ದಾರೆ. ಮರ್ಮಾಂಗಕ್ಕೆ ಮನಬಂದಂತೆ ಒದ್ದಿದ್ದಾರೆ. ಬೆನ್ನಿನ ಮೇಲೆಲ್ಲ ಕಾದ ಕಬ್ಬಿಣದ ಸಲಾಕೆಯಿಂದ, ರಾಡ್‌ನಿಂದ ಹೊಡೆದಿದ್ದಾರೆ. ಬಾಯಿಗೆ ಬಿದ್ದ ಏಟಿಗೆ ದವಡೆಯೇ ಕಿತ್ತುಬಂದಿದೆ. ರೇಣುಕಾಸ್ವಾಮಿ ಸಾಯುವುದಕ್ಕೂ ಮುನ್ನ ನರಳಿ ನರಳಿ ಸತ್ತಿದ್ದಾನೆ. ದರ್ಶನ್ ರೇಣುಕಾಸ್ವಾಮಿ ತಲೆಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಸುಮನಹಳ್ಳಿ ಬ್ರಿಡ್ಜ್ ಬಳಿ ಇರುವ ಸತ್ವ ಅಪಾರ್ಟ್ ಮೆಂಟ್ ಬಳಿ ಮೋರಿಗೆ ಎಸೆಯಲಾಗಿತ್ತು.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜೊತೆಗೆ 10 ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ಖ್ಯಾತ ಹೋಟೆಲ್ ಉದ್ಯಮಿ ವಿನಯ್ ದರ್ಶನ್‌ ರೈಟ್‌ ಹ್ಯಾಂಡ್‌ ಆಗಿದ್ದಾನೆ . ಜೂ.9ರ ರಾತ್ರಿ ವಿನಯ್ ಕಾರ್ ಶೆಡ್ ನಲ್ಲಿ ರೇಣುಕಾ ಸ್ವಾಮಿಯನ್ನು ಇಟ್ಟು ಹಲ್ಲೆ ಮಾಡಲಾಗಿತ್ತು.

ಪೊಲೀಸರ ತನಿಖೆ ವೇಳೆ ರೇಣುಕಾಸ್ವಾಮಿ ಮೊಬೈಲ್ ಆರ್ ಆರ್‌ನಗರ ವ್ಯಾಪ್ತಿಯಲ್ಲಿ ಅದು ಕೂಡ ದರ್ಶನ್‌ ಮನೆಯ ಸಮೀಪದಲ್ಲೇ ಕೊನೆಯದಾಗಿ ಲೊಕೇಶನ್ ತೋರಿಸುತ್ತಿತ್ತು. ಹೀಗಾಗಿ ತನಿಖೆ ತೀವ್ರಗೊಳಿಸಿದ ಪೊಲೀಸರು ದರ್ಶನ್‌, ಪವಿತ್ರಗೌಡ, ವಿನಯ್ ಸೇರಿ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

click me!