Asianet Suvarna News Asianet Suvarna News

ದರ್ಶನ್ ಅರೆಸ್ಟ್ ಕೇಸ್; ಶೆಡ್‌ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿ ಹತ್ಯೆ, ಮೃತದೇಹ ಮೋರಿಗೆ ಎಸೆದು ಪರಾರಿ!

ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅರೆಸ್ಟ್ ಆಗಿದ್ದಾರೆ. ಶೆಡ್‌ನಲ್ಲಿ ಕೂಡಿ ಹಾಕಿ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿತ್ತು. ಬಳಿಕ ಕಾಮಾಕ್ಷಿಪಾಳ್ಯ ಮೋರಿಗೆ ಶವ ಎಸೆದ ಗ್ಯಾಂಗ್ ಎಸ್ಕೇಪ್ ಆಗಿತ್ತು. ಕೊಲೆಯ ಇಂಚಿಂಚು ಮಾಹಿತಿ ಇಲ್ಲಿದೆ.
 

Kannada Actor Darshan Arrest case killed Renukaswamy body found in near drainage ckm
Author
First Published Jun 11, 2024, 12:37 PM IST | Last Updated Jun 11, 2024, 12:38 PM IST

ಬೆಂಗಳೂರು(ಜೂ.11) ಸ್ಯಾಂಡಲ್‌ವುಡ್‌ನಲ್ಲಿ ದಿನಬೆಳಗಾದರೆ ಕೋಲಾಹಲಗಳೇ ಸೃಷ್ಟಿಯಾಗುತ್ತಿದೆ. ಇದೀಗ ನಟ ದರ್ಶನ್ ಅರೆಸ್ಟ್ ಪ್ರಕರಣ ಭಾರಿ ಸದ್ದು ಮಾಡಿದೆ. ದರ್ಶನ್ ಎರಡನೇ ಪತ್ನಿ ಎಂದೇ ಗುರುತಿಸಿಕೊಂಡಿರು ನಟಿ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದ್ದ ಅನ್ನೋ ಕಾರಣಕ್ಕೆ ಚಿತ್ರದುರ್ಗದ ಮೂಲದ ರೇಣುಕಾಸ್ವಾಮಿ ಹತ್ಯೆಯಾಗಿದೆ ಎಂದು ಪೊಲೀಸ್ ಮಾಹಿತಿ ನೀಡಿದೆ. ನಟ ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿ ಹತ್ಯೆ ನಡೆದಿದೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ನಟ ದರ್ಶನ್ ಬಂಧಿಸಲಾಗಿದೆ. ದರ್ಶನ್ ಜೊತೆಗೆ 10 ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ. ಇದರ ಬೆನ್ನಲ್ಲೇ ರೇಣುಕಾಸ್ವಾಮಿ ಹತ್ಯೆ ಹಿಂದಿನ ಸಂಚು ಬಯಲಾಗಿದೆ. ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿ ರೇಣುಕಾಸ್ವಾಮಿ ಹತ್ಯೆ ಮಾಡಲಾಗಿದೆ ಅನ್ನೋ ಮಾಹಿತಿಗಳು ಹೊರಬಿದ್ದಿದೆ.

ನಟಿ ಪವಿತ್ರಾ ಗೌಡಾಗೆ ಚಿತ್ರದುರ್ಗದ ನಿವಾಸಿ ರೇಣುಕಾಸ್ವಾಮಿ ಅಶ್ಲೀಲ ಮೇಸೆಜ್ ಹಾಗೂ ಫೋಟೋಗಳನ್ನು ಕಳುಹಿಸಿದ್ದ ಅನ್ನೋ ಆರೋಪದ ಮೇಲೆ ದರ್ಶನ್ ಗ್ಯಾಂಗ್ ಈ ಹತ್ಯೆ ನಡೆಸಿದೆ ಅನ್ನೋ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ. ರೇಣುಕಾಸ್ವಾಮಿಯನ್ನು ಜೂನ್ 1 ರಂದು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆಸಲಾಗಿದೆ. ದರ್ಶನ್ ಹೇಳಿದಂತೆ ಕೊಲೆ ಆರೋಪಿಗಳ ಗ್ಯಾಂಗ್ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಯಿಸಿದ್ದಾರೆ. ಬಳಿಕ ಕಾಮಾಕ್ಷಿಪಾಳ್ಯದ ವ್ಯಾಪ್ತಿಯಲ್ಲಿರುವ ಪಾಳುಬಿದ್ದ ಶೆಡ್‌ನಲ್ಲಿ ರೇಣುಕಾಸ್ವಾಮಿಯನ್ನು ಕೂಡಿ ಹಾಕಿದ್ದಾರೆ.

ಬಂಧನದ ಸುಳಿವು ಮೊದಲೇ ಸಿಕ್ಕಿತ್ತಾ? ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿದ್ದ ದರ್ಶನ್, ಕೊಲೆ ಕೇಸ್‌ನಿಂದ ಕಂಗಾಲಾಗಿದ್ದ ನಟ!

ಜೂನ್ 1 ರಂದು ರೇಣುಕಾಸ್ವಾಮಿ ಮನೆಯಿಂದ ಹೊರಹೋಗಿದ್ದು ಮರಳಿ ಬಂದಿಲ್ಲ. ಬೆಂಗಳೂರಿಗೆ ಆಗಮಿಸಿದ ರೇಣುಕಾಸ್ವಾಮಿಯನ್ನು ದರ್ಶನ್ ಗ್ಯಾಂಗ್ ಕಾಮಾಕ್ಷಿಪಾಳ್ಯಕ್ಕೆ ಕರೆದುಕೊಂಡು ಹೋಗಿ ಶೆಡ್‌ನಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿದ್ದಾರೆ ಅನ್ನೋ ಮಾಹಿತಿ ಬಹಿರಂಗವಾಗಿದೆ. ಮರ್ಮಾಂಗಕ್ಕೆ ಒದ್ದಿದ್ದಾರೆ, ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಜೂನ್ 8 ರಂದು ರೇಣುಕಾಸ್ವಾಮಿ ಹತ್ಯೆಯಾಗಿದ್ದಾನೆ. 

ರೇಣುಕಾಸ್ವಾಮಿ ಹತ್ಯೆ ಬಳಿಕ ಮೃತದೇಹವನ್ನು ಕಾಮಾಕ್ಷಿಪಾಳ್ಯದ ಮೋರಿಗೆ ಎಸೆದು ಪರಾರಿಯಾಗಿದ್ದಾರೆ. ಜೂನ್ 9 ರಂದು ಮೋರಿ ಪಕ್ಕದಲ್ಲಿರುವ ಅಪಾರ್ಟ್‌ಮೆಂಟ್ ಸಿಬ್ಬಂದಿ ಮೃತದೇಹ ನೋಡಿದ್ದಾರೆ. ನಾಯಿಗಳು ಮೃತದೇಹ ಎಳೆದಾಡುತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹ ವಶಕ್ಕೆ ಪಡೆದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಪರಿಚಿತ ಶವದ ಗುರುತು ಪತ್ತೆ ಮಾಡಿದ ಪೊಲೀಸರು ತನಿಖೆ ಚುರುಗೊಳಿಸಿ ಕೆಲ ಆರೋಪಿಗಳನ್ನು ಬಂಧಿಸಿದ್ದಾರೆ. ತನಿಖೆ ವೇಳೆ ಆರೋಪಿಗಳು ದರ್ಶನ್ ಸೂಚನೆ ಮೇರೆಗೆ ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ ಈ ಹತ್ಯೆ ಹಿಂದೆ ದರ್ಶನ್ ಕೈವಾಡವಿರುವ ಕೆಲ ಸಾಕ್ಷ್ಯಗಳು ಲಭ್ಯವಾಗಿದೆ. ಇದರ ಬೆನ್ನಲ್ಲೇ ಇಂದು ದರ್ಶನ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಕೊಲೆ ಪ್ರಕರಣದಲ್ಲಿ ಬಂಧಿಯಾಗಿರುವ ದರ್ಶನ್ ಎರಡನೇ ಪತ್ನಿ ಪವಿತ್ರಾ ಗೌಡ ಯಾರು?

Latest Videos
Follow Us:
Download App:
  • android
  • ios