ಇದೀಗ ತಹಶೀಲ್ದಾರ್ ನೇತೃತ್ವದಲ್ಲಿ ಸೈಫನ್ ದೇಹ ಮರು ಪರೀಕ್ಷೆಗೆ ಮಣ್ಣಿನಡಿಯಿಂದ ಸೈಫನ್ ದೇಹವನ್ನ ಹೊರತಗೆಯಲಾಗಿದು ಮರು ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು ಹೆಚ್ಚಿನ ಪರೀಕ್ಷೆಗಾಗಿ ಹೈದರಾಬಾದಿನ ಎಫ್ ಎಲ್‌ಸಿಗೆ ಕಳುಹಿಸಿಕೊಡಲಾಗಿದೆ.
ವಿಜಯಪುರ(ಜೂ.21): ದೇವರಹಿಪ್ಪರಗಿ ಪಟ್ಟಣದ ಸಮೀಪವಿರುವ ಚಟ್ಟರಕಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಿದ್ದ ಶವವನ್ನು ಮರು ಪರೀಕ್ಷೆ ನಡೆಸಲಾಗಿದೆ. ಮೆ.10ರಂದು ಗ್ರಾಮದ ಸೈಫನ್ ಕೋರಬು ಎಂಬ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಘಟನೆ ನಡೆದಿತ್ತು. ಯುವಕನ ಅಣ್ಣ ಮರು ಶವ ಪರೀಕ್ಷೆಗೆ ಒಳಪಡಿಸಲು ದಿ.24-5-2023ರಂದು ದೇವರಹಿಪ್ಪರಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಕಾರಣ ಯುವಕನ ಅಣ್ಣ ಚಂದಾಸಾಬ ಅಮೀನಸಾಬ ಕೋರಬು ಬಂದು ಫಿರ್ಯಾದಿ ನೀಡಿದ ಕಾರಣ ಸಿಂದಗಿ ತಹಶೀಲ್ರ್ದಾ ವೈದ್ಯಾಧಿಕಾರಿಗಳು ಹಾಗೂ ಪೊಲೀಸ್ ಇಲಾಖೆಯ ಬಂದೋಬಸ್ತ್ ನಡುವೆ ಸೋಮವಾರದಂದು ಯುವಕನ ಶವ ಮರು ವೈದ್ಯಕೀಯ ಪರೀಕ್ಷೆ ನೆರವೇರಿಸಲಾಯಿತು.
ಕಳೆದ ತಿಂಗಳ ವಿಧಾನಸಭೆ ಚುನಾವಣೆ ಮತದಾನದ ದಿನದಂದು ಮೇ-9 ರಂದು ರಾತ್ರಿ ಸೈಫನ್ ಮನೆಯಲ್ಲಿ ಫ್ಯಾನ್‌ನ ಕರೆಂಟ್ ಶಾಕ್ ನಿಂದ ಸಾವಿಗೀಡಾದ ಬಗ್ಗೆ ತಿಳಿದು ಕುಟುಂಬಸ್ಥರು ಸಹಜ ಸಾವು ಎಂದು ಸೈಫನ್ ಅಂತ್ಯಸಂಸ್ಕಾರ ನೆರವೇರಿಸಿದ್ದರು. ಆದರೆ ನಂತರದ ದಿನಗಳಲ್ಲಿ ಸೈಫನ್ ಸಾವಿನ ಬಗ್ಗೆ ಅನುಮಾನ ಮೂಡಿದ ಕಾರಣ ಸೈಫನ್ ಸಾವು ಸಹಜ ಸಾವಲ್ಲ. ಇದು ಒಂದು ಹತ್ಯೆ. ಇದಕ್ಕೆ ಅಬ್ಬಾಸ್ ಅಲಿ ಮತ್ತು ಪತ್ನಿ ರಾಜ್ಮಾನೇ ಕಾರಣ ಅಂತಾ ಆರೋಪಿಸಿ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ದಿ. 24-05-2023 ರಂದು ದೂರು ದಾಖಲಿಸಿದ್ದರು.
undefined
ಕಾರಣ ಇದೀಗ ತಹಶೀಲ್ದಾರ್ ನೇತೃತ್ವದಲ್ಲಿ ಸೈಫನ್ ದೇಹ ಮರು ಪರೀಕ್ಷೆಗೆ ಮಣ್ಣಿನಡಿಯಿಂದ ಸೈಫನ್ ದೇಹವನ್ನ ಹೊರತಗೆಯಲಾಗಿದು ಮರು ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು ಹೆಚ್ಚಿನ ಪರೀಕ್ಷೆಗಾಗಿ ಹೈದರಾಬಾದಿನ ಎಫ್ ಎಲ್‌ಸಿಗೆ ಕಳುಹಿಸಿಕೊಡಲಾಗಿದೆ. ನಂತರ ಸತ್ಯ ಹೊರಬೀಳುತ್ತಾ ಅಂತಾ ಕುಟುಂಬಸ್ಥರು ಸೇರಿದಂತೆ ಗ್ರಾಮಸ್ಥರು ಕಾದು ಕುಳಿತಿದ್ದಾರೆ.