ಬೆಳಗಾವಿ: ಲಾಂಗ್‌ ತೋರಿಸಿ ಹಣ ದೋಚಿ ಪರಾರಿಯಾಗಿದ್ದ ಆರೋಪಿಗಳ ಬಂಧನ

By Kannadaprabha News  |  First Published Jun 21, 2023, 8:47 PM IST

ಮೇ.22 ರಂದು ದೂರದ ಪ್ರಯಾಣ ಮಾಡಿ ಬಂದಿದ್ದ ಯಮಕನಮರಡಿ ಗ್ರಾಮದವರು ಸತೀಶಣ್ಣಾ ಕಲ್ಯಾಣ ಮಂಟಪದ ಬಳಿ ಸರ್ವಿಸ್‌ ರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಕಳ್ಳರು ಅವರಿಗೆ ಲಾಂಗ್‌ ತೋರಿಸಿ ಭಯ ಹುಟ್ಟಿಸಿ ಹಣ ಹಾಗೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು. 

ಚನ್ನಮ್ಮನ ಕಿತ್ತೂರು(ಜೂ.21):  ತಾಲೂಕಿನ ಅಂಬಡಗಟ್ಟಿ ಕ್ರಾಸ್‌ ಬಳಿಯ ಸತೀಶಣ್ಣಾ ಕಲ್ಯಾಣ ಮಂಟಪದ ಬಳಿ ಸರ್ವೀಸ್‌ ರಸ್ತೆಯಲ್ಲಿ ನಿಲ್ಲಿಸಿದ್ದ ವಾಹನ ಮಾಲೀಕರಿಗೆ ಲಾಂಗ್‌ ತೋರಿಸಿ ಹಣ ದೊಚಿ ಪರಾರಿಯಾಗಿದ್ದ ಹುಬ್ಬಳ್ಳಿ ಮೂಲದ ಇಬ್ಬರನ್ನು ಬಂಧಿಸುವಲ್ಲಿ ಕಿತ್ತೂರು ಪೊಲೀಸರು ಯಶಸ್ವಿಯಾಗಿದ್ದಾರೆ. 

ಹುಬ್ಬಳ್ಳಿಯ ಗಂಗಾಧರ ನಗರದ ವೀರಾಪುರ ಓಣಿಯ ಭಜಂತ್ರಿ ಚಾಳಾದ ನಿವಾಸಿ ಸುರೇಶ ಭಜಂತ್ರಿ (49), ಹುಬ್ಬಳ್ಳಿಯ ಚಾಳ ಮುರಳಿ ಬೀಲ್ಡಿಂಗ್‌ ಹತ್ತಿರದ ನಿವಾಸಿ ಬಸವರಾಜ ಹೆಬ್ಬಳ್ಳಿ (32) ಬಂಧಿತ ಆರೋಪಿಗಳಾಗಿದ್ದಾರೆ.
ಮೇ.22 ರಂದು ದೂರದ ಪ್ರಯಾಣ ಮಾಡಿ ಬಂದಿದ್ದ ಯಮಕನಮರಡಿ ಗ್ರಾಮದವರು ಸತೀಶಣ್ಣಾ ಕಲ್ಯಾಣ ಮಂಟಪದ ಬಳಿ ಸರ್ವಿಸ್‌ ರಸ್ತೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಇದನ್ನು ಗಮನಿಸಿದ ಕಳ್ಳರು ಅವರಿಗೆ ಲಾಂಗ್‌ ತೋರಿಸಿ ಭಯ ಹುಟ್ಟಿಸಿ ಹಣ ಹಾಗೂ ಮೊಬೈಲ್‌ ಕಿತ್ತುಕೊಂಡು ಪರಾರಿಯಾಗಿದ್ದರು. 

Tap to resize

Latest Videos

ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಭೀಕರ ದಾಳಿ, ಚಾಕು ಇರಿತದಿಂದ ಪರಿಸ್ಥಿತಿ ಚಿಂತಾಜನಕ!

ಈ ಘಟನೆಯ ಕುರಿತು ಹಣ ಹಾಗೂ ಮೊಬೈಲ್‌ ಕಳೆದುಕೊಂಡವರು ಕಿತ್ತೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ಇಬ್ಬರನ್ನು ಬಂಧಿಸಿ ಅವರಿಂದ ಹಣ, ಬೈಕ್‌ ಹಾಗೂ ಮೊಬೈಲ್‌ ವಶ ಪಡಿಸಿಕೊಂಡಿದ್ದಾರೆ. 

ಎಸ್ಪಿ ಸಂದೀಪ ಪಾಟೀಲ ಮಾರ್ಗದರ್ಶನದಲ್ಲಿ ಸಿಪಿಐ ಮಹಾಂತೇಶ ಹೊಸಪೇಟ, ಪಿಎಸೈ ರಾಜು ಮಮದಾಪುರ, ಎಎಸೈ ಎ.ಆರ್‌.ಬಾವಣ್ಣವರ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

click me!