ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಭೀಕರ ದಾಳಿ, ಚಾಕು ಇರಿತದಿಂದ ಪರಿಸ್ಥಿತಿ ಚಿಂತಾಜನಕ!

Published : Jun 21, 2023, 08:17 PM ISTUpdated : Jun 21, 2023, 08:20 PM IST
ಪ್ರೀತಿಸಲು ನಿರಾಕರಿಸಿದ ಯುವತಿ ಮೇಲೆ ಭೀಕರ ದಾಳಿ, ಚಾಕು ಇರಿತದಿಂದ ಪರಿಸ್ಥಿತಿ ಚಿಂತಾಜನಕ!

ಸಾರಾಂಶ

ಒಂದೆರೆಡು ಬಾರಿ ಪ್ರೇಮ ನಿವೇದನೆ ಮಾಡಿದ್ದಾನೆ.ಆಕೆ ನಯವಾಗಿ ತಿರಸ್ಕರಿಸಿದ್ದಾಳೆ. ಕೊನೆಗೆ ಆಕೆಯ ಹಾಸ್ಟೆಲ್‌ಗೆ ತೆರಳಿ ಪ್ರಪೋಸ್ ಮಾಡಿದ್ದಾನೆ. ಈ ವೇಳೆ ರಿಜೆಕ್ಟ್ ಮಾಡಿದ ಆಕೆ ಮೇಲೆ ಚಾಕುವಿನಿಂದ ಇರಿದಿದ್ದಾನೆ. ಯುವತಿ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಹೈದರಾಬಾದ್(ಜೂ.21) ದೆಹಲಿಯಲ್ಲಿ ಇತ್ತೀಚೆಗೆ ವಿದ್ಯಾರ್ಥಿ ಮೇಲೆ 40ಕ್ಕೂ ಹೆಚ್ಚು ಬಾರಿ ಚಾಕು ಇರಿದು ಕೊಲೆಗೈದ ಘಟನೆ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇದೀಗ ಇದೇ ರೀತಿಯ ಮತ್ತೊಂದು ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಆಕೆಯ ಮೇಲೆ ಚಾಕು ಇರಿಯಲಾಗಿದೆ. ಕತ್ತು, ಕೈ ಭಾಗದಲ್ಲಿ ತೀವ್ರಗಾಯಗಳಾಗಿದೆ. ಇದೀಗ ಯುವತಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ಆದರೆ ಗಂಭೀರವಾಗಿ ಗಾಯಗೊಂಡಿರುವ ಯುವತಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. 

22 ವರ್ಷದ ಯುವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಹೈದರಾಬಾದ್‌ನಲ್ಲಿ ಕೆಲಸಕ್ಕೂ ಸೇರುವ ಮುನ್ನವೇ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಗಣೇಶ್ ಪರಿಚಯಸ್ಥರಾಗಿದ್ದರು. ಅಂಕಲ್ ಎಂದು ಕರೆಯುತ್ತಿದ್ದ ಇದೇ ಗಣೇಶ್ ಎರಡು ಬಾರಿ ಪ್ರೇಮ ನಿವೇದನೆ ಮಾಡಿದ್ದ. ಆದರೆ ಆಕೆ ನಿರಾಕರಿಸಿದ್ದಳು. ಗಣೇಶ್ ಮಾತ್ರ ಆಕೆಯ ಹಿಂದೆ ಬಿದ್ದಿದ್ದ.

ಲಂಡನ್‌ನಲ್ಲಿ ಮತ್ತೋರ್ವ ಭಾರತೀಯನ ಹತ್ಯೆ: ಚಾಕು ಇರಿದು ಕೇರಳದ ಅರವಿಂದ್ ಕೊಲೆ

ಹೈದರಾಬಾದ್‌ನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಯುವತಿಯನ್ನು ಪದೇ ಪದೇ ಕರೆ ಮಾಡಿ ಹಿಂಸೆ ನೀಡುತ್ತಿದ್ದ. ಕೆಲಸ ಮುಗಿಸಿ ಹಾಸ್ಟೆಲ್ ಸೇರಿಕೊಂಡ ಬೆನ್ನಲ್ಲೇ ಗಣೇಶ್ ಸ್ಕೂಟರ್ ಏರಿ ಹಾಸ್ಟೆಲ್ ಎದುರು ಪ್ರತ್ಯಕ್ಷಗೊಂಡಿದ್ದಾನೆ. ಹಾಸ್ಟೆಲ್ ಸಿಬ್ಬಂದಿಗಳ ಬಳಿ ಆಕೆಯನ್ನು ಕರೆಸಿ ಸ್ಕೂಟರ್ ಏರಲು ಗದರಿಸಿದ್ದಾನೆ. ಬೆದರಿದ ಯುವತಿ ಸ್ಕೂಟರ್ ಏರಿದ್ದಾಳೆ. ಹಾಸ್ಟೆಲ್‌ನಿಂದ ಹೊರಟು ನಿರ್ಜನ ಪ್ರದೇಶಕ್ಕೆ ತೆರಳಿದ ಗಣೇಶ್, ಆಕೆಗೆ ಮತ್ತೆ ಪ್ರೇಮ ನಿವೇದನೆ ಮಾಡಿದ್ದಾನೆ.

ಈ ವೇಳೆ ನಿರಾಕರಿಸಿದ ಯುವತಿ, ತಾನೂ ಬೇರೋಬ್ಬರ ಪ್ರೀತಿಸುತ್ತಿರುವುದಾಗಿ ಹೇಳಿದ್ದಾಳೆ. ಈ ಉತ್ತರಕ್ಕೆ ಗಣೇಶ್ ಕೆಂಡಾಮಂಡಲವಾಗಿದ್ದಾನೆ. ಮೊದಲೇ ಪ್ಲಾನ್ ಮಾಡಿದ್ದ  ಗಣೇಶ್ ಚಾಕು ತೆಗೆದು ಯುವತಿ ಮೇಲೆ ದಾಳಿ ಮಾಡಿದ್ದಾನೆ. ಒಂದೇ ಸಮನೆ ಚಾಕು ಇರಿದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಯುವತಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ. ಯುವತಿ ಸ್ಥಿತಿ ಚಿಂತಾಜನಕವಾಗಿದೆ. ಇತ್ತ ಪೊಲೀಸರಿಗೆ ಈ ಘಟನೆ ಹಿಂದೆ ಗಣೇಶ್ ಅನ್ನೋ ಮಾಹಿತಿಯನ್ನೂ ನೀಡಿದ್ದಾಳೆ. 

 

Vijayapura: ಸ್ಕೂಟಿಗಾಗಿ ಯುವತಿಯ ಕುತ್ತಿಗೆ ಕೊಯ್ದ ಹಂತಕರು

ಹುಡುಗಿ ವಿಚಾರದಲ್ಲಿ ವಿದ್ಯಾರ್ಥಿಗೆ ಚಾಕು ಇರಿತ
ಹುಡುಗಿಯ ವಿಚಾರದಲ್ಲಿ ಗುಂಪೊಂದು ವಿದ್ಯಾರ್ಥಿಯೊಬ್ಬನ್ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿರುವ ಘಟನೆಯು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ನಡೆದಿದೆ. ನ್ಯಾಷನಲ್‌ ಕಾಲೇಜಿನ ಶ್ಯಾಮ್‌ ಸುಂದರ್‌ ಚೂರಿ ಇರಿತಕ್ಕೊಳಗಾದ ವಿದ್ಯಾರ್ಥಿ. ಕೊಂಡರೆಡ್ಡಿಪಲ್ಲಿ ಶ್ಯಾಮ್‌ ಸುಂದರ್‌ ಹಾಗೂ ಆತನ ಸ್ನೇಹಿತ ಶಂಖಂವಾರಿಪಲ್ಲಿ ಗಗನ್‌ ಬಾಗೇಪಲ್ಲಿಯ ಸಾಯಿಬಾಬಾ ದೇವಾಸ್ಥಾನದ ಬಳಿ ಇದ್ದಾಗ ಅಲ್ಲಿಗೆ ಬಂದ ಗುಂಪೊಂದು ಹುಡುಗಿಯ ವಿಚಾರದಲ್ಲಿ ಗಲಾಟೆ ತೆಗೆದು ಶ್ಯಾಮ್‌ ಸುಂದರ್‌ ಮತ್ತು ಗಗನ್‌ಗೆ ಥಳಿಸಿದ್ದಾರೆ. ಅಲ್ಲದೆ ಶ್ಯಾಮಸುಂದರ್‌ಗೆ ಚಾಕುವಿನಿಂದ ಹೊಡೆಗೆ ತಿವಿದು ಕೊಲೆಗೆ ಯತ್ನಿಸಿದ್ದಾರೆ. ಇದರಿಂದ ತೀವ್ರವಾಗಿ ಗಾಯಗೊಂಡ ಸುಂದರ್ನನ್ನು ಚಿಕ್ಕಬಳ್ಳಾಪುರದ ಜಿಲ್ಲಾಸ್ಪತ್ರೆಗೆ ರವಾನಿಸಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎನ್ನಲಾಗಿದೆ. ಕೊಲೆ ಯತ್ನ ಆರೋಪದಡಿ ವಾಲ್ಮೀಕಿನಗರದ ಭುವನ…, ವೇಣು, ನಿಖಿಲ…, ಬಿಳ್ಳೂರು ನಂದೀಶ…, ನಂದೀಶ…, ಹೇಮಂತ…, ವಂಶಿ, ಬೋಂಡಾ ಶ್ರೀನಿವಾಸ ಮತ್ತು ಇತರರ ವಿರುದ್ಧ ಬಾಗೇಪಲ್ಲಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು