ಚಿತ್ರದುರ್ಗ: ಮಾನಸಿಕ ಖಿನ್ನತೆಗೆ ಒಳಗಾದ ದಲಿತ ಯುವತಿಯ ರೇಪ್‌ ಅಂಡ್‌ ಮರ್ಡರ್‌?

By Girish Goudar  |  First Published Aug 31, 2024, 7:03 PM IST

ನಿನ್ನೆ ಸಂಜೆ ದಿಢೀರ್ ಅಂತ ಯುವತಿ ನಾಪತ್ತೆಯಾಗಿದ್ದು, ಬೆಳಗಾಗುವಷ್ಟರಲ್ಲಿ ಬೆತ್ತಲಾದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ದೃಶ್ಯವನ್ನು ಕಂಡ ಯುವತಿಯ ಸಂಬಂಧಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಇದು ಕೇವಲ ಕೊಲೆ ಮಾತ್ರವಲ್ಲ, ಈಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. 
 


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಆ.31):  ಮಾನಸಿಕ ಅಸ್ವಸ್ಥರು ಅಂದ್ರೆ ಬಹುತೇಕ ಸುಸೈಡ್ ಅಥವಾ ಅಪಘಾತಕ್ಕೀಡಾಗಿ ಸಾಯೋರೇ ಹೆಚ್ಚು. ಆದರೆ ಚಿತ್ರದುರ್ಗ ಮೂಲದ ಯುವತಿಯೊಬ್ಬಳ ಮೃತದೇಹ ಬೆತ್ತಲೆಯಾಗಿ ಪತ್ತೆಯಾಗಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದ್ದು, ರೇಪ್ ಅಂಡ್ ಮರ್ಡರ್ ಮಾಡಿ ಮೃತದೇಹ ಬಿಸಾಡಲಾಗಿದೆ ಎಂದು ಕುಟುಂಬಸ್ಥರಿಂದ ಗಂಭೀರ ಆರೋಪ ಕೇಳಿ ಬಂದಿದೆ.‌ ಈ ಕುರಿತು ವರದಿ ಇಲ್ಲಿದೆ.....,

Tap to resize

Latest Videos

undefined

ಹೀಗೆ ಬೆತ್ತಲೆಯಾಗಿ‌ ಬಿದ್ದಿರುವ ಯುವತಿಯ ಮೃತದೇಹ, ಕಣ್ಣೀರಿಡ್ತಿರುವ ಯುವತಿಯ ಸಂಬಂಧಿಗಳು. ಈ ದೃಶ್ಯಗಳು ಕಂಡು ಬಂದಿದ್ದು, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ತಿಪ್ಪೇಹಳ್ಳಿ ಗ್ರಾಮದ ಹೊರವಲಯದಲ್ಲಿ. ಹೌದು, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಅಬ್ಬೇನಹಳ್ಳಿ ಗ್ರಾಮದ ದಲಿತ ಯುವತಿ ಹಲವು ವರ್ಷಗಳಿಂದ ಮಾನಸಿಕ ಅಸ್ವಸ್ಥೆಯಾಗಿ ಬದುಕುತಿದ್ದಳು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲ ವಿಕೃತಕಾಮಿಗಳು ಕಳೆದ ನಾಲ್ಕು ವರ್ಷಗಳ ಹಿಂದೆ ಈಕೆಯ ಮೇಲೆ ಅತ್ಯಾಚಾರ ವೆಸಗಿದ್ದ ಪರಿಣಾಮ ಅನಧಿಕೃತವಾಗಿ ಒಂದು ಮಗುವಿಗೆ ಜನ್ಮ ನೀಡಿದ್ದಳು. 

Rape Case : ಪತಿ ಅಂದ್ಕೊಂಡು ರಾತ್ರಿಯಿಡಿ ಸೆಕ್ಸ್… ಕರೆಂಟ್ ಬಂದ್ಮೇಲೆ ಶಾಕ್…!

ಆ ಮಗುವನ್ನು ಯುವತಿಯ ತಾಯಿ ಸಾವಿತ್ರಮ್ಮ‌ ಆರೈಕೆ ಮಾಡ್ತಿದ್ದರು. ಅಲ್ಲದೇ ಇತ್ತೀಚೆಗೆ ಈ ಯುವತಿ ಸಂಪೂರ್ಣ  ಮಾನಸಿಕ ಖಿನ್ನತೆಗೆ ಒಳಗಾಗಿದ್ದು, ಗ್ರಾಮದ ದೇಗುಲ‌ ಅಥವಾ‌‌ ಮನೆಯಂಗಳದಲ್ಲೇ‌ ಕಾಲ ಕಳೆಯುತಿದ್ದಳು. ಆದ್ರೆ ನಿನ್ನೆ ಸಂಜೆ ದಿಢೀರ್ ಅಂತ ಈಕೆ ನಾಪತ್ತೆಯಾಗಿದ್ದು, ಬೆಳಗಾಗುವಷ್ಟರಲ್ಲಿ ಬೆತ್ತಲಾದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿದೆ. ಈ ದೃಶ್ಯವನ್ನು ಕಂಡ ಯುವತಿಯ ಸಂಬಂಧಿಗಳ ಆಕ್ರೋಶದ ಕಟ್ಟೆ ಒಡೆದಿದೆ. ಇದು ಕೇವಲ ಕೊಲೆ ಮಾತ್ರವಲ್ಲ, ಈಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆಂಬ ಅನುಮಾನ ವ್ಯಕ್ತಪಡಿಸಿದ್ದು, ಈ ಕೃತ್ಯವನ್ನು ಕೇವಲ ಓರ್ವ ವ್ಯಕ್ತಿಯಿಂದ ಮಾಡಲು ಸಾಧ್ಯವಿಲ್ಲ. ಈ ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ. ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬರ್ಬರವಾಗಿ ಹತ್ಯೆಗೈದಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ. 

ಅತ್ಯಾಚಾರ ರಾಜ್ಯವೇ ತಲೆ ತಗ್ಗಿಸುವ ಕೃತ್ಯ: ಶಾಸಕ ವೇದವ್ಯಾಸ್‌ ಕಾಮತ್

ಇನ್ನು ಈ ಮೃತ ಯುವತಿಯ ತಾಯಿ ಸಾವಿತ್ರಮ್ಮ ಮಾತ್ರ, ಅವರ ಸ್ವಗ್ರಾಮದ‌ ಯುವಕನೇ(ಕಾಕಾ)  ಈ ಕೃತ್ಯವೆಸಗಿರಬಹದು ಅಂತ ಅನುಮಾನ ಹೊರಹಾಕಿದ್ದಾರೆ. ಅಲ್ಲದೇ ಆತನನ್ನು ಪೊಲೀಸರು ಕೂಡಲೇ ಬಂಧಿಸಿ ನನ್ನ ಮಗನಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಿ ಎಂದು ಒತ್ತಾಯಿಸಿದರು. ಹೀಗಾಗಿ ಈ ಪ್ರಕರಣದ ತನಿಖೆ‌ ಚುರುಕು ಗೊಳಿಸಿರೋ ಖಾನಾಹೊಸಹಳ್ಳಿ ಠಾಣೆ ಪೊಲೀಸರು, ಘಟನಾ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಎಲ್ಲಾ ಆಯಾಮಗಳಲ್ಲು ತನಿಖೆ ಮುಂದುವರೆಸಿದ್ದಾರೆ. 

ಒಟ್ಟಾರೆ ಚಿಕ್ಕ ವಯಸ್ಸಲ್ಲೇ ತೀವ್ರ ಸಂಕಷ್ಟ‌ ಎದುರಿಸಿದ್ದ ಯುವತಿ ಅನುಮಾನಸ್ಪದವಾಗಿ ಸಾವಿಗೀಡಾಗಿದ್ದಾಳೆ. ಆದ್ರೆ ಏನು ತಪ್ಪೇ ಮಾಡದ ಆಕೆಯ ಕಂದಮ್ಮ ಹೆತ್ತಮ್ಮ ಇಲ್ಲದೇ ಅನಾಥವಾಗಿದೆ. ಹೀಗಾಗಿ ಈ ಸಾವಿನ ಹಿಂದಿರುವ ಅಸಲಿ ಸತ್ಯ ಬಯಲಿಗೆಳೆದು ಈ ಸಾವಿಗೆ ನ್ಯಾಯ ಒದಗಿಸಬೇಕಿದೆ‌. 

click me!