ಪವಿತ್ರಾ ಗೌಡ, ಅನುಕುಮಾರ್‌ ಜಾಮೀನು ಅರ್ಜಿ ವಜಾ ಮಾಡಿದ ಕೋರ್ಟ್‌!

By Santosh Naik  |  First Published Aug 31, 2024, 6:04 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ7 ಅನುಕುಮಾರ್‌ ಅವರ ಜಾಮೀನು ಅರ್ಜಿ ವಜಾಗೊಂಡಿದೆ.



ಬೆಂಗಳೂರು (ಆ.31): ರೇಣುಕಾಸ್ವಾಮಿಯನ್ನು ಅಮಾನುಷವಾಗಿ ಕೊಲೆ ಮಾಡಿದ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಹಾಗೂ ಎ7 ಆರೋಪಿ ಅನುಕುಮಾರ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾ ಮಾಡಿದೆ. ಪವಿತ್ರಾ ಗೌಡ ಪರವಾಗಿ ಬೆಂಗಳೂರು ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ಕೋರ್ಟ್‌ನಲ್ಲಿ ವಕೀಲ ಟಾಮಿ ಸೆಬಾಸ್ಟಿಯನ್‌ ವಾದ ಮಂಡನೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಬಳಿಕ ತೀರ್ಪು ಕಾಯ್ದಿರಿಸಿದ್ದ ಕೋರ್ಟ್‌ ಶನಿವಾರ ತೀರ್ಪು ನೀಡಿದೆ. ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿತ್ತು. ಮಹಿಳೆ ಎನ್ನುವ ಕಾರಣಕ್ಕಾಗಿ ಜಾಮೀನು ಸಿಗುವ ಆಸೆಯಲ್ಲಿದ್ದ ಪವಿತ್ರಾ ಗೌಡಗೆ ನಿರಾಸೆಯಾಗಿದೆ.

ಪರಪ್ಪನ ಅಗ್ರಹಾರದಲ್ಲಿ ನ್ಯಾಯಾಂಗ ಬಂಧನ: ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಹಾಗೂ ಪವಿತ್ರಾ ಗೌಡಗೆ ನ್ಯಾಯಾಂಗ ಬಂಧನ ಅವಧಿಯನ್ನು ಕೋರ್ಟ್‌ ಸೆ. 9ರವರೆಗೂ ವಿಸ್ತರಣೆ ಮಾಡಿದೆ. ಮಂಗಳವಾರ ಎಲ್ಲಾ ಆರೋಪಿಗಳ ನ್ಯಾಯಾಂಗ ಬಂಧನ ಮುಕ್ತಾಯವಾದ ಹಿನ್ನಲೆಯಲ್ಲಿ ಅವರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ಎದುರು ಹಾಜರು ಮಾಡಲಾಗಿತ್ತು. ಈ ವೇಳೆ ಅವರ ನ್ಯಾಯಾಂಗ ಬಂಧವನ್ನು ವಿಸ್ತರಣೆ ಮಾಡಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ 17 ಆರೋಪಿಗಳಿದ್ದು, ಈಗಾಗಲೇ 4 ಆರೋಪಿಗಳನ್ನು ತುಮಕೂರು ಜೈಲ್‌ಗೆ ಶಿಫ್ಟ್‌ ಮಾಡಲಾಗಿತ್ತು.

Latest Videos

undefined

ಒಂದು ಸ್ಟೇಟ್ಮೆಂಟ್.. ನೂರೆಂಟು ಅನುಮಾನದ ಘಾಟು: ದರ್ಶನ್‌ಗೆ ಕಂಟಕವಾಗಿದ್ದೇಕೆ ಆರೋಪಿಗಳ ಆ ಹೇಳಿಕೆ..?

Shed tea stall: ಬಾ ಗುರು ಶೆಡ್ ಗೆ ಟೀ ಕುಡಿಯೋಣ…. ಟೀ ಅಂಗಡಿ ಮುಂದೆ ಶೆಡ್ ಹವಾ..

click me!