ನಿರುದ್ಯೋಗ: 11 ತಿಂಗಳ ಮಗುವನ್ನೇ ಕೊಂದು ಕಾಲುವೆಗೆ ಎಸೆದ ಅಪ್ಪ!

By Santosh Naik  |  First Published Aug 20, 2022, 5:34 PM IST

ನಿರುದ್ಯೋಗದಿಂದ ಬೇಸತ್ತಿದ್ದ ತಂದೆಯೊಬ್ಬ ತನ್ನ 11 ತಿಂಗಳ ಮಗುವನ್ನು ಕೊಂದು ಕಾಲುವೆಗೆ ಎಸೆದ ಘಟನೆ ರಾಜಸ್ಥಾನದ ಜಲೋರ್‌ನಲ್ಲಿ ನಡೆದಿದೆ. ಅಂದಾಜು 24 ಗಂಟೆಗಳ ಬಳಿಕ ಮಗುವಿನ ಶವ ಸಿಕ್ಕಿದ್ದು, ಅಂತ್ಯಸಂಸ್ಕಾರ ಮಾಡಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತಂದೆಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.


ಜಲೋರ್‌ (ಆ.20): ಹಣಕಾಸಿನ ತೊಂದರೆಯಿಂದ ಬಳಲುತ್ತಿದ್ದ ತಂದೆ, ತನ್ನ 11 ತಿಂಗಳ ಗಂಡು ಮಗುವನ್ನು ಕೊಂದು ನರ್ಮದಾ ಕಾಲುವೆಗೆ ಎಸೆದ ಪೈಶಾಚಿಕ ಘಟನೆ ರಾಜಸ್ಥಾನದ ಜಲೋರ್‌ನಲ್ಲಿ ವರದಿಯಾಗಿದೆ. ಆರೋಪಿ ಎರಡು ವರ್ಷದ ಹಿಂದೆ ಪ್ರೇಮವಿವಾಹವಾಗಿದ್ದ. ಆದರೆ, ನಿರುದ್ಯೋಗದ ಕಾರಣ ಮನೆಯನ್ನು ಸುಸೂತ್ರವಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಹೀಗಿದ್ದಾಗ ಮಗುವನ್ನು ಕೊಲ್ಲಲು ಆತ ಪ್ಲ್ಯಾನ್‌ ಮಾಡಿದ್ದ. ಅಜ್ಜಿ-ಅಜ್ಜಿಯ ಬಳಿ ಪತ್ನಿ ಹಾಗೂ ಮಗುವನ್ನು ಬಿಡುವ ನೆಪದಲ್ಲಿ ಗುಜರಾತ್‌ನಿಂದ ರಾಜಸ್ಥಾನಕ್ಕೆ ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಜಾಲೋರ್‌ನ ಸಂಚೋರ್‌ನಲ್ಲಿ ನಡೆದಿದೆ. ಸುಮಾರು 24 ಗಂಟೆಗಳ ನಂತರ 11 ವರ್ಷದ ಮಗುವಿನ ಶವ ಪತ್ತೆಯಾಗಿದೆ. ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ಮುಖೇಶ್ (24) ಬನಸ್ಕಾಂತದ ವಾವ್ ಪೊಲೀಸ್ ಠಾಣೆ ವ್ಯಾಪ್ತಿಯ ನಲೋಧರ್ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.ಸಂಚೋರ್ ಪೊಲೀಸ್ ಠಾಣೆಯ ಎಎಸ್‌ಐ ರಾಜು ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ, ತಮ್ಮ 11 ತಿಂಗಳ ಮಗನ ಕೊಲೆಗೂ ಮುನ್ನ, ಗುರುವಾರ ಸಿದ್ಧೇಶ್ವರ (ಸಂಚೋರ್) ಗ್ರಾಮದಲ್ಲಿ ರಾಮದೇವರ ಯಾತ್ರಾರ್ಥಿಗಳಿಗಾಗಿ ಸ್ಥಾಪಿಸಲಾದ ರಾಮ್ ರಸೋಡಾದಲ್ಲಿ ಭೋಜನ ಮಾಡಿದ್ದರು ಎಂದು ತಿಳಿಸಿದ್ದಾರೆ.

ನರ್ಮದಾ ಕಾಲುವೆ ಎಸೆದಿದ್ದ: ದೇವಸ್ಥಾನದಲ್ಲಿ ಭೋಜನ ಮಾಡುವ ವೇಳೆ ಪತ್ನಿಯೊಂದಿಗೆ ಮಾತನಾಡಿದ್ದ ಆತ, 'ನನ್ನ ಕುಟುಂಬದವರು ಪ್ರೇಮವಿವಾಹಕ್ಕೆ ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅವರ ಮನೆಗೆ ನಾನೊಬ್ಬನೇ ಹೋಗುತ್ತೇನೆ. ಹಾಗು ಮಗುವನ್ನು ಅಜ್ಜ-ಅಜ್ಜಿಯ ಬಳಿ ಬಿಟ್ಟು ಬರುತ್ತೇನೆ' ಎಂದು ಹೇಳಿದ್ದ. ಪೊಲೀಸರು ನೀಡಿದ ಮಾಹಿತಿಯಯ ಪ್ರಕಾರ, ಪತ್ನಿಯನ್ನು ದೇವಸ್ಥಾನದ ಬಳಿಯೇ ನಿಲ್ಲಿಸಿದ್ದ ಮುಖೇಶ್‌, 200 ಮೀಟರ್‌ ದೂರ ಹೋಗಿ ಮಗುವನ್ನು ಕೊಂದು ಕಾಲುವೆಗೆ ಎಸೆದಿದ್ದ. ಬಳಿಕ ದೇವಸ್ಥಾನಕ್ಕೆ ಬಂದಿದ್ದ ಮುಖೇಶ್‌, ನಮ್ಮ ಮನೆಯ ಹೊರಗಡೆ ಮಗುವನ್ನು ಬಿಟ್ಟು ಬಂದಿದ್ದೇನೆ. ಕುಟುಂಬದವರಿಗೆ ಫೋನ್‌ ಮಾಡಿ ವಿಚಾರ ತಿಳಿಸುತ್ತೇನೆ ಎಂದು ಪತ್ನಿಗೆ ಹೇಳಿದ್ದ.

Tap to resize

Latest Videos

ಎರಡು ವರ್ಷದ ಹಿಂದೆ ಪ್ರೇಮವಿವಾಹ: ಸುಮಾರು 2 ವರ್ಷಗಳ ಹಿಂದೆ ಬಿಹಾರದ ಮುಜಾಫರ್‌ಪುರದ ಯುವತಿಯೊಂದಿಗೆ ಪ್ರೇಮವಿವಾಹವಾಗಿತ್ತು ಎಂದು ಮುಖೇಶ್ ಪೊಲೀಸರಿಗೆ ತಿಳಿಸಿದ್ದಾರೆ. ಮದುವೆಯ ನಂತರ ಪತ್ನಿಯೊಂದಿಗೆ ಅಹಮದಾಬಾದ್‌ನಲ್ಲಿ ವಾಸವಾಗಿದ್ದರು. ಅಲ್ಲಿ ಅವರು ಸೆಕ್ಯುರಿಟಿ ಗಾರ್ಡ್‌ಆಗಿ ಕೆಲಸ ಮಾಡಿದರು. ಸುಮಾರು 7 ತಿಂಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು. ಸಂಸಾರ ನಡೆಸುವ ಸಲುವಾಗಿ ಭಿಕ್ಷೆಯನ್ನೂ ಬೇಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಹಣಕಾಸಿನ ತೊಂದರೆಯಿಂದ ಕಂಕರಿಯಾ (ಅಹಮದಾಬಾದ್) ಕೊಳಕ್ಕೆ ಇಡೀ ಕುಟುಂಬದೊಂದಿಗೆ ಹಾರಿ ಆತ್ಮಹತ್ಯೆಗೆ ಯೋಜಿಸಿದ್ದರು, ಆದರೆ ಅಲ್ಲಿ ಜನರ ಚಲನವಲನದಿಂದಾಗಿ ಅವರು ಅದನ್ನು ಮಾಡಲು ಸಾಧ್ಯವಾಗಲಿಲ್ಲ.

ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, ನಂತರ ಗ್ಯಾಂಗ್‌ರೇಪ್‌

20 ಕಿಲೋಮೀಟರ್‌ ದೂರದಲ್ಲಿ ಸಿಕ್ಕ ಶವ: ರಾಮ್ ರಸೋದೆಯಲ್ಲಿ, ಪೊಲೀಸ್ ಸ್ನೇಹಿತ ಕನಾ ರಾಮ್ (43) ಮೊದಲು ಮಗುವಿನೊಂದಿಗೆ ಗಂಡ ಮತ್ತು ಹೆಂಡತಿಯನ್ನು ನೋಡಿದ್ದರು, ಆದರೆ ಸ್ವಲ್ಪ ಸಮಯದ ನಂತರ ಅವರ ಬಳಿ ಮಗು ಇರಲಿಲ್ಲ. ಅನುಮಾನಗೊಂಡ ಅವರು ಸಂಚೋರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಯನ್ನು ಕಸ್ಟಡಿಗೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ನಿರುದ್ಯೋಗದಿಂದಾಗಿ ಮಗುವಿಗೆ ಆಹಾರ ನೀಡಲು ನನ್ನ ಬಳಿ ಏನೂ ಇಲ್ಲ, ಆದ್ದರಿಂದ ಕಾಲುವೆಗೆ ಎಸೆದಿದ್ದೇನೆ ಎಂದು ಆತ ಹೇಳಿದ್ದ. ಆರೋಪಿಗಳ ತಪ್ಪೊಪ್ಪಿಗೆ ಬಳಿಕ ಶುಕ್ರವಾರ ಸಂಜೆ 5 ಗಂಟೆ ಸುಮಾರಿಗೆ ಸಿದ್ಧೇಶ್ವರದಿಂದ 20 ಕಿ.ಮೀ ದೂರದ ಟೆಟ್ರೋಲ್‌ನಲ್ಲಿ ಕಾಲುವೆಯಿಂದ ಮಗುವಿನ ಶವವನ್ನು ಪೊಲೀಸರು ಹೊರತೆಗೆದು ಮರಣೋತ್ತರ ಪರೀಕ್ಷೆಯ ನಂತರ ನಗರಸಭೆಯ ನೆರವಿನೊಂದಿಗೆ ಅಂತ್ಯಸಂಸ್ಕಾರ ಮಾಡಿದರು.

ಗಂಡನ ಫ್ರೆಂಡ್‌ ಮೇಲೆ ಲವ್‌, ಪತಿ ಹತ್ಯೆಗೆ ಪತ್ನಿ ಸುಪಾರಿ, ಹೆದರಿ ಪ್ರಿಯಕರ ಆತ್ಮಹತ್ಯೆ..!

ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದ: ಕೆಲ ದಿನಗಳ ಹಿಂದೆ ಪತ್ನಿಯೊಂದಿಗೆ ಮಾತನಾಡಿದ್ದ ಮುಖೇಶ್‌, ಹಸಿವಿನಿಂದ ಸಾಯುತ್ತಿದ್ದೇವೆ. ರಸ್ತೆಯಲ್ಲಿ ತಿರುಗಾಡುತ್ತಿದ್ದೇವೆ. ಇದು ನನಗೆ ಸರಿ ಅನಿಸುತ್ತಿಲ್ಲ. 5-6 ದಿನಗಳ ಹಿಮದೆ ಅಹಮದಾಬಾದ್‌ನಲ್ಲಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದರು. ಆದರೆ, ವಾಪಸ್‌ ಬಂದಿದ್ದ ಮುಖೇಶ್‌ ಸಾಯೋದು ಬೇಡ. ಮಗುವನ್ನು ಪೋಷಕರ ಬಳಿ ಬಿಡೋಣ, ಇಬ್ಬರು ಒಟ್ಟಿಗೆ ಸೇರಿ ಕೆಲಸ ಮಾಡೋಣ ಎಂದಿದ್ದ. ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು, ಆದರೆ ಮ್ಯಾನೇಜರ್ ಸೆಕ್ಯುರಿಟಿ ಗಾರ್ಡ್‌ಗಳನ್ನು ಬದಲಾಯಿಸುತ್ತಲೇ ಇದ್ದರು, ಆದ್ದರಿಂದ ಕೆಲಸ ಕಳೆದುಕೊಂಡು ಹಸಿವಿನಿಂದ ಬಳಲುತ್ತಿದ್ದರು. ನಾನು ನನ್ನ ಮನೆಗೆ ಹಿಂತಿರುಗಲು ಸಹ ಸಾಧ್ಯವಾಗಲಿಲ್ಲ. ಯಾವ ಹೆಜ್ಜೆ ಇಟ್ಟರೂ ವಾಪಸ್ ಮಾತ್ರ ಬರಬೇಡಿ ಎಂದು ಕುಟುಂಬಸ್ಥರು ಹೇಳಿದ್ದರು ಎಂದು ಪತ್ನಿ ಹೇಳಿದ್ದಾಳೆ.

click me!