ಅಪ್ರಾಪ್ತೆ ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ, ನೋಡಿ ಖುಷಿ ಪಟ್ಟ ಮಹಿಳೆ!

Published : Aug 20, 2022, 04:12 PM ISTUpdated : Aug 20, 2022, 04:49 PM IST
ಅಪ್ರಾಪ್ತೆ ಸ್ನೇಹಿತೆ ಮೇಲೆ ಸಾಮೂಹಿಕ ಅತ್ಯಾಚಾರ, ನೋಡಿ ಖುಷಿ ಪಟ್ಟ ಮಹಿಳೆ!

ಸಾರಾಂಶ

ಮುಂಬೈನಲ್ಲಿ ಮೂವರು ಆರೋಪಿಗಳು ಅಪ್ರಾಪ್ತೆ ಮೇಲೆ ಗ್ಯಾಂಗ್‌ ರೇಪ್‌ ಮಾಡಿದ್ದು, ಮಹಿಳಾ ಸ್ನೇಹಿತೆ ಅತ್ಯಾಚಾರವನ್ನು ನೋಡುತ್ತಾ ಕೂತಿದ್ದರು ಎಂದೂ ವರದಿಯಾಗಿದೆ. ಮುಂಬೈನ ವಿರಾರ್‌ ಪಶ್ಚಿಮ ಪ್ರದೇಶದಲ್ಲಿ ಈ ಘಟನೆ ನಡೆದಿದೆ. 

ಪುರುಷರು ಅಥವಾ ಯುವಕರು ಹುಡುಗಿಯರ ಅಥವಾ ಮಹಿಳೆಯರ ಮೇಲೆ ಅತ್ಯಾಚಾರದ ಪ್ರಕರಣಗಳನ್ನು ಆಗಾಗ್ಗೆ ಕೇಳುತ್ತಿರುತ್ತೀರಿ ಅಥವಾ ಓದುತ್ತಿರುತ್ತೀರಿ. ಆದರೆ, ಇಲ್ಲಿ ಮಹಿಳಾ ಸ್ನೇಹಿತೆಯೇ ತನ್ನ 11 ವರ್ಷದ ಸ್ನೇಹಿತೆ ಮೇಲೆ ಅತ್ಯಾಚಾರ ಮಾಡಲು ಮೂವರು ಪುರುಷರಿಗೆ ಆದೇಶಿಸಿರುವ ಶಾಕಿಂಗ್‌ ಘಟನೆ ಮುಂಬೈನಲ್ಲಿ ನಡೆದಿದೆ. ಆಗಸ್ಟ್ 17 ರ ಬುಧವಾರದ ಮುಂಜಾನೆ ಮುಂಬೈನ ವಿರಾರ್ (ಪಶ್ಚಿಮ) ಪ್ರದೇಶದಲ್ಲಿ 11 ವರ್ಷದ ಬಾಲಕಿಯನ್ನು ಆಕೆಯ 21 ವರ್ಷದ ಮಹಿಳಾ ಸ್ನೇಹಿತೆಯ ಆಜ್ಞೆಯ ಮೇರೆಗೆ ಮೂವರು ಪುರುಷರು ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ಇನ್ನು, ಈ ಘಟನೆ ನಡೆದ 6 ಗಂಟೆಗಳಲ್ಲಿ ಮೂವರು ಆರೋಪಿಗಳು ಸೇರಿದಂತೆ ಮಹಿಳಾ ಸ್ನೇಹಿತೆಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ, ಆಗಸ್ಟ್ 16 ರಂದು ಸಂಜೆ 7 ಗಂಟೆಗೆ 7ನೇ ತರಗತಿಯಲ್ಲಿ ಓದುತ್ತಿರುವ ಸಂತ್ರಸ್ಥೆ ತನ್ನ ಸೆಲ್ ಫೋನ್ ರಿಪೇರಿ ಮಾಡಲು ತನ್ನ ಮನೆಯ ಸಮೀಪವಿರುವ ಅಂಗಡಿಗೆ ಹೋದಾಗ ಈ ಘಟನೆ ಸಂಭವಿಸಿದೆ. ಅಲ್ಲಿ ಆಕೆ ತನ್ನ 21 ವರ್ಷದ ಮಹಿಳಾ ಸ್ನೇಹಿತೆಯನ್ನು ಭೇಟಿಯಾದಳು, ಆಕೆ ಬಾಲಕಿಯನ್ನು ಅಡ್ಡಾಡಲು ಕರೆದೊಯ್ದಿದ್ದಾಳೆ. ನಂತರ, 11 ವರ್ಷದ ಸ್ನೇಹಿತೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಮಹಿಳೆಯ ಮೂವರು ಪುರುಷ ಸ್ನೇಹಿತರನ್ನು ಕರೆದಿದ್ದಾಳೆ. ಅವರು ಮಧ್ಯರಾತ್ರಿಯ ನಂತರ ಸ್ಥಳಕ್ಕೆ ತಲುಪಿದರು ಮತ್ತು ಗಣೇಶ ಹಬ್ಬಕ್ಕಾಗಿ ಸ್ಥಾಪಿಸಲಾದ ಪೆಂಡಾಲ್‌ನ ಹಿಂದಿನ ಸ್ಥಳಕ್ಕೆ ಹುಡುಗಿಯನ್ನು ಕರೆದೊಯ್ದು ಲಾಕ್‌ ಮಾಡಿಕೊಂಡಿದ್ದಾರೆ. 

ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, ನಂತರ ಗ್ಯಾಂಗ್‌ರೇಪ್‌

ಈ ವೇಳೆ ಹುಡುಗಿಯ ಸ್ನೇಹಿತೆ ಸಂತ್ರಸ್ಥೆಗೆ ಬೆದರಿಕೆ ಹಾಕಿದ್ದು, ಒಬ್ಬ ವ್ಯಕ್ತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಕೇಳಿದ್ದಾರೆ. ನಂತರ, ಇಬ್ಬರು ಗಂಡಸರು ಸರದಿಯಂತೆ ಆಕೆಯ ಮೇಲೆ ಅತ್ಯಾಚಾರ ಎಸಗಿದರೆ, ಇನ್ನೊಬ್ಬ ವ್ಯಕ್ತಿ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇನ್ನೊಂದೆಡೆ, ಸಂತ್ರಸ್ತೆಯ ಮಹಿಳಾ ಸ್ನೇಹಿತೆ ಅತ್ಯಚಾರ ಹಾಗೂ ಲೈಂಗಿಕ ಕಿರುಕುಳವನ್ನು ವೀಕ್ಷಿಸಿದ್ದಾರೆ. ನಂತರ, ಬುಧವಾರ ಮುಂಜಾನೆ 5 ಗಂಟೆ ವೇಳೆಗೆ ಸಂತ್ರಸ್ಥೆಯನ್ನು ಆಕೆಯ ಮನೆಯ ಬಳಿ ಬಿಟ್ಟು ಹೋಗಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, 11 ವರ್ಷದ ಸಂತ್ರಸ್ಥೆ ಮನೆಗೆ ಬಂದು ಘಟನೆಯನ್ನು ವಿವರಿಸಿದ್ದು, ಬಳಿಕ ಆಕೆಯ ತಾಯಿ ಮುಂಬೈನ ವಿರಾರ್‌ ಪ್ರದೇಶಧ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಪೊಲೀಸರು ಆರೋಪಿಯನ್ನು ಹಿಡಿಯಲು ತಂಡಗಳನ್ನು ರಚಿಸಿದ್ದು, ಸಂತ್ರಸ್ತ ಮಹಿಳೆಯ ಸ್ನೇಹಿತೆಯ ಜಾಡು ಹಿಡಿದಿದ್ದಾರೆ. ಅಲ್ಲದೆ, ಪುರುಷ ಆರೋಪಿಗಳಲ್ಲಿ ಒಬ್ಬ ಕಾಲೇಜು ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ತರಕಾರಿ ಮಾರಾಟಗಾರ ಎಂದು ತಿಳಿದುಬಂದಿದ್ದು, ವಿರಾರ್ ನಿವಾಸಿಗಳಾದ ಈ ಇಬ್ಬರನ್ನೂ 3 ಗಂಟೆಗಳಲ್ಲಿ ಬಂಧಿಸಲಾಗಿದೆ.

ಬಿಜೆಪಿ ನಾಯಕ ಹುಸೇನ್‌ ವಿರುದ್ಧ ಅತ್ಯಾಚಾರ ಆರೋಪ: ಮಧ್ಯಂತರ ತಡೆ ನೀಡಲು ಸುಪ್ರೀಂಕೋರ್ಟ್‌ ನಿರಾಕರಣೆ
 
ಆದರೆ, ಮತ್ತೊಬ್ಬ ಆರೋಪಿ ಇನ್ನೂ ತಪ್ಪಿಸಿಕೊಂಡಿದ್ದು, ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುವ ಡ್ರಗ್ ಡೀಲರ್ ಎಂದು ಹೇಳಲಾದ ಮೂರನೇ ಪುರುಷ ಆರೋಪಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಅಸ್ವಾಭಾವಿಕ ಲೈಂಗಿಕತೆ ಹಾಗೂ ಪೋಕ್ಸೋ ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಅವರನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ತಿಳಿದುಬಂದಿದೆ. ಮೂವರಲ್ಲಿ ಇಬ್ಬರು 22 ವರ್ಷ ವಯಸ್ಸಿನ ಪುರುಷರು ಎಂದು ತಿಳಿದುಬಂದಿದ್ದು, ಇನ್ನೊಬ್ಬ ಆರೋಪಿ 20 ವರ್ಷ ವಯಸ್ಸಿನವರು ಎಂದು ವರದಿಯಾಗಿದೆ. ಅಲ್ಲದೆ, ಸಂತ್ರಸ್ಥೆ ಅಪ್ರಾಪ್ತ ಹುಡುಗಿ ಎಂದು ಗೊತ್ತಿದ್ದರೂ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಹಾಗೂ ಆಕೆಯ ಸ್ನೇಹಿತೆ ಅತ್ಯಾಚಾರಕ್ಕೆ ಪುಸಲಾಯಿಸಿ, ಸುಮ್ಮನೆ ನಿಂತು ನೋಡಿದ್ದಾರೆ ಎಂದೂ ವರದಿಯಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ