ಕೆಲಸ ಕೊಡಿಸುವುದಾಗಿ ಕರೆತಂದು ವೇಶ್ಯಾವಾಟಿಕೆಗೆ ತಳ್ಳಿದ ಪ್ರಿಯಕರ, ನಂತರ ಗ್ಯಾಂಗ್‌ರೇಪ್‌

By Sharath Sharma  |  First Published Aug 20, 2022, 2:28 PM IST

ಕೆಲಸ ಕೊಡಿಸುವುದಾಗಿ ನಂಬಿಸಿ ಪ್ರೇಯಸಿಯನ್ನೇ ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣ ಬೆಂಗಳೂರಲ್ಲಿ ನಡೆದಿದೆ. ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳಿದ ನಂತರ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ.


ಬೆಂಗಳೂರು: ಕೆಲಸ ಕೊಡಿಸುವುದಾಗಿ ಬೆಂಗಳೂರಿಗೆ ಕರೆತಂದು ವೇಶ್ಯಾಟಿಕೆ ದಂಧೆಗೆ ನೂಕಿರುವ ಘಟನೆ ಬೆಳಕಿದೆ ಬಂದಿದೆ. ವೇಶ್ಯಾವಾಟಿಕೆ ಅಡ್ಡ ಮೇಲೆ ದಾಳಿ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದ್ದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಗ್ಯಾಂಗ್ ರೇಪ್ ಮಾಡಲಾಗಿದೆ ಎಂದು ಯುವತಿ ದೂರು ನೀಡಿದ್ದಾಳೆ. ಇಷ್ಟಕ್ಕೂ ಆಕೆಯನ್ನು ಪ್ರಿಯಕರನೇ ಬೆಂಗಳೂರಿಗೆ ಕರೆತಂದು ಮಂಜುಳ ಎಂಬ ಪಿಂಪ್‌ ಸಂಪರ್ಕಕ್ಕೆ ಬಿಟ್ಟಿದ್ದ. ಕಳೆದ ಮೂರು ವರ್ಷಗಳ ಹಿಂದೆ ಮಂಡ್ಯ ಮೂಲದ ಯುವತಿ ಬೆಂಗಳೂರಿಗೆ ಕರೆತರಲಾಗಿತ್ತು. ಕೆಲಸ ಕೊಡಿಸುತ್ತಾರೆ ಎಂದು ಯುವತಿ ಬೆಂಗಳೂರಿಗೆ ಬಂದಿದ್ದಳು. ಆದರೆ ಇಲ್ಲಿ ಆದ ಕತೆಯೇ ಬೇರೆ. ಮಂಜುಳ ಬಳಿ ಪ್ರೇಯಸಿಯನ್ನು ಕರೆತಂದು ಬಿಟ್ಟ ಬಾಯ್‌ಫ್ರೆಂಡ್‌ ಅವರು ಕೆಲಸ ಕೊಡಿಸುತ್ತಾರೆ ಎಂದು ಹೇಳಿ ಹೊರಟು ಹೋದ. ಮಂಜುಳ ಯುವತಿಯನ್ನ ವೇಶ್ಯಾವಾಟಿಕೆ ಜಾಲಕ್ಕೆ ತಳ್ಳಿದ್ಲು.

ಇದನ್ನೂ ಓದಿ: ಗಂಡನ ಫ್ರೆಂಡ್‌ ಮೇಲೆ ಲವ್‌, ಪತಿ ಹತ್ಯೆಗೆ ಪತ್ನಿ ಸುಪಾರಿ, ಹೆದರಿ ಪ್ರಿಯಕರ ಆತ್ಮಹತ್ಯೆ..!

Tap to resize

Latest Videos

ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ದಂಧೆಗಾಗಿ ಹೊಟೇಲ್‌ಗೆ ಯುವತಿಯನ್ನು ಕಳುಹಿಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಈ ವೇಳೆ ಹಲವರು ಏಕಕಾಲಕ್ಕೆ ದೌರ್ಜನ್ಯ ಎಸಗಿರುವುದಾಗಿ ಯುವತಿ ಮಾಹಿತಿ ನೀಡಿದ್ದಾಳೆ. ಪ್ರಕರಣ ಸಂಬಂಧ ಪಿಂಪ್‌ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುಳ, ಬ್ರಹ್ಮೇಂದ್ರ, ಶಿವಾನಂದ ಸರ್ಕಲ್ ಬಳಿ ಇರುವ ಸಾಯಿ ಲಾಡ್ಜ್ ಮಾಲೀಕ ಸಂತೋಷ್‌ರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ವೇಶ್ಯಾವಾಟಿಕೆಗೆ ಬೆಂಬಲ ನೀಡುತ್ತಿದ್ದ ಆರೋಪದ ಮೇಲೆ ಲಾಡ್ಜ್ ಮಾಲೀಕನನ್ನೂ ಪೊಲೀಸರು ಬಂಧಿಸಿದ್ದಾರೆ. ದಂಧೆಯಲ್ಲಿ ಹಲವು ರೌಡಿಗಳು ಭಾಗಿಯಾಗಿರುವ ಬಗ್ಗೆಯೂ ಪೊಲೀಸರಿಗೆ ಮಾಹಿತಿಯಿದ್ದು ತನಿಖೆ ಚುರುಕುಗೊಳಿಸಿದ್ದಾರೆ. ಗ್ಯಾಂಗ್ ರೇಪ್ ಮಾಡಿದ ಆರೋಪಿಗಳು ಹಾಗೂ ರೌಡಿಶೀಟರ್ ಗಳ ಹುಡುಕಾಟಕ್ಕೆ ಇಲಾಖೆ ಮುಂದಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಹೈಗ್ರೌಂಡ್ಸ್ ಪೊಲೀಸರು. ಯುವತಿಯ ಹೇಳಿಕೆಯ ಮೇಲೆ ಪ್ರಕರಣ ಗಂಭಿರವಾಗಿ ಪರಿಗಣಿಸಿದ್ದಾರೆ. 

ಇದನ್ನೂ ಓದಿ: 11 ವರ್ಷದ ಸ್ನೇಹಿತೆಯನ್ನು ಅತ್ಯಾಚಾರ ಮಾಡಲು ಮೂವರನ್ನು ಹೈರ್‌ ಮಾಡಿದ ಗೆಳತಿ

ವೇಶ್ಯಾವಾಟಿಕೆ ಪ್ರಕರಣಗಳು ಬೆಂಗಳೂರಿನಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿದ್ದು ಪೊಲೀಸರು ಆಗಾಗ ದಾಳಿ ನಡೆಸುತ್ತಿದ್ದಾರೆ. ಆದರೆ ಕೆಲಸ ಕೊಡುವ ಭರವಸೆ ನೀಡಿ ವೇಶ್ಯಾವಾಟಿಕೆಗೆ ತಳ್ಳಿದ ಪ್ರಕರಣ ಈಗ ಬೆಳಕಿಗೆ ಬಂದಿದೆ. ವೇಶ್ಯಾವಾಟಿಕೆಯಲ್ಲಿ ಭಾಗಿಯಾಗುವ ಎಷ್ಟೋ ಮಹಿಳೆಯರು ಅಪಹರಣಕ್ಕೊಳಗಾಗಿ ಅಥವಾ ಬೆದರಿಕೆಯಿಂದ ಅಥವಾ ಆರ್ಥಿಕ ಸಂಕಷ್ಟದಿಂದ ಭಾಗಿಯಾಗಿರುತ್ತಾರೆ.

click me!