7 ಕೋಟಿ ಮೊತ್ತದ ವಜ್ರಾಭರಣದೊಂದಿಗೆ ರಾಧಿಕಾ ಡೈಮಂಡ್ಸ್‌ನ ಕಾರು ಚಾಲಕ ಎಸ್ಕೇಪ್

Published : Feb 19, 2023, 01:51 PM IST
7 ಕೋಟಿ ಮೊತ್ತದ  ವಜ್ರಾಭರಣದೊಂದಿಗೆ ರಾಧಿಕಾ ಡೈಮಂಡ್ಸ್‌ನ ಕಾರು ಚಾಲಕ ಎಸ್ಕೇಪ್

ಸಾರಾಂಶ

ವಜ್ರಾಭರಣ ತಯಾರಕ ಸಂಸ್ಥೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಚಾಲಕನೋರ್ವ ಕಾರಿನಲ್ಲಿದ್ದ 7 ಕೋಟಿ ಮೌಲ್ಯದ ವಜ್ರಾಭರಣದೊಂದಿಗೆ ಪರಾರಿಯಾದ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದ್ದು, ವಜ್ರಾಭರಣ ಹೊತ್ತೊಯ್ದ ಕಾರು ಚಾಲಕನ ಪತ್ತೆಗಾಗಿ ಪೊಲೀಸರು ತಂಡ ರಚಿಸಿದ್ದಾರೆ. 

ಹೈದರಾಬಾದ್‌: ವಜ್ರಾಭರಣ ತಯಾರಕ ಸಂಸ್ಥೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಚಾಲಕನೋರ್ವ ಕಾರಿನಲ್ಲಿದ್ದ 7 ಕೋಟಿ ಮೌಲ್ಯದ ವಜ್ರಾಭರಣದೊಂದಿಗೆ ಪರಾರಿಯಾದ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದ್ದು, ವಜ್ರಾಭರಣ ಹೊತ್ತೊಯ್ದ ಕಾರು ಚಾಲಕನ ಪತ್ತೆಗಾಗಿ ಪೊಲೀಸರು ತಂಡ ರಚಿಸಿದ್ದಾರೆ. 

ವಜ್ರಾಭರಣ ಸಂಸ್ಥೆ ಪ್ರತಿನಿಧಿಗಳು ವಜ್ರಾಭರಣದೊಂದಿಗೆ ಆತನೊಬ್ಬನನ್ನೇ ಬಿಟ್ಟು ಗ್ರಾಹಕರೊಂದಿಗೆ ಮಾತುಕತೆ ನಡೆಸಲು ಹೋದಾಗ ಈತ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಹೈದರಾಬಾದ್‌ನ ಗಚ್ಚಿಬೌಲಿ (Gachibowli) ಅಲ್ಲಿರುವ ವಜ್ರಾಭರಣ ಸಂಸ್ಥೆಗೆ ಸೇರಿದ ವಜ್ರಾಭರಣ ಇದಾಗಿದ್ದು, ಚಾಲಕ ಶ್ರೀನಿವಾಸ್ ಪರಾರಿಯಾದವ.  ಎಸ್. ಆರ್ ನಗರದ ಬಳಿ ಈ ಘಟನೆ ನಡೆದಿದ್ದು, ಆರೋಪಿಯ ಬಂಧನಕ್ಕೆ ಪೊಲೀಸರು ನಾಲ್ಕು ವಿಶೇಷ ತಂಡವನ್ನು ರಚಿಸಿದ್ದು, ಆಂಧ್ರಪ್ರದೇಶ ಹಾಗೂ ಹೈದರಾಬಾದ್‌ನಲ್ಲಿ ಆತನಿಗಾಗಿ ಶೋಧ ನಡೆಸುತ್ತಿದ್ದಾರೆ. 

ಈ ಬಗ್ಗೆ ಶುಕ್ರವಾರ 7.30ರ ಸುಮಾರಿಗೆ ಎಸ್‌.ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ರಾಧಿಕಾ ಡೈಮಂಡ್ (Radhika Diamond) ಕಂಪನಿಗೆ ಸೇರಿದ ಸೇಲ್ಸ್ ಎಕ್ಸಿಕ್ಯೂಟಿವ್ ಪಿ. ಅಕ್ಷಯ್ ಕುಮಾರ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದು, ನಮ್ಮ ಸಂಸ್ಥೆಯ ಕಾರು ಚಾಲಕ 7 ಕೋಟಿ ಮೊತ್ತದ ವಜ್ರಾಭರಣದೊಂದಿಗೆ ಪರಾರಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.  ರಾಧಿಕಾ ಡೈಮಂಡ್ ಸಂಸ್ಥೆಯೂ ಗ್ರಾಹಕರ ಇಚ್ಚೆಗೆ ತಕ್ಕಂತೆ ವಜ್ರಾಭರಣವನ್ನು ವಿನ್ಯಾಸಗೊಳಿಸಿ ಅವರಿಗೆ ನೀಡುವ ಕೆಲಸ ಮಾಡುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಜಗತ್ತಿನ ಪ್ರಸಿದ್ಧ ರಾಜ ಮನೆತನದ ಒಡೆತನದಲ್ಲಿರುವ ದುಬಾರಿ ವಜ್ರಾಭರಣಗಳಿವು..!

ಶುಕ್ರವಾರ ಸಂಜೆ ಕಾರಿನಲ್ಲಿ ಚಾಲಕ ಶ್ರೀನಿವಾಸ್ (Srinivas) ಜೊತೆ ಅಕ್ಷಯ್‌ಕುಮಾರ್ ಗಚ್ಚಿಬೌಲಿಯಲ್ಲಿರುವ ಶಾಪ್‌ನಿಂದ ಎಸ್ ಆರ್ ನಗರದ ಮಧುರಾ ನಗರದ ಬಳಿ ಇರುವ ಗ್ರಾಹಕರೊಬ್ಬರಿಗೆ ಕಿವಿಯೋಲೆಯ ವಜ್ರಾಭರಣವನ್ನು ಪೂರೈಕೆ ಮಾಡುವ ಸಲುವಾಗಿ  ಹೊರಟಿದ್ದಾರೆ.  ನಾನು ಕಿವಿಯೋಲೆಯೊಂದಿಗೆ ಗ್ರಾಹಕರ ಮನೆಯೊಳಗೆ ಹೋದೆ, ಹೋಗುವ ಮೊದಲು ಕಾರು ಚಾಲಕ ಶ್ರೀನಿವಾಸ್‌ಗೆ ಜಾಗರೂಕನಾಗಿರುವಂತೆ ಹೇಳಿ ಹೋಗಿದೆ.

ನಂತರ ಗ್ರಾಹಕರ ಮನೆಯಿಂದ ವಾಪಸ್ ಬಂದು ನೋಡಿದಾಗ ಕಾರು ಅಲ್ಲಿರಲಿಲ್ಲ.  ನಂತರ ಸುತ್ತಮುತ್ತ ಎಲ್ಲಾ ಕಡೆ ಕಾರಿಗಾಗಿ ಹುಡುಕಾಡಿ ಚಾಲಕ ಶ್ರೀನಿವಾಸ್‌ಗೆ ಕರೆ ಮಾಡಿದಾಗ ಆತನ ನಂಬರ್ ಸ್ವಿಚ್ ಆಫ್ ಬರುತ್ತಿತ್ತು. ಕೂಡಲೇ ರಾಧಿಕಾ ಡೈಮಂಡ್‌ನ ಮಾಲೀಕರಾದ ರಾಧಿಕಾಗೆ ಕರೆ ಮಾಡಿ ಮಾಹಿತಿ ನೀಡಿದೆ ಎಂದು ಅಕ್ಷಯ್ ಕುಮಾರ್ (Akshay Kumar) ಘಟನೆ ಬಗ್ಗೆ ವಿವರಿಸಿದ್ದಾರೆ. ಇತ್ತ ರಾಧಿಕಾ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಅಕ್ಷಯ್‌ಗೆ ದೂರು ನೀಡುವಂತೆ ಸೂಚಿಸಿದ್ದಾರೆ. ಅದರಂತೆ ಅಕ್ಷಯ್ ಎಸ್‌.ಆರ್ ನಗರ ಪೊಲೀಸರಿಗೆ ಈ ಕಳವು ಪ್ರಕರಣದ ಬಗ್ಗೆ ದೂರು ನೀಡಿದ್ದಾನೆ ಎಂದು ಎಸ್.ಆರ್ ನಗರ ಇನ್ಸ್‌ಪೆಕ್ಟರ್ ಸೈದುಲ್ ಹೇಳಿದ್ದಾರೆ. 

ನೀರವ್‌ 1350 ಕೋಟಿ ರೂ. ವಜ್ರಾಭರಣ ಭಾರತ ವಶಕ್ಕೆ!

ಅದರಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 ಹಾಗೂ 408ರ ಅಡಿ ಪ್ರಕರಣ ದಾಖಲಿಸಿದ್ದು, ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ. ಪಶ್ಚಿಮ ವಿಭಾಗದ ಡಿಸಿಪಿ ಜೋಯಲ್ ಡೇವಿಸ್ (Joel Davis) ಚಾಲಕನ ಪತ್ತೆಗಾಗಿ 4 ತಂಡ ರಚಿಸಿದ್ದಾರೆ.  ಇತ್ತ ಆರೋಪಿಯೀ ಕರ್ನಾಟಕ ನೋಂದಣಿ ಸಂಖ್ಯೆಯ ಸೆಡಾನ್ ಗಾಡಿಯಲ್ಲಿ ಪರಾರಿಯಾಗಿರುವುದರಿಂದ ಎಲ್ಲಾ ಟೋಲ್‌ಗಳಲ್ಲಿ ಇರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

ಆರೋಪಿ ಶ್ರೀನಿವಾಸ್ ಎರಡು ತಿಂಗಳ ಹಿಂದಷ್ಟೇ ರಾಧಿಕಾ ಡೈಮಂಡ್ ಸಂಸ್ಥೆಯಲ್ಲಿ ಕಾರು ಚಾಲಕನಾಗಿ ಕೆಲಸಕ್ಕೆ ಸೇರಿದ್ದ, ಮಧುರಾ ನಗರದಲ್ಲಿರುವ ಪುರುಷರ ಹಾಸ್ಟೆಲ್‌ನಲ್ಲಿ ಈತ ವಾಸವಾಗಿದ್ದ. ಶ್ರೀನಿವಾಸ್‌ನ ಕುಟುಂಬ ಸದಸ್ಯರು ಎಲೂರಿನಲ್ಲಿ (Eluru)ನಲ್ಲಿ ವಾಸವಿದ್ದು, ಅಲ್ಲಿಗೂ ಪೊಲೀಸರು ಭೇಟಿ ನೀಡಿದ್ದಾರೆ. ಆದರೆ ಆತನ ಪತ್ತೆ ಮಾತ್ರ ಆಗಿಲ್ಲ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ