Shivamogga: ಕುಡಿಯಲು ಹಣ ಕೊಡದ ಸ್ನೇಹಿತನ ಬರ್ಬರ ಕೊಲೆ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

By Sathish Kumar KH  |  First Published Feb 19, 2023, 1:16 PM IST

ಕುಡಿಯಲು ಹಣ ಕೊಡದ ಸ್ನೇಹಿತನ ಕೊಲೆ ಮಾಡಿದ ಆರೋಪಿಗಳು
ರಾತ್ರಿ ಮಲಗಿದ್ದ ವೇಳೆ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ
ಜೀವಾವಧಿ ಶಿಕ್ಷೆ ನೀಡಿದ ಶಿವಮೊಗ್ಗ ನ್ಯಾಯಾಲಯ


ಶಿವಮೊಗ್ಗ (ಫೆ.19): ಕುಡಿಯಲು ಹಣ ನೀಡದ ಸ್ನೇಹಿತನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಇಬ್ಬರಿಗೆ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು 10,000 ರೂ. ದಂಡವನ್ನು ವಿಧಿಸಿದೆ. ದಂಡ ಕಟ್ಟಲು ವಿಫಲರಾದರೆ 3 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

ಗುತ್ಯಪ್ಪ ಕಾಲನಿಯ ಜಯಣ್ಣ (42) ಮತ್ತು ಅಶೋಕ ರಸ್ತೆಯ ವಾಸು (42) ಜೀವಾವಧಿ ಶಿಕ್ಷೆಗೆ ಒಳಗಾದವರು. ಈ ಇಬ್ಬರು ಆರೋಪಿಗಳು 2017ರ ಜ.23ರಂದು ಬಾಪೂಜಿ ನಗರದ ರಾಜು (36) (Bapuji Nagar Raju) ಎಂಬುವರನ್ನು ಕೊಲೆ ಮಾಡಿದ್ದರು. ರಾಜು, ಜಯಣ್ಣ ಮತ್ತು ವಾಸು ಪರಿಚಯಸ್ಥರಾಗಿದ್ದು ರಾಜು ಬಳಿ ಕುಡಿಯುವ ಹಣ ನೀಡುವಂತೆ ಜಯಣ್ಣ ಮತ್ತು ವಾಸು ಕೇಳಿದ್ದರು. ಆದರೆ, ಹಣ ನೀಡಲು ರಾಜು ನಿರಾಕರಿಸಿದ ಹಿನ್ನೆಲೆಯಲ್ಲಿ ಮೂವರೂ ಜಗಳ ಮಾಡಿಕೊಂಡಿದ್ದರು. ಇನ್ನು ಜಗಳ ಮಾಡಿಕೊಂಡಿದ್ದ ಕಾರಣಕ್ಕಾಗಿ ಮೂವರ ನಡುವೆಯೂ ದ್ವೇಷ ಉಂಟಾಗಿತ್ತು. ಅದೇ ದಿನ ಸಾಗರ ರಸ್ತೆಯ ಹೆವನ್ ಇನ್ ಬಾ‌ರ್ (Heaven in Bar) ಎದುರು ಶೆಡ್‌ನಲ್ಲಿ ರಾತ್ರಿ ಮಲಗಿದ್ದ ರಾಜು ಮೇಲೆ ಇಬ್ಬರು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದರು.

Tap to resize

Latest Videos

ಹಣವಿಲ್ಲದ್ದರೂ ಆಪಲ್‌ ಮೊಬೈಲ್ ಆರ್ಡರ್: ಡೆಲಿವರಿ ಬಾಯ್‌ನನ್ನು ಕೊಲೆ ಮಾಡಿ ಪಾರ್ಸೆಲ್‌ ಕಿತ್ತುಕೊಂಡ ಗ್ರಾಹಕ

ಸಿಪಿಐ ಮಹಾಂತೇಶ್ ಬಿ.ಹೋಳಿ ದೋಷಾರೋಪಣ ಪಟ್ಟಿ ಸಲ್ಲಿಕೆ: ಈ ಬಗ್ಗೆ ಶಿವಮೊಗ್ಗ ಜಿಲ್ಲೆಯ ಸಾಗರದ ತುಂಗಾನಗರ ಠಾಣೆಯಲ್ಲಿ (Thunganagar Police Station) ಪ್ರಕರಣ ದಾಖಲಾಗಿತ್ತು. ಅಂದಿನ ತನಿಖಾಧಿಕಾರಿಯಾಗಿದ್ದ ಶಿವಮೊಗ್ಗ ಗ್ರಾಮಾಂತರ ವೃತ್ತ ನಿರೀಕ್ಷಕ ಮಹಾಂತೇಶ್ ಬಿ.ಹೋಳಿ (Mahantesh B Holi) ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಕೆ.ಎಸ್‌.ಮಾನು (Judge KS Manu) ಅವರು ಜಯಣ್ಣ ಮತ್ತು ವಾಸು ಅವರ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಈ ಪ್ರಕರಣದ ಕುರಿತಂತೆ ಸರ್ಕಾರಿ ಅಭಿಯೋಜಕಿ ಮಮತಾ (Mamatha) ವಾದ ಮಂಡಿಸಿದ್ದರು.

ಪೇಂಟ್‌ ಮಳಿಗೆಗೆ ಆಕಸ್ಮಿಕ ಬೆಂಕಿ- ಲಕ್ಷಾಂತರ ರೂ. ಬಣ್ಣ ಬೆಂಕಿಗಾಹುತಿ: ಬೆಳಗಾವಿ (ಫೆ.19): ಬೆಳಗಾವಿ ಜಿಲ್ಲೆಯ ಯರಗಟ್ಟಿ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದ (Sangolli Rayyana Circle) ಬಳಿ ಪೇಂಟ್ ಮಾರಾಟ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿದೆ. ಇನ್ನು ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿಕೊಂಡ ಬೆಂಕಿ (Fire) ಹೊತ್ತಿಕೊಂಡಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬಣ್ಣ ಬೆಂಕಿಗಾಹುತಿಯಾಗಿದೆ. ರಮೇಶ್ ಬಡಿಗೇರ ಎಂಬುವವರಿಗೆ ಸೇರಿದ ಪೇಂಟ್ ಮಳಿಗೆ ಆಗಿದ್ದು, ಅಂಗಡಿಯಲ್ಲಿ ಯಾರೂ ಇಲ್ಲದ ವೇಳೆ ಈ ಬೆಂಕಿ ಅವಘಡ ನಡೆದಿದೆ. 

ದೊಡ್ಡಬಳ್ಳಾಪುರ ಕ್ರಿಕೆಟ್‌ ಪಂದ್ಯಾವಳಿ ವೇಳೆ ಇಬ್ಬರನ್ನು ಕೊಲೆ ಮಾಡಿದ್ದ ಹಂತಕರು ಅರೆಸ್ಟ್‌: ಪೊಲೀಸರಿಂದ ಶೂಟೌಟ್‌

ಯರಗಟ್ಟಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಘಟನೆ: ಇನ್ನು ಇದೇ ವಾಣಿಜ್ಯ ಸಂಕೀರ್ಣದಲ್ಲಿ (Shoping complex)  ಸಾಕಷ್ಟು ಮಳಿಗೆಗಳಿದ್ದು, ಅದೃಷ್ಟವಶಾತ್ ಬೇರೊಂದು ಮಳಿಗೆಗಳಿಗೆ ಬೆಂಕಿಯ ಜ್ವಾಲೆ ಹರಡದ ಕಾರಣ ದೊಡ್ಡ ಮಟ್ಟದ ಅನಾಹುತ (Accident) ಆಗುವುದು ತಪ್ಪಿದಂತಾಗಿದೆ. ಇನ್ನು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ, ಬೆಂಕಿ ನಂದಿಸಿದ್ದಾರೆ. ಈ ವೇಳೆ ಬೆಂಕಿ ನಂದಿಸಲು ಸ್ಥಳೀಯ ನಿವಾಸಿಗಳು ಹಾಗೂ ವಾಣಿಜ್ಯ ಸಂಕೀರ್ಣದ ಇತರೆ ಮಳಿಗೆಗಳ ಸಿಬ್ಬಂದಿ ನೆರವಾಗಿದ್ದಾರೆ. ಈ ಘಟನೆ ಯರಗಟ್ಟಿ  ಉಪ ಠಾಣೆಯ ವ್ಯಾಪ್ತಿಯಲ್ಲಿ (Yaragatti Police station) ನಡೆದಿದ್ದು, ನಷ್ಟದ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ. 

click me!