
ಆನೇಕಲ್ (ಫೆ.19) : ಕೌಟುಂಬಿಕ ಕಲಹಕ್ಕೆ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಹೊರವಲಯ ಬನ್ನೇರುಘಟ್ಟ ಸಮೀಪದ ಶ್ಯಾನುಭೋಗನಹಳ್ಳಿಯಲ್ಲಿ ನಡೆದಿದೆ.
ರಾಜೇಶ್(35) ನೇಣಿಗೆ ಶರಣಾದ ದುರ್ದೈವಿ. ವೃತ್ತಿಯಲ್ಲಿ ಗಣೇಶಮೂರ್ತಿ ತಯಾರಿಕೆ ಮಾಡಿಕೊಂಡಿದ್ದ ರಾಜೇಶ್. ಹತ್ತು ವರ್ಷಗಳ ಹಿಂದೆ ನಗರದ ಪುಟ್ಟೇನಹಳ್ಳಿ ವಾಸಿ ಲಾವಣ್ಯ ಜೊತೆಗೆ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಗಂಡುಮಕ್ಕಳಿದ್ದರು. ಕಳೆದ ಹತ್ತು ವರ್ಷಗಳಿಂದ ಯಾವುದೇ ಕೌಟುಂಬಿಕ ಸಮಸ್ಯೆ ಇಲ್ಲದೆ ಜೀವನ ಸಾಗಿಸಿದ್ದ ದಂಪತಿಗಳು.
ಮಕ್ಕಳಿಲ್ಲವೆಂಬ ಕೊರಗು, ಪತ್ನಿ ತವರು ಸೇರಿಕೊಂಡ್ರೆ, ಪತಿ ಆತ್ಮಹತ್ಯೆ!
ಇತ್ತೀಚೆಗೆ ಮದ್ಯವ್ಯಸನಿಯಾಗಿದ್ದ ರಾಜೇಶ್. ದಿನನಿತ್ಯ ಕುಡಿದು ಬಂದು ಪತ್ನಿ ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದ. ಇದೇ ಕಾರಣಕ್ಕೆ ಪತ್ನಿಯ ಮೇಲೆ ಹಲವು ಬಾರಿ ಹಲ್ಲೆ ನಡೆಸಿದ್ದ ರಾಜೇಶ್. ವಾರದ ಹಿಂದೆಯಷ್ಟೇ ವರದಕ್ಷಿಣೆ ವಿಚಾರವಾಗಿ ಮತ್ತೆ ಪತ್ನಿಯೊಂದಿಗೆ ಜಗಳ ತೆಗೆದು ಹಲ್ಲೆ ಮಾಡಿದ್ದ. ವರದಕ್ಷಿಣೆ ತರದೇ ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ ಅಂತಾ ಹೆದರಿಸಿದ್ದ ರಾಜೇಶ್. ಹೀಗಾಗಿ ಪತ್ನಿ ತವರಿಗೆ ಹೋಗಿದ್ದಳು.
ನಿನ್ನೆ ರಾತ್ರಿ ವೇಲ್ ನಿಂದ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ರಾಜೇಶ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ. ಮೃತದೇಹ ನಗರದ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಈ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.
Tunisha Sharma: 'ಲವ್ ಜಿಹಾದ್' ಕೇಸ್ಗೆ ಭಾರಿ ಟ್ವಿಸ್ಟ್: ನಟನ ವಿರುದ್ಧ 524 ಪುಟಗಳ ಚಾರ್ಜ್ ಶೀಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ