ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಔಷಧಿ ತರಲು ಹೋದ ತಾಯಿಯನ್ನು ಹೆಬ್ಬಾವು ನುಂಗಿದೆ. ಇತ್ತ ಮಗು ಅನಾರೋಗ್ಯ ಉಲ್ಬಣಿಸಿದರೆ, ಅತ್ತ ತಾಯಿ ಹೆಬ್ಬಾವಿಗೆ ಆಹಾರವಾಗಿರುವ ಕರಳು ಹಿಂಡುವ ಘಟನೆ ವರದಿಯಾಗಿದೆ.
ಜಕಾರ್ತ(ಜು.03) ಕೂಲಿ ಕಾರ್ಮಿಕರ ಕುಟುಂಬ. ಪತಿ ಹಾಗೂ ಪತ್ನಿ ಇಬ್ಬರು ಕೆಲಸಕ್ಕೆ ಹೋದರೆ ಮಾತ್ರ ಜೀವನ. ಇದರ ನಡುವೆ ಪುಟ್ಟ ಮಗುವಿಗೆ ಅನಾರೋಗ್ಯ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವಿಗೆ ಔಷಧಿ ತರಲು ತಾಯಿ ಮನೆಯಿಂದ ಆಸ್ಪತ್ರೆಗೆ ಹೊರಟಿದ್ದಾಳೆ. ಕಾಡಿನ ದಾರಿಯಲ್ಲಿ ಸಾಗಿ ಪಟ್ಟಣ ಸೇರಬೇಕು. ಆದರೆ ತಾಯಿ ಕಾಡಿನ ದಾರಿ ದಾಟಿ ಪಟ್ಟಣ ಸೇರಲಿಲ್ಲ. ಅದಕ್ಕೂ ಮೊದಲೇ ಹೆಬ್ಬಾವಿಗೆ ಆಹಾರವಾದ ಘಟನೆ ಇಂಡೋನೇಷಿಯಾದಲ್ಲಿ ನಡೆದಿದೆ.
ದಕ್ಷಿಣ ಸುಲವೆಸಿ ಪ್ರಾಂತ್ಯ ದಡ್ಡ ಕಾಡಿನಿಂದ ಕೂಡಿದ ಪ್ರದೇಶ. ಇಲ್ಲಿ ಅತೀ ಹೆಚ್ಚು ಹೆಬ್ಬಾವುಗಳಿವೆ. 30 ಅಡಿ ದೊಡ್ಡ ಗಾತ್ರದ ಹೆಬ್ಬಾವುಗಳು ಈ ಕಾಡಿನಲ್ಲಿದೆ. ಕಾಡಿನಂಚಿನ ಗ್ರಾಮಗಳಲ್ಲಿ ಹೆಬ್ಬಾವು ಆಗಮಿಸಿ ಹಲವರನ್ನು ನುಂಗಿ ಹಾಕಿದೆ. ಕಳೆದ 30 ದಿನಗಳ ಅಂತರದಲ್ಲಿ ಸುಲವೆಸಿ ಪ್ರಾಂತ್ಯದಲ್ಲಿ ನಡೆದ 2ನೇ ಘಟನೆ ಇದಾಗಿದೆ. 36 ವರ್ಷದ ಮಹಿಳೆ ತನ್ನ ಮಗುವಿಗೆ ಔಷಧಿ ತರಲು ಹೋದಾಗ ಈ ಘಟನೆ ನಡೆದಿದೆ.
ನಾಪತ್ತೆಯಾದ 4 ಮಕ್ಕಳ ತಾಯಿ ಮೂರು ದಿನ ಬಳಿಕ ಹೆಬ್ಬಾವಿನ ಹೊಟ್ಟೆಯಲ್ಲಿ ಪತ್ತೆ!
ಪತಿ ಕೆಲಸಕ್ಕೆ ತೆರಳಿದ್ದಾರೆ. ಇತ್ತ ಪತ್ನಿ ಮಗುವಿಗೆ ಔಷಧಿ ತರಲು ಪಟ್ಟಣಕ್ಕೆ ತೆರಳಿದ್ದಾರೆ. ಮನೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಹಿರಿಯರ ಕೈಗೊಪ್ಪಿಸಿ ಮಹಿಳೆ ಕಾಡಿನ ದಾರಿ ಮೂಲಕ ಸಾಗಿದ್ದಾಳೆ. ಆದರೆ ಹೆಬ್ಬಾವು ದಾಳಿ ಮಾಡಿದೆ. ಇತ್ತ ಎಷ್ಟು ಹೊತ್ತಾದರೂ ಮಹಿಳೆ ವಾಪಸ್ ಬರಲಿಲ್ಲ. ಕುಟುಂಬದ ಆತಂಕ ಹೆಚ್ಚಾಗಿದೆ. ಪತಿಗೆ ಮಾಹಿತಿ ನೀಡಲಾಗಿದೆ.
ಕೂಲಿ ಕೆಲಸ ಅರ್ಧಕ್ಕೆ ಬಿಟ್ಟು ಮರಳಿದ ಪತಿ ಹಾಗೂ ಕುಟುಂಬಸ್ಥರು ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ಪತ್ನಿಯ ಸ್ಲಿಪ್ಪರ್, ಬ್ಯಾಗ್ ಸೇರಿದಂತೆ ಇತರ ವಸ್ತುಗಳು ಪತ್ತೆಯಾಗಿದೆ. ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಈ ಚಪ್ಪಲಿ, ಬ್ಯಾಗ್ ಸೇರಿದಂತೆ ಇತರ ವಸ್ತುಗಳು ಸಿಕ್ಕ ಜಾಗದ ಸುತ್ತ ಮುತ್ತ ಹುಡುಕಾಟ ತೀವ್ರಗೊಂಡಿದೆ. ಈ ವೇಳೆ ದೊಡ್ಡ ಗಾತ್ರದ ಹೆಬ್ಬಾವು ಪತ್ತೆಯಾಗಿದೆ.
ಅಬ್ಬಬ್ಬಾ! ಹೆಬ್ಬಾವಿನೊಂದಿಗೆ ಆಟವಾಡೋ ಹುಡುಗ; ದೈತ್ಯ ಹಾವಿನ ಮುಖವನ್ನು ಎತ್ತಿದ್ರೂ ಏನ್ ಮಾಡಲ್ಲ!
ಈ ಹೆಬ್ಬಾವಿನ ಹೊಟ್ಟೆ ದೊಡ್ಡದಾಗಿತ್ತು. ಪೊಲೀಸರು ಆಗಮಿಸಿದ್ದಾರೆ. ಹೆಬ್ಬಾವನ್ನು ತಜ್ಞರ ನೆರವಿನಿಂದ ಹಿಡಿದ್ದಾರೆ. ಇದರ ಹೊಟ್ಟೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮನೆಯಿಂದ 800 ಮೀಟರ್ ದೂರದಲ್ಲಿ ಹಾವು ಮಹಿಳೆಯನ್ನು ನುಂಗಿದೆ. ಇಂಡೋನೇಷಿಯಾದ ಸುಲವೆಸಿ ಪ್ರಾಂತ್ಯದಲ್ಲಿ ಈಗಾಗಲೇ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದ್ದಾರೆ. ಇತ್ತ ಕಾಂಡಿನಂಚಿನ ಗ್ರಾಮಸ್ಥರನ್ನು ಬೇರೆಡೆಗೆ ಸ್ಥಳಾಂತರ ಮಾಡುವ ಯೋಜನೆಗ ಭಾರಿ ವಿರೋಧ ವ್ಯಕ್ತವಾದ ಕಾರಣ ಕೈಬಿಡಲಾಗಿದೆ.