ಬೆಂಗಳೂರಿನ ಕಾಲೇಜುವೊಂದರಲ್ಲಿ ವಿದ್ಯಾರ್ಥಿಯಿಂದಲೇ ಸೆಕ್ಯೂರಿಟಿ ಗಾರ್ಡ್ ಭೀಕರ ಹತ್ಯೆ!

By Gowthami K  |  First Published Jul 3, 2024, 4:45 PM IST

ಬೆಂಗಳೂರಿನ ಕಾಲೇಜು ಒಂದರ ಆವರಣದಲ್ಲಿ ನೆತ್ತರ ಕೋಡಿ ಹರಿದಿದೆ. ಕೆಂಪಾಪುರದ ಸಿಂದಿ ಕಾಲೇಜಿನಲ್ಲಿ ಕಾಲೇಜು ಸೆಕ್ಯೂರಿಟಿ ಗಾರ್ಡ್ ನನ್ನು ವಿದ್ಯಾರ್ಥಿ ಹತ್ಯೆ ಮಾಡಿದ್ದಾನೆ. 


ಬೆಂಗಳೂರು (ಜು.3): ಬೆಂಗಳೂರಿನ ಕಾಲೇಜು ಒಂದರ ಆವರಣದಲ್ಲಿ ನೆತ್ತರ ಕೋಡಿ ಹರಿದಿದೆ. ಕೆಂಪಾಪುರದ ಸಿಂಧಿ  ಕಾಲೇಜಿನಲ್ಲಿ ಕಾಲೇಜು ಸೆಕ್ಯೂರಿಟಿ ಗಾರ್ಡ್ ನನ್ನು ವಿದ್ಯಾರ್ಥಿಯೊಬ್ಬ ಹತ್ಯೆ ಮಾಡಿದ್ದಾನೆ. 

ಕಾಲೇಜಿಗೆ ವಿದ್ಯಾರ್ಥಿ ಮದ್ಯ ಸೇವಿಸಿ ಬಂದಿದ್ದ. ಹೀಗಾಗಿ ಆತನನ್ನು ಕಾಲೇಜಿನ ಒಳಗೆ ಪ್ರವೇಶಿಸಲು ಸೆಕ್ಯೂರಿಟಿ ಗಾರ್ಡ್ ಜೈ ಕಿಶೋರ್ ರಾಯ್ ಬಿಟ್ಟಿಲ್ಲ. ಇದಕ್ಕೆ ಜಗಳ ಮಾಡಿದ ವಿದ್ಯಾರ್ಥಿ ಆತನನ್ನು  ಕೊಲೆ ಮಾಡಿದ್ದಾನೆ. ಭಾರ್ಗಬ್ ಕೊಲೆ ಮಾಡಿದ ವಿದ್ಯಾರ್ಥಿಯಾಗಿದ್ದಾನೆ. ಈತ ಬಿಎ ಫೈನಲ್ ಇಯರ್ ನಲ್ಲಿ ವ್ಯಾಸಂಗ ಮಾಡ್ತಿದ್ದ. ಈತ ಪಿಜಿಯಲ್ಲಿ ವಾಸವಿದ್ದ  ಕಾಲೇಜು ಒಳಗೆ ಬಿಡದಿದ್ದಾಗ ಪಿಜಿಗೆ ಹೋಗಿ ಚಾಕು ತಂದ ವಿದ್ಯಾರ್ಥಿ ಸೆಕ್ಯೂರಿಟಿಯನ್ನು ಚುಚ್ಚಿ ಕೊಲೆ ಮಾಡಿದ್ದಾನೆ.

Tap to resize

Latest Videos

ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಅಮೃತಹಳ್ಳಿ ಪೊಲೀಸರು ದೌಡಯಿಸಿದ್ದಾರೆ.  ಕೊಲೆ ಮಾಡಿದ ಯುವಕನನ್ನ ತಕ್ಷಣ ವಶಕ್ಕೆ ಪಡೆದಿದ್ದಾರೆ.

click me!