ಕೋಲಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಪಕ್ಕದಲ್ಲೇ ಇರುವ ಶಾಲೆ. ವಿದ್ಯಾರ್ಥಿಗಳು ದಿನನಿತ್ಯ ಅಭ್ಯಾಸ ಬಿಟ್ಟು ಕೂಲಿ ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡದಿದ್ರೆ ಶಾಲೆಯ ಉಪ ಪ್ರಾಂಶುಪಾಲೇ ರಾಧಮ್ಮ ವಿದ್ಯಾರ್ಥಿಗಳನ್ನು ಥಳಿಸುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕೋಲಾರ (ಮಾ.19): ಜಿಲ್ಲೆಯಲ್ಲಿ ಕಳೆದ ವರ್ಷದ ಡಿಸೆಂಬರ್‌ನಲ್ಲಿ ಶಾಲಾ ಮಕ್ಕಳಿಂದ ಶೌಚಾಲಯ ಕ್ಲೀನ್ ಮಾಡಿಸಿ ಅಮಾನವೀಯತೆ ತೋರಿದ ವಿಚಾರದಲ್ಲಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಘಟನೆ ಮರೆಯುವ ಮುನ್ನವೇ ಕೋಲಾರದಲ್ಲಿ ಶಾಲಾ ಮಕ್ಕಳನ್ನು ದುರುಪಯೋಗಪಡಿಸಿಕೊಂಡಿರುವ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ನಗರದಲ್ಲಿರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನ ಕೂಲಿಕಾರ್ಮಿಕರಂತೆ ಬಳಸಿಕೊಂಡಿರುವ ಶಾಲಾ ಆಡಳಿತ ಮಂಡಳಿ. ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಗೋಡೆ ಒಡೆಯುವುದು, ಕಲ್ಲು ಎತ್ತುವುದು, ಮಣ್ಣು ಹೊರುವ ಕೆಲಸ ಮಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಶಾಲಾ ಆಡಳಿತ ಮಂಡಳಿ ವಿರುದ್ಧ ನೆಟ್ಟಿಗರು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ದಾವಣಗೆರೆ: ಮುಖ್ಯಶಿಕ್ಷಕಿ ಸಿಲುಕಿಸಲು ಶಾಲೆ ಮಕ್ಳಿಂದ ಶೌಚ ತೊಳೆಸಿದ ಶಿಕ್ಷಕಿ..!
ಕೋಲಾರ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಪಕ್ಕದಲ್ಲೇ ಇರುವ ಶಾಲೆ. ವಿದ್ಯಾರ್ಥಿಗಳು ದಿನನಿತ್ಯ ಅಭ್ಯಾಸ ಬಿಟ್ಟು ಕೂಲಿ ಕಾರ್ಮಿಕರಂತೆ ಕೆಲಸ ಮಾಡುತ್ತಿದ್ದಾರೆ. ಕೆಲಸ ಮಾಡದಿದ್ರೆ ಶಾಲೆಯ ಉಪ ಪ್ರಾಂಶುಪಾಲೇ ರಾಧಮ್ಮ ವಿದ್ಯಾರ್ಥಿಗಳನ್ನು ಥಳಿಸುತ್ತಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಪರೀಕ್ಷೆಗಳು ಸಮೀಪಿಸಿವೆ ಇಂಥ ಸಮಯದಲ್ಲಿ ಶಿಕ್ಷಕರು ಬೋಧನೆ ಮಾಡಬೇಕು. ವಿದ್ಯಾರ್ಥಿಗಳು ಅಧ್ಯಯನ ಮಾಡುವ ಸಮಯ ಇಂಥ ಸಂದರ್ಭದಲ್ಲಿ ಇವೆಲ್ಲ ಬಿಟ್ಟು ಮಕ್ಕಳನ್ನು ಕೂಲಿ ಕಾರ್ಮಿಕರ ರೀತಿ ಕಟ್ಟಡ ಒಡೆಯುವ, ಮಣ್ಣು ಹೊರುವ ಕೆಲಸಕ್ಕೆ ಬಳಸುತ್ತಿದ್ದಾರೆ. ಕೂಡಲೇ ಸಂಬಂಧಪಟ್ಟ ಶಾಲೆಯ ಶಿಕ್ಷಕರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಪೋಷಕರು, ರಾಜ್ಯ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ. ಶಿಕ್ಷಕ ಸಚಿವ ಮಧು ಬಂಗಾರಪ್ಪ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪಟ್ಟು ಹಿಡಿದ ಮುಖಂಡರು.
ಶಿಕ್ಷಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ, ಶೌಚಾಲಯ ಗೋಡೆ ಬಿದ್ದು ಶಾಲಾ ಬಾಲಕಿಯರಿಗೆ ಗಂಭೀರ ಗಾಯ!
ರಾಜ್ಯದಲ್ಲಿ ಶಾಲಾ ಮಕ್ಕಳ ದುರುಪಯೋಗದಂತಹ ಪ್ರಕರಣಗಳು ಪದೇಪದೆ ಬೆಳಕಿಗೆ ಬರುತ್ತಿವೆ. ಸರ್ಕಾರ ಮಾತ್ರ ಎಂದಿನಂತೆ ಬಾಯಿಮಾತಿನ ಕ್ರಮಕ್ಕೆ ಸುಮ್ಮನಾಗುತ್ತಿದೆ. ಪರೀಕ್ಷೆ ಸಮಯದಲ್ಲಿ ಅಧ್ಯಯನ ಮಾಡಬೇಕಾದ ಮಕ್ಕಳು ಈ ರೀತಿ ಕಾರ್ಮಿಕರಂತೆ ದುಡಿಸಿಕೊಳ್ಳುತ್ತಿರುವುದು ಎಷ್ಟು ಸರಿ? ಸರ್ಕಾರಿ ಶಾಲೆಗಳು ಇಂಥ ಅವ್ಯವಸ್ಥೆಯಿಂದಲೇ ಮಕ್ಕಳ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿದೆ. ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಸರ್ಕಾರ ಕೂಡಲೇ ಗಂಭೀರವಾಗಿ ಪರಿಗಣಿಸಿ ಶಿಕ್ಷಕರ ವಿರುದ್ಧ ಜರುಗಿಸಬೇಕು ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.