Bengaluru: ಕಾರಿನ ಮೇಲೆ ಉಗುಳಬೇಡಿ ಎಂದಿದ್ದಕ್ಕೆ ಟೆಕ್ಕಿ ದಂಪತಿಗೆ ಹಿಗ್ಗಾಮುಗ್ಗಾ ಥಳಿಸಿದ ಅನಂತಮೂರ್ತಿ ಫ್ಯಾಮಿಲಿ!

By Sathish Kumar KH  |  First Published Mar 19, 2024, 7:05 PM IST

ಕಾರಿನ ಮೇಲೆ ಉಗುಳಬೇಡಿ ಎಂದು ಹೇಳಿದ್ದಕ್ಕೆ ಟೆಕ್ಕಿ ದಂಪತಿಯ ಮೇಲೆ ಕುಟುಂಬದವರೆಲ್ಲ ಸೇರಿ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ದೊಡ್ಡನೆಕ್ಕುಂದಿಯಲ್ಲಿ ನಡೆದಿದೆ.


ಬೆಂಗಳೂರು (ಮಾ.19): ಬೆಂಗಳೂರಿಗೆ ಕೆಲಸಕ್ಕೆಂದು ಬಂದ ಟೆಕ್ಕಿಗಳಿಗೆ ಇಲ್ಲಿ ನೆಮ್ಮದಿಯಿಂದ ಜೀವನ ಮಾಡುವುದೇ ದೊಡ್ಡ ಸವಾಲಾಗಿದೆ. ಮನೆಯ ಬಳಿ ನಿಲ್ಲಿಸಿದ್ದ ಕಾರಿಗೆ ಪಕ್ಕದ ಮನೆಯವರು ಕಾರಿನ ಮೇಲೆ ಉಗುಳಬೇಡಿ, ಕಸವನ್ನು ಹಾಕುತ್ತಿದ್ದರು. ಇದನ್ನು ಪ್ರಶ್ನೆ ಮಾಡಿದ ಟೆಕ್ಕಿ ದಂಪತಿಯ ಮೇಲೆ ದೊಡ್ಡ ನೆಕ್ಕುಂದಿಯ ಕುಟುಂಬ ಸದಸ್ಯರು ಹಿಗ್ಗಾಮುಗ್ಗಾ ಮುಖ ಮೂತಿಯನ್ನೂ ನೋಡದೇ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಇನ್ನು ಹಲ್ಲೆಯ ವೀಡಿಯೋ ವೈರಲ್‌ ಆಗುತ್ತಿದ್ದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಹೌದು, ಬೆಂಗಳೂರಿಗೆ ಕೆಲಸಕ್ಕೆಂದು ಬಂದು ವಾಸವಾಗಿದ್ದ ಟೆಕ್ಕಿ ದಂಪತಿ ಮೇಲೆ ದೊಡ್ಡ ನೆಕ್ಕುಂದಿಯ ಮನೆಯೊಂದರ ಇಡೀ ಕುಟುಂಬ ಸದಸ್ಯರು ಸೇರಿಕೊಂಡು ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಟೆಕ್ಕಿ ದಂಪತಿಗಳ ಮೇಲೆ ಹಲ್ಲೆ ಮಾಡಿರುವ ಆರೋಪಿಗಳನ್ನು ಅನಂತ ಮೂರ್ತಿ,ಪ್ರಶಾಂತ್ ಹಾಗೂ ಅನಂತ ಮೂರ್ತಿ ಪತ್ನಿ ಎಂದು ಗುರುತಿಸಲಾಗಿದೆ. ಟೆಕ್ಕಿ ದಂಪತಿ ರೋಹಿಣಿ ಹಾಗೂ ಸಹಿಷ್ಣು ಹಲ್ಲೆಗೊಳಗಾದ ಜೋಡಿಯಾಗಿದ್ದಾರೆ.

Latest Videos

undefined

ನಗರ್ತಪೇಟೆ ಹನುಮಾನ್ ಚಾಲೀಸಾ ರ್ಯಾಲಿ, ತೇಜಸ್ವಿ ಸೂರ್ಯ ಮೇಲೆ ಕಾಂಗ್ರೆಸ್ ದೂರು; ವಶಕ್ಕೆ ಪಡೆದ ಪೊಲೀಸ್!

ದೊಡ್ಡ ನೆಕ್ಕುಂದಿಯಲ್ಲಿ ಹಲ್ಲೆ ಮಾಡಿದ ಆರೋಪಿಗಳಾದ ಅನಂತ ಮೂರ್ತಿ ಮನೆ ಪಕ್ಕದಲ್ಲಿ ಖಾಲಿ ಜಾಗವಿದೆ. ಸುತ್ತಲಿನ ನಿವಾಸಿಗಳು ಆ ಜಾಗದಲ್ಲಿ ಕಾರುಗಳನ್ನು ಪಾರ್ಕಿಂಗ್‌ ಮಾಡುತ್ತಾರೆ. ಅದೇ ರೀತಿ ಸಹಿಷ್ಣು ಹಾಗೂ ರೋಹಿಣಿ ದಂಪತಿ ಕೂಡ ತಮ್ಮ ಕಾರನ್ನು ಆ ಖಾಲಿ ಜಾಗದಲ್ಲಿ ಪಾರ್ಕ್ ಮಾಡಿದ್ದಾರೆ. ಆದರೆ, ಅನಂತಮೂರ್ತಿ ಹಾಗೂ ಅವರ ಮನೆಯವರು ಕಾರಿನ ಮೇಲೆ ಉಗುಳುವುದು, ಕಸ ಹಾಕುವುದು ಹಾಗೂ ಮಣ್ಣು ಹಾಕುವುದನ್ನು ಮಾಡಿದ್ದಾರೆ. ಜೊತೆಗೆ, ಆಗಾಗ ಕಾರಿನ ಚಕ್ರದ ಗಾಳಿಯನ್ನೂ ಬಿಟ್ಟಿದ್ದಾರೆ. 

ವಿಜಯಪುರದಲ್ಲಿ 2.93 ಕೋಟಿ ರೂ. ವಶಕ್ಕೆ ಪಡೆದ ಪೊಲೀಸರು; ಹಾಸಿಗೆಯಷ್ಟು ಉದ್ದದ ಕಂತೆ ಕಂತೆ ನೋಟುಗಳು ಪತ್ತೆ!

ಸರ್ಕಾರದ ಹಾಗೂ ಬೇರೊಬ್ಬ ವ್ಯಕ್ತಿಗೆ ಸೇರಿದ ಖಾಲಿ ಜಾಗದಲ್ಲಿ ಕಾರನ್ನು ನಿಲ್ಲಿಸಿದ್ದರೂ ಅನಂತಮೂರ್ತಿ ಹಾಗೂ ಅವರ ಕುಟುಂಬ ನಿರಂತರವಾಗಿ ಕಿರುಕುಳ ಉಂಟಾಗುತ್ತಿತ್ತು. ಭಾನುವಾರ ರಾತ್ರಿ ವೇಳೆ ಟೆಕ್ಕಿ ದಂಪತಿ ಅನಂತಮೂರ್ತಿ ಮನೆಯ ಬಳಿ ತೆರಳಿ ಕಾರಿನ ಮೇಲೆ ಉಗುಳಬೇಡಿ, ನೀವು ನಮ್ಮ ಕಾರಿನ ಚಕ್ರದ ಗಾಳಿಯನ್ನು ಏಕೆ ಬಿಡುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೇ ದೊಡ್ಡದನ್ನಾಗಿ ಮಾಡಿದ ಆರೋಪಿಗಳು ಮಹಿಳೆಯೂ ಸೇರಿದಂತೆ ಆಕೆಯ ಗಂಡನ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ವಿಡಿಯೀ ಮಾಡುತ್ತಿದ್ದವರ ಮೇಲೂ ಹಲ್ಲೆ ಮಾಡಿದ್ದಾರೆ. ಈ ಘಟನೆ ಕುರಿತು ಸಹಿಷ್ಣು ಹಾಗೂ ರೋಹಿಣಿ ದಂಪತಿ ಹೆಚ್‌ಎಎಲ್‌ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸುತ್ತಿದ್ದಂತೆ ವಿಡಿಯೋ ಸಾಕ್ಷಿ ಆಧಾರದ ಮೇಲೆ ಅನಂತ ಮೂರ್ತಿ, ಪ್ರಶಾಂತ್ ಹಾಗೂ ಅನಂತ ಮೂರ್ತಿಯ ಪತ್ನಿಯನ್ನು ಬಂಧಿಸಿದ್ದಾರೆ.

click me!