ಮಹಿಳೆಯ ಖತರ್ನಾಕ್ ಐಡಿಯಾಗೆ ಪೊಲೀಸರು, ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಮುಖ್ಯಮಮಂತ್ರಿ ಸಾಮೂಹಿಕ ಯೋಜನೆಯ ಹಣ ಪಡೆಯಲು ಮಹಿಳೆಯೊಬ್ಬರು ಸಹೋದರನ ಜೊತೆಗೆ ಮದುವೆಯಾದ ಘಟನೆ ನಡೆದಿದೆ.
ಲಖನೌ(ಮಾ.19) ಸರ್ಕಾರದ ಯೋಜನೆಗಳ ಹಣ ಅರ್ಹರಿಗೆ ಸಿಗುತ್ತಿಲ್ಲ ಅನ್ನೋ ಆರೋಪಗಳು ಇಂದು ನಿನ್ನೆಯದಲ್ಲ. ಹೀಗಾಗಿ ಸರ್ಕಾರ ಬಹುತೇಕ ಎಲ್ಲಾ ಕ್ಷೇತ್ರವನ್ನು ಡಿಜಿಟಲೀಕರಣ ಮಾಡಲಾಗಿದೆ. ಅದರೂ ಕಬಳಿಸುವಿಕೆ ನಿಂತಿಲ್ಲ. ಇದೀಗ ಮಹಿಳೆಯೊಬ್ಬಳು ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿಯಲ್ಲಿ ನವ ಜೋಡಿಗಳಿಗೆ ನೀಡುವ ಲಕ್ಷ ರೂಪಾಯಿ ಹಣ ಪಡೆಯಲು ಭಾರಿ ಐಡಿಯಾ ಮಾಡಿದ್ದಾಳೆ. ತನ್ನ ಸಹೋದರನ ಜೊತೆಗೆ ಅಧಿಕಾರಿಗಳ ಸಮ್ಮುಖದಲ್ಲಿ ಮದುವೆಯಾಗಿರುವ ಈ ಮಹಿಳೆಯ ನಾಟಕ ಬಯಲಾಗಿದೆ. ಈ ಘಟನೆ ಉತ್ತರ ಪ್ರದೇಶದ ಲಕ್ಷ್ಮಿಪುರ ಬ್ಲಾಕ್‌ನ ಮಹಾರಾಜ್‌ಗಂಜ್‌ನಲ್ಲಿ ನಡೆದಿದೆ.
ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯನ್ನು ಜಾರಿಗೆ ತರಲಾಗಿದೆ. ಆರ್ಥಿಕವಾಗಿ ಶಕ್ತಿ ಇಲ್ಲದವರು, ಬಡವರು ಈ ಸೌಲಭ್ಯದ ಮೂಲಕ ಗೌರವುಯತವಾಗಿ ಮದುವೆಯಾಗಲು ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಸಿಎಂ ಸಮೂಹಿಕ ವಿವಾಹ ಯೋಜನೆಯಲ್ಲಿ ಮದುವೆಯಾಗುವ ಜೋಡಿಗಳಿಗೆ ಮಂಗಳಸೂತ್ರ, ಸೀರೆ, ಧೋತಿ ಜೊತೆಗೆ ಒಂದಷ್ಟು ಉಡುಗೊರೆ ಹಾಗೂ ಲಕ್ಷ ರೂಪಾಯಿ ನಗದು ಹಣವನ್ನೂ ನೀಡಲಾಗುತ್ತದೆ.
ಮಗಳು ಆತ್ಮಹತ್ಯೆ: ಗಂಡನ ಮನೆಗೆ ಬೆಂಕಿ ಹಚ್ಚಿದ ಸಂಬಂಧಿಗಳು: ಅತ್ತೆಮಾವ ಇಬ್ಬರೂ ಸಜೀವ ದಹನ
ಮಹಾರಾಜ್‌ಗಂಜ್ ನಿವಾಸಿಯಾಗಿರವ ಈ ಮಹಿಳೆಗೆ ಈಗಾಗಲೇ ಮದುವೆಯಾಗಿದೆ. ಮಹಿಳೆ ಪತಿ ಲಖನೌದಲ್ಲಿನ ಮೆಟ್ರೋದಲ್ಲಿ ಸಿಬ್ಬಂದಿಯಾಗಿದ್ದಾರೆ. ರಜೆಯಲ್ಲಿ ಮಾತ್ರ ಊರಿಗೆ ಆಗಮಿಸುತ್ತಾರೆ. ಇತ್ತ ಸ್ಥಳೀಯ ಅಧಿಕಾರಿಗಳಿಗೆ ಹಣ ನೀಡಿ ದಾಖಲೆ ತಯಾರಿಸಿದ ಮಹಿಳೆ, ಸರ್ಕಾರಿ ಸಮೂಹಿಕ ಮದುವೆ ಯೋಜನೆಯಡಿ ಹೆಸರು ನೋದಾಯಿಸಿದ್ದಾಳೆ.
ಬಳಿಕ ತನ್ನ ಸಹೋದರನನ್ನೇ ಕರೆದುಕೊಂಡು ಅಧಿಕಾರಿಗಳ ಸಮ್ಮುಖದಲ್ಲಿ ಮದುವೆಯಾಗಿದ್ದಾಳೆ. ಈ ಸಮೂಹಿಕ ವಿವಾಹದಲ್ಲಿ 38 ಜೋಡಿಗಳು ಹಸೆಮಣೆ ಏರಿದೆ. ಈ ಜೋಡಿಗಳ ನಡುವೆ ಸಹೋದರನನ್ನೇ ಈ ಮಹಿಳೆ ಮದುವೆಯಾಗಿದ್ದಾಳೆ. ಮದುವೆಯಲ್ಲಿ ಸರ್ಕಾರದ ಕಡೆಯಿಂದ ಹಲವು ಉಡುಗೊರೆಗಳನ್ನು ನೀಡಲಾಗಿದೆ. ಮದುವೆಯಾದ ಒಂದು ವಾರದಲ್ಲಿ ಖಾತೆಗೆ ಯೋಜನೆಯ ಹಣ ಜಮೆಯಾಗಲಿದೆ. ಆದರೆ ಮದುವೆಯಾದ ಬೆನ್ನಲ್ಲೇ ಮಹಿಳೆಯ ನಾಟಕ ಬಯಲಾಗಿದೆ.
ಗಂಡ ಹೆಂಡತಿಯಿಂದ ಈ 4 ವಿಷಯ ಮುಚ್ಚಿಡ ಬೇಕಂತೆ ಗೊತ್ತಾ?
ಯೋಜನೆಯ ಹಣಕ್ಕಾಗಿ ಮದುವೆಯಾಗಿದ್ದಾರೆ ಅನ್ನೋ ಮಾಹಿತಿ ಪಡೆದ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾರೆ. ಅಷ್ಟರಲ್ಲೇ ಮದುವೆ ಮುಗಿದು ಹೋಗಿದೆ. ಇತ್ತ ಅಧಿಕಾರಿಗಳು ಈ ಜೋಡಿಗಳಿಗೆ ನೀಡಿದ ಉಡುಗೊರೆಗಳನ್ನು ವಾಪಸ್ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಈ ಮಹಿಳೆ ಹಣಕ್ಕಾಗಿ ಈ ರೀತಿ ಮಾಡಿರುವುದು ಪತ್ತೆಯಾಗಿದೆ. ತನಿಖೆ ಪೂರ್ಣಗೊಂಡ ಬಳಿಕ ಕಠಿಣ ಕ್ರಮಕೈಗೊಳ್ಳಲಾವುಗುದು ಎಂದು ಅಧಿಕಾರಿಗಳು ಹೇಳಿದ್ದಾರೆ.