ರೇವ್ ಪಾರ್ಟಿಗಳಿಗೆ ಹಾವಿನ ವಿಷ ಪೂರೈಸಿರುವ ಆರೋಪ ಎದುರಿಸುತ್ತಿರುವ ಹಿಂದಿ ಬಿಗ್‌ಬಾಸ್ ಸ್ಪರ್ಧಿ ಎಲ್ವೀಸ್ ಯಾದವ್ ವಿಚಾರಣೆ ವೇಳೆ ತಾವು ರೇವ್ ಪಾರ್ಟಿಗಳಿಗೆ ಹಾವಿನ ವಿಷ ಪೂರೈಕೆ ಮಾಡಿರುವುದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ರೇವ್ ಪಾರ್ಟಿಗಳಿಗೆ ಹಾವಿನ ವಿಷ ಪೂರೈಸಿರುವ ಆರೋಪ ಎದುರಿಸುತ್ತಿರುವ ಹಿಂದಿ ಬಿಗ್‌ಬಾಸ್ ಸ್ಪರ್ಧಿ ಎಲ್ವೀಸ್ ಯಾದವ್ ವಿಚಾರಣೆ ವೇಳೆ ತಾವು ರೇವ್ ಪಾರ್ಟಿಗಳಿಗೆ ಹಾವಿನ ವಿಷ ಪೂರೈಕೆ ಮಾಡಿರುವುದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ನಿನ್ನೆಯಷ್ಟೇ ಎಲ್ವೀಸ್ ಯಾದವ್ ಅವರನ್ನು ನೋಯ್ಡಾದಲ್ಲಿ ಬಂಧಿಸಲಾಗಿತ್ತು. ಬಂಧಿಸಿ ಒಂದು ಗಂಟೆಯೊಳಗೆಲ್ಲಾ ಆತ ತಾನು ವಿಷ ಪೂರೈಸುತ್ತಿದ್ದಿದ್ದು ನಿಜ ಎಂಬುದನ್ನು ಒಪ್ಪಿಕೊಂಡಿದ್ದಾರೆ ಜೊತೆಗೆ ಇದೇ ಪ್ರಕರಣದಲ್ಲಿ ಕಳೆದ ವರ್ಷ ಬಂಧಿತರಾದ ಎಲ್ಲರೂ ತನಗೆ ಪರಿಚಿತರು ಎಂದು ಹೇಳಿದ್ದಾನೆ ಎಂದು ಮೂಲಗಳು ತಿಳಿಸಿವೆ. ಎಲ್ವೀಸ್ ಯಾದವ್ ಅವರು ಅವರು ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 2ರ ವಿನ್ನರ್ ಆಗಿದ್ದರು.
ಎಲ್ವೀಸ್ ಅವರು ಈ ಹಿಂದೆ ಆಯೋಜಿಸಿದ್ದ ರೇವ್ ಪಾರ್ಟಿಗಳಲ್ಲಿ ಹಾವು ಮತ್ತು ಹಾವಿನ ವಿಷವನ್ನು ಪೂರೈಕೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ಮಾಧ್ಯಮಗಳಿಗೆ ತಿಳಿಸಿವೆ. ಯೂಟ್ಯೂಬರ್ ಕೂಡ ಆಗಿರುವ ಎಲ್ವೀಸ್ ಈ ಹಿಂದೆ ಇದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳನ್ನು ವಿವಿಧ ರೇವ್ ಪಾರ್ಟಿಗಳಲ್ಲಿ ಭೇಟಿಯಾಗಿದ್ದ ಮತ್ತು ಅವರೊಂದಿಗೆ ಸಂಪರ್ಕದಲ್ಲಿದ್ದ ಎಂಬುದನ್ನು ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಹಿಂದೆ ಈ ಎಲ್ಲಾ ಆರೋಪಗಳನ್ನು ಎಲ್ವೀಸ್ ನಿರಾಕರಿಸಿದ್ದರು.
undefined
Elvish Yadav: 24ನೇ ವಯಸ್ಸಲ್ಲೇ ಕೋಟ್ಯಧಿಪತಿ ಈ ಬಿಗ್ ಬಾಸ್ ವಿನ್ನರ್, ಯಾದವ್ ಗಳಿಕೆ ಮೂಲ ಯಾವುದು?
ಈ ಹಿನ್ನೆಲೆಯಲ್ಲಿ ಎಲ್ವೀಸ್ ವಿರುದ್ಧ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಲಿದ್ದು, ವಿಚಾರಣೆ ಎದುರಿಸಬೇಕಾಗುತ್ತದೆ. ಈ ಕಾಯ್ದೆಯ ಸೆಕ್ಷನ್ 29 ಡ್ರಗ್ ಖರೀದಿ ಮತ್ತು ಮಾರಾಟದ ಬಗ್ಗೆ ವ್ಯವಹರಿಸುತ್ತದೆ. ಈ ಕಾನೂನಿನಡಿಯಲ್ಲಿ ಜಾಮೀನು ಪಡೆಯುವುದು ಬಹಳ ಕಠಿಣವಾಗಿದೆ ಎಂದು ವರದಿಯಾಗಿದೆ.
ಕಳೆದ ವರ್ಷ ಹಾವಿನ ವಿಷವನ್ನು ರೇವ್ ಪಾರ್ಟಿಗೆ ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಸ್ಪರ್ಧಿ ಎಲ್ವೀಸ್ ಯಾದವ್ ಹೆಸರು ಮೊದಲು ಹೊರಹೊಮ್ಮಿತು. ಕಳೆದ ನವೆಂಬರ್‌ನಲ್ಲಿ ರೇವ್ ಪಾರ್ಟಿಗೆ ಸಂಬಂಧಿಸಿದಂತೆ 5 ಜನರನ್ನು ಬಂಧಿಸಲಾಗಿತ್ತು. ಜೊತೆಗೆ ನೋಯ್ಡಾದ ಸೆಕ್ಟರ್ 49 ರಲ್ಲಿ ನಡೆದ ದಾಳಿಯ ಸಮಯದಲ್ಲಿ, ಪೊಲೀಸರು ಒಂಬತ್ತು ಹಾವುಗಳನ್ನು ವಶಪಡಿಸಿಕೊಂಡರು, ಅದರಲ್ಲಿ ಐದು ನಾಗರಹಾವುಗಳೂ ಕೂಡ ಸೇರಿತ್ತು, ಸುಮಾರು 20 ಮಿಲಿ ಹಾವಿನ ವಿಷವನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ನಿಯಮಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120 ಬಿ ಅಡಿಯಲ್ಲಿ ಕ್ರಿಮಿನಲ್ ಪಿತೂರಿಗಾಗಿ ಪ್ರಕರಣ ದಾಖಲಿಸಲಾಗಿದೆ.
ಇತ್ತ ಬಂಧಿತನಾಗಿರುವ ಎಲ್ವೀಸ್ ಯಾದವ್‌ನನ್ನು ನಿನ್ನೆ ನ್ಯಾಯಾಲಯವೂ 14 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಿದೆ. ಕಳೆದ ವರ್ಷ ಬಂಧನಕ್ಕೊಳಗಾದ ಐವರಲ್ಲಿ ನಾಲ್ವರು ಹಾವಾಡಿಗರು ಕೂಡ ಸೇರಿದ್ದಾರೆ.
ನೆತ್ತಿಗೇರಿತಾ ಬಿಗ್‌ಬಾಸ್ ಖ್ಯಾತಿ? ಆಗ ಕಳ್ಳಹಾವು ಸಾಗಾಣಿಕೆ- ಈಗ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗ ಥಳಿತ!
ಹಾವಿನ ವಿಷದ ಚಟದ ಬಗ್ಗೆ ಒಂದಿಷ್ಟು?
ಹಾವಿನ ವಿಷದ ವ್ಯಸನವೂ ಒಂದು ರೀತಿಯ ವಿಲಕ್ಷಣವೆನಿಸಿದ ವ್ಯಸನವಾಗಿದೆ. ಇಲ್ಲಿ ಕೇವಲ ಮತ್ತು ಬರಿಸಿಕೊಂಡು ಮೋಜು ಅನುಭವಿಸುವುದಕ್ಕಾಗಿ ಜನ ಹಾವಿನ ವಿಷವನ್ನು ಕೇವಲ ಕಿಕ್ ಏರಿಸಲು ಸಾಕಾಗುವಷ್ಟು ಪ್ರಮಾಣದಲ್ಲಿ ಸೇವಿಸುತ್ತಾರೆ. ಹಾವಿನ ವಿಷದಲ್ಲಿರುವ ನ್ಯೂರೋಟಾಕ್ಸಿನ್ ಅಂಶವೂ ವಿಷವೇರಿಸಿಕೊಂಡವರಿಗೆ ಮದವೇರಿಸುವುದು. ಆಫಿಡಿಸಮ್ ಎಂದೂ ಕರೆಯಲ್ಪಡುವ ಈ ರೀತಿಯ ವಿಷ ವ್ಯಸನವು ಅತ್ಯಂತ ಅಪಾಯಕಾರಿಯಾಗಿದ್ದು, ಹೆಚ್ಚು ಕಡಿಮೆ ಆದಲ್ಲಿ ಜೀವವೇ ಹೋಗಿ ಬಿಡಬಹುದು. ಜೊತೆಗೆ ಭೂಮಿಯ ಸಮತೋಲನತೆಗೆ ಕೊಡುಗೆ ನೀಡುವ ಹಾವುಗಳ ಜೀವಕ್ಕೂ ಈ ವ್ಯಸನ ಅಪಾಯಕಾರಿಯಾಗಿದೆ. ಇದು ಚಟವಾಗಿ ಅಭ್ಯಾಸವಾದರೆ ಅದರ ಪರಿಣಾಮವನ್ನು ಊಹಿಸಲಾಗದು. ಇದು ದೈಹಿಕ ಹಾಗೂ ಮಾನಸಿಕ ಬದಲಾವಣೆಗೂ ಕಾರಣವಾಗಬಹುದು.