ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದು ಮಹಿಳೆಯು ಕಟ್ಟಡದ ತುದಿಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ.
ಮೈಸೂರು (ಮಾ.18): ಮದುವೆ ಆಗದಿದ್ದರೆ ಬಿಲ್ಡಿಂಗ್ ಮೇಲಿಂದ ಬಿದ್ದು ಸಾಯ್ತೀನಿ ಎಂದು ಮಹಿಳೆಯು ಕಟ್ಟಡದ ತುದಿಯಲ್ಲಿ ನಿಂತು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನಲ್ಲಿ ನಡೆದಿದೆ. ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿದ್ದ ಯುವತಿಯು, ಖಾಸಗಿ ಹೋಟೆಲ್‌ನ ಮೇಲ್ಭಾಗದಲ್ಲಿ ನಿಂತು ರಂಪಾಟ ಮಾಡಿದ್ದು, ವಿವಾಹಿತ ಮಹಿಳೆಯಿಂದ ಯುವಕನನ್ನ ಮದುವೆ ಆಗುವಂತೆ ಒತ್ತಾಯ ಮಾಡಿದ್ದಾಳೆ. ಇಲ್ಲದಿದ್ದರೆ ಬಿಲ್ಡಿಂಗ್ ಮೇಲತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯನ್ನು ಬಿಹಾರ ಮೂಲದ ನಾಸಿಂ ಬೇಗಂ(31) ಹಾಕಿದ್ದಾಳೆ. ಸದ್ಯ ನಂಜನಗೂಡು ಪಟ್ಟಣ ಪೊಲೀಸರ ವಶದಲ್ಲಿ ಮಹಿಳೆ ಇದ್ದಾಳೆ.
ಏನಿದು ಘಟನೆ: ಬಿಹಾರ ಮೂಲದ ಆಸಿಬೂರ್ ರೆಹಮಾನ್ ಹಾಗೂ ನಾಸಿಂ ಬೇಗಂ ನಡುವೆ ಕಳೆದ ಒಂದು ವರ್ಷದಿಂದ ಇನ್ಸ್ಟಾಗ್ರಾಂ ಜಾಲತಾಣದ ಮೂಲಕ ಲವ್ ಆಗಿದೆ. ಆಸಿಬೂರ್ ರೆಹಮಾನ್, ಹಿಮ್ಮಾವು ಗ್ರಾಮದಲ್ಲಿ ವಾಸವಾಗಿದ್ದು, ಏಷಿಯನ್ ಪೈಂಟ್ಸ್‌ನಲ್ಲಿ ಕಾರ್ಮಿಕನಾಗಿ ಕೆಲಸ ಮಾಡ್ತಿದ್ದಾನೆ. ಬಿಹಾರದಿಂದ ನಂಜನಗೂಡಿಗೆ ಬಂದಿರುವ ನಾಸಿಂ ಬೇಗಂನನ್ನು ಕಂಡ ಮೇಲೆ ಆಸಿಬೂರ್ ರೆಹಮಾನ್ ನಿರಾಕರಣೆ ಮಾಡಿದ್ದಾನೆ. ಇದಕ್ಕೆ ಕಾರಣ ವಯಸ್ಸಿನ ಅಂತರ ಹೆಚ್ಚಿದೆ ಎಂದು ಮದುವೆಗೆ ಒಲ್ಲೆ ಎಂದು ಯುವಕ ಹೇಳಿದ್ದಾನೆ. ಈ ವೇಳೆ ಯುವಕನ ಮಾತಿನಿಂದ ಸಿಟ್ಟಿಗೆದ್ದು ಮದುವೆ ಮಾಡಿಕೊಳ್ಳುವಂತೆ ಮಹಿಳೆಯು ಹೈಡ್ರಾಮ ಮಾಡಿದ್ದು, ಸದ್ಯ ನಂಜನಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳ್ಳತನದ ಆರೋಪಕ್ಕೆ ಹೆದರಿ ವಿದ್ಯಾರ್ಥಿನಿ ಆತ್ಮಹತ್ಯೆ: ಶಿಕ್ಷಕಿಯ ಪರ್ಸಿನಲ್ಲಿದ್ದ ಹಣ ಕದ್ದಿರುವ ಆರೋಪದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕದಾಂಪುರ ಗ್ರಾಮದಲ್ಲಿ ನಡೆದಿದೆ. ಕದಾಂಪುರ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ದಿವ್ಯಾ ಬಾರಕೇರ (13) ಮೃತ ಬಾಲಕಿ. ‘ಶಾಲೆಯ ಶಿಕ್ಷಕಿ ಜಯಶ್ರೀ ಮಿಶ್ರಿಕೋಟಿ ತಮ್ಮ ಪರ್ಸಿನಲ್ಲಿದ್ದ ₹2000 ದಿವ್ಯಾ ಕದ್ದಿದ್ದಾಳೆ ಎಂಬ ಸಂಶಯ ವ್ಯಕ್ತಪಡಿಸಿದ್ದರು.
ಶುಭಸುದ್ದಿ: ಮುಂದಿನ 3 ದಿನಗಳಲ್ಲಿ ಕರ್ನಾಟಕದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ ಸಂಭವ!
ಈ ಹಿನ್ನೆಲೆ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕ ಕೆ.ಎಚ್ ಮುಜಾವರ ಸೇರಿ ಎಲ್ಲ ಮಕ್ಕಳ ಎದುರೇ ದಿವ್ಯಾಳಿಗೆ ಹೆದರಿಸಿದ್ದಾರೆ. ಹಣ ಕದ್ದಿರುವುದನ್ನು ಒಪ್ಪದಿದ್ದರೆ ಟಿಸಿ (ವರ್ಗಾವಣೆ ಪ್ರಮಾಣಪತ್ರ) ಕಿತ್ತು ಕಳಿಸುವುದಾಗಿ ಅವಮಾನಿಸಿದ್ದಾರೆ. ಇದನ್ನು ಮನಸ್ಸಿಗೆ ಹಚ್ಚಿಕೊಂಡು ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನನ್ನ ಮಗಳ ಸಾವಿಗೆ ಶಿಕ್ಷಕಿ ಹಾಗೂ ಮುಖ್ಯಶಿಕ್ಷಕ ಕಾರಣ’ ಎಂದು ಬಾಲಕಿಯ ತಂದೆ ಶಿವಪ್ಪ ಬಾರಕೇರ ಅವರು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.