* ಮಾಜಿ ಸಚಿವ ವರ್ತೂರು ಪ್ರಕಾಶ್ ಅಪಹರಣ ಕೇಸ್‌ನಲ್ಲೂ ಭಾಗಿಯಾಗಿದ್ದ ರೋಹಿತ್
* ಇಂದಿರಾ ನಗರ ಪೊಲೀಸರ ಕಾರ್ಯಾಚರಣೆ
* ಹಣಕ್ಕಾಗಿ ಶ್ರೀಮಂತರ ಅಪಹರಣ ಮಾಡ್ತಿದ್ದ ಆರೋಪಿ
ಬೆಂಗಳೂರು(ಡಿ.12): ನಾಲ್ಕು ತಿಂಗಳ ಹಿಂದೆ ಹಣಕ್ಕಾಗಿ ಆಟೋ ಚಾಲಕ(Auto Driver) ವಿಜಯಕುಮಾರ್ ಅಪಹರಿಸಿ(Kidnap) ಕೊಲೆಗೈದಿದ್ದ ಪ್ರಕರಣದಲ್ಲಿ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪಹರಣಕಾರನೊಬ್ಬನಿಗೆ ಇಂದಿರಾ ನಗರ ಠಾಣೆ ಪೊಲೀಸರು ಗುಂಡು ಹೊಡೆದು ಶನಿವಾರ ಬಂಧಿಸಿದ್ದಾರೆ.
ಮೈಕೋ ಲೇಔಟ್ ನಿವಾಸಿ ಲೋಹಿತ್ ಅಲಿಯಾಸ್ ರೋಹಿತ್‌ಗೆ ಗುಂಡೇಟು ಬಿದ್ದಿದ್ದು, ಜೆ.ಬಿ.ನಗರ ಸಮೀಪದ ಚಲ್ಲಘಟ್ಟದಲ್ಲಿ ಶನಿವಾರ ಮುಂಜಾನೆ ಆತನ ಬಂಧನ(Arrest) ಕಾರ್ಯಾಚರಣೆ ವೇಳೆ ಈ ಗುಂಡಿನ ದಾಳಿ(Firing) ನಡೆದಿದೆ. ಈ ವೇಳೆ ಇಂದಿರಾನಗರ ಪೊಲೀಸ್ ಕಾನ್‌ಸ್ಟೇಬಲ್ ಸೈಯದ್ ಮೊಹಿನ್‌ನುಲ್ಲಾ ಅವರಿಗೂ ಪೆಟ್ಟಾಗಿದೆ. ಆಟೋ ಚಾಲಕ ವಿಜಯಕುಮಾರ್ ಕೊಲೆ(Murder) ಪ್ರಕರಣದಲ್ಲಿ ತನ್ನ ಸಹಚರರು ಸಿಕ್ಕಿಬಿದ್ದ ಬಳಿಕ ಬಂಧನ ಭೀತಿಯಿಂದ ಲೋಹಿತ್ ತಲೆಮರೆಸಿಕೊಂಡಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
Assault on Police: ಅಣ್ತಮ್ಮ ವಿರುದ್ಧ ರೌಡಿಪಟ್ಟಿ: ಸಾಮಾಜಿಕ ಜಾಲತಾಣದಲ್ಲಿ ಟೀಕೆ
ದರೋಡೆ ಕಾರಿನಲ್ಲಿ ಓಡಾಟ:
ಲೋಹಿತ್ ಅಪರಾಧ(Crime) ಹಿನ್ನೆಲೆಯುಳ್ಳವನಾಗಿದ್ದು, ಆತನ ಮೇಲೆ ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಮಾತ್ರವಲ್ಲದೆ ಆಂಧ್ರಪ್ರದೇಶದ(Andhra Pradesh) ವಿವಿಧ ಠಾಣೆಗಳಲ್ಲಿ ಸುಮಾರು 17ಕ್ಕೂ ಹೆಚ್ಚಿನ ಪ್ರಕರಣಗಳು(Cases) ದಾಖಲಾಗಿವೆ. ಶ್ರೀಮಂತರನ್ನು ಅಪಹರಿಸಿ ಹಣ ಸುಲಿಗೆ(Robbery) ಮಾಡುತ್ತಿದ್ದ ಕೃತ್ಯಗಳ ಹಿನ್ನೆಲೆಯಲ್ಲಿ ಆತನ ವಿರುದ್ಧ ಬನ್ನೇರುಘಟ್ಟ ಹಾಗೂ ಎಚ್‌ಎಸ್‌ಆರ್ ಠಾಣೆಗಳಲ್ಲಿ ರೌಡಿಪಟ್ಟಿ ತೆರೆಯಲಾಗಿತ್ತು.
ಕಳೆದ ವರ್ಷದ ಹಿಂದೆ ಕೋಲಾರದಲ್ಲಿ ನಡೆದಿದ್ದ ಮಾಜಿ ಸಚಿವ ಆರ್.ವರ್ತೂರು ಪ್ರಕಾಶ್(R Vartur Prakash) ಅಪಹರಣ ಪ್ರಕರಣದಲ್ಲಿ ಕೂಡ ಲೋಹಿತ್ ಪ್ರಮುಖ ಆರೋಪಿಯಾಗಿದ್ದ. ಮಾಜಿ ಸಚಿವರ ಅಪಹರಣ ಕೃತ್ಯದ ಬಳಿಕ ಹಣಕ್ಕಾಗಿ ಇಂದಿರಾನಗರದಲ್ಲಿ ಆಟೋ ಚಾಲಕ ವಿಜಯ್‌ಕುಮಾರ್ ಅವರನ್ನು ಅಪಹರಿಸಿ ಲೋಹಿತ್ ಹಾಗೂ ಆತನ ಸಹಚರರು ಹತ್ಯೆಗೈದಿದ್ದರು. ಈ ಪ್ರಕರಣದಲ್ಲಿ ಆತನ 9 ಮಂದಿ ಸಹಚರರ ಬಂಧನವಾಗಿತ್ತು. ಅದರಲ್ಲಿ ಕವಿರಾಜ್ ಹಾಗೂ ಅಮರೇಶ್ ಎಂಬುವರಿಗೆ ಪೊಲೀಸರು(Police) ಗುಂಡು ಹೊಡೆದಿದ್ದರು. ಆದರೆ ಆಟೋ ಚಾಲಕನ ಹತ್ಯೆ ಬಳಿಕ ನಗರ ತೊರೆದು ಲೋಹಿತ್, ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದ. ಆ ವೇಳೆ ಬಾಡಿಗೆ ನೆಪದಲ್ಲಿ ಕರೆದೊಯ್ದು ಕ್ಯಾಬ್ ಚಾಲಕ ಮೇಲೆ ಹಲ್ಲೆ ನಡೆಸಿ ಆತನಿಂದ ಇನ್ನೋವಾ ಕಾರನ್ನು ಆರೋಪಿ ಕದ್ದಿದ್ದ. ಇದೇ ಕಾರಿನಲ್ಲಿ ಲೋಹಿತ್ ಸುತ್ತಾಡುತ್ತಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
Mangaluru Attack : ಮಂಗಳೂರಲ್ಲಿ ಇಬ್ಬರು ಅನ್ಯಧರ್ಮೀಯ ಯುವಕರಿಗೆ ಥಳಿತ : ಯುವತಿಯರ ಜತೆ ತೆರಳುತ್ತಿದ್ದಾಗ ಹಲ್ಲೆ
ಮತ್ತೆ ನಗರದಲ್ಲಿ ಹಾವಳಿ
ಆಟೋ ಚಾಲಕ ವಿಜಯ್‌ಕುಮಾರ್ ಹತ್ಯೆ ಬಳಿಕ ಕೆಲ ದಿನಗಳು ತಣ್ಣಗಿದ್ದ ಲೋಹಿತ್, ಮತ್ತೆ ನಗರದಲ್ಲಿ ತನ್ನ ಹಾವಳಿ ಶುರು ಮಾಡಿದ್ದ. ಬೈಯ್ಯಪ್ಪನಹಳ್ಳಿ ಸಮೀಪ ಕೊಲೆ ಪ್ರಕರಣವೊಂದರ ಸಾಕ್ಷಿದಾರನಾಗಿದ್ದ ನಾರಾಯಣಸ್ವಾಮಿ ಎಂಬಾತನ ಹತ್ಯೆಗೆ ಆತ ಯತ್ನಿಸಿದ್ದ. ಹೀಗೆ ಕಳೆದ ಮೂರು ತಿಂಗಳಿಂದ ಸರಣಿ ದುಷ್ಕೃತ್ಯಗಳನ್ನು ಎಸಗುವ ಮೂಲಕ ಪೊಲೀಸರಿಗೆ ಲೋಹಿತ್ ತಲೆನೋವಾಗಿ ಪರಿಣಮಿಸಿದ್ದ. ಹೀಗಾಗಿ ಅತನನ್ನು ಬಂಧಿಸಲು ಪೊಲೀಸರು ಬೆನ್ನು ಹತ್ತಿದ್ದರು. ಕೊನೆಗೆ ಆತನ ನಗರದಲ್ಲಿರುವ ಸಂಪರ್ಕ ಜಾಲದ ಮೇಲೆ ನಿಗಾವಹಿಸಿದ್ದ ತನಿಖಾ ತಂಡಕ್ಕೆ ಶನಿವಾರ ನಸುಕಿನ 5.30ರ ಸುಮಾರಿಗೆ ಚಲ್ಲಘಟ್ಟಸಮೀಪ ಲೋಹಿತ್ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಇಂದಿರಾನಗರ ಪೊಲೀಸರು, ಕೂಡಲೇ ಆರೋಪಿ ಬಂಧನಕ್ಕೆ ತೆರಳಿದ್ದಾರೆ. ಆಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಾಲಿಗೆ ಸಬ್ ಇನ್‌ಸ್ಪೆಕ್ಟರ್ ಅಮರೇಶ್ ಜಗಲ್ಕರ್ ಗುಂಡು ಹೊಡೆದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.