Crime News: ಮಂಗ್ಳೂರು ಹಲ್ಲೆ ಕೇಸ್‌ನಲ್ಲಿ ನಾಲ್ವರು ಪೊಲಿಸರ ವಶಕ್ಕೆ, ಕಾರಿನಲ್ಲಿ ಮಹಿಳೆಯ ಚಪ್ಪಲಿ ಪತ್ತೆ

By Suvarna News  |  First Published Dec 11, 2021, 11:26 PM IST

* ಮಂಗಳೂರು ಹಲ್ಲೆ ಕೇಸ್‌
* ನಾಲ್ವರನ್ನ ವಶಕ್ಕೆ ಪಡೆದ ಮಂಗಳೂರು ಪೊಲೀಸರು
* ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ


ಮಂಗಳೂರು, (ಡಿ.11): ಮಂಗಳೂರಿನ (Mangaluru) ಹೊರವಲಯದ ನೀರುಮಾರ್ಗ ಪಡು ಪೋಸ್ಟ್‌ ಆಫೀಸ್‌ ಬಳಿ ಯುವತಿಯೊಬ್ಬಳನ್ನು ಅನ್ನ ಧರ್ಮದ (Religion) ಯುವಕ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ತಂಡವೊಂದು ತಡೆದು ಗಂಭೀರ ಹಲ್ಲೆ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು (Police) ನಾಲ್ವರು ಆರೋಪಿಗಳನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಇಂದು(ಶನಿವಾರ) ಮಂಗಳೂರು ನಗರ ಪೊಲೀಸ್ ಕಮಿಷನರ್ 9mangaluru Police Commissioner) ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

Latest Videos

undefined

Mangaluru Attack : ಮಂಗಳೂರಲ್ಲಿ ಇಬ್ಬರು ಅನ್ಯಧರ್ಮೀಯ ಯುವಕರಿಗೆ ಥಳಿತ : ಯುವತಿಯರ ಜತೆ ತೆರಳುತ್ತಿದ್ದಾಗ ಹಲ್ಲೆ

ಗಾಯಾಳು ಅಬ್ದುಲ್ ರಿಯಾಜ್ ಆಸ್ಪತ್ರೆಯಲ್ಲಿದ್ದು ಹಲ್ಲೆಗೆ ಸ್ಪಷ್ಟ ಕಾರಣ ಗೊತ್ತಾಗಿಲ್ಲ. ರಿಟ್ಜ್ ಕಾರಿನಲ್ಲಿ ಮಹಿಳೆಯರು ಧರಿಸುವ ಒಂದು ಜತೆ ಚಪ್ಪಲಿ ಪತ್ತೆಯಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ.

ಘಟನೆ
ಮಂಗಳೂರಿನ ಹೊರವಲಯದ ನೀರುಮಾರ್ಗ ಪಡು ಪೋಸ್ಟ್‌ ಆಫೀಸ್‌ ಬಳಿ ಯುವತಿಯೊಬ್ಬಳನ್ನು ಅನ್ನ ಧರ್ಮದ (Religion) ಯುವಕ ತನ್ನ ಕಾರಿನಲ್ಲಿ ಕರೆದೊಯ್ಯುತ್ತಿದ್ದಾಗ ತಂಡವೊಂದು ತಡೆದು ಗಂಭೀರ ಹಲ್ಲೆ ನಡೆಸಿತ್ತು.

ಅಡ್ಯಾರ್‌ ಪದವಿನ ಯುವಕ ತನ್ನ ಕಾರಿನಲ್ಲಿ ಯುವತಿ ಜತೆಗೆ ಮಲ್ಲೂರು ಎಂಬ ಕಡೆಗೆ ತೆರಳುತ್ತಿದ್ದ. ದಾರಿಮಧ್ಯೆ ಯುವಕರ ತಂಡವೊಂದು ಕಾರು ತಡೆದು ಯುವತಿ ಮತ್ತು ಯುವಕನನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಯುವಕನ ಮೇಲೆ ಬಾಟಲಿಗಳಿಂದ ಗಂಭೀರ ಹಲ್ಲೆ ಮಾಡಿದ್ದಾರೆ. ಯುವಕನ ತಲೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 307 ಐಪಿಸಿ ಪ್ರಕರಣ ದಾಖಲಾಗಿದೆ.

 ಮತಾಂತರಿಸಲು ಯತ್ನಿಸಿದವರನ್ನ ಹಿಡಿದು ಪೊಲೀಸರಿಗೊಪ್ಪಿಸಿದ ಜನ
ಕೋಲಾರ: ಮತಾಂತರ ನಿಷೇಧ ಕಾಯ್ದೆ ಕುರಿತ ಚರ್ಚೆ ವ್ಯಾಪಕವಾಗಿ ನಡೆಯುತ್ತಿರುವ ನಡುವೆಯೇ ಬಲವಂತದ ಮತಾಂತರ ಯತ್ನ ಪ್ರಕರಣವೊಂದು ಕೋಲಾರದಲ್ಲಿ ಕಂಡುಬಂದಿದೆ. ಮತಾಂತರ ಮಾಡಿಸಲು ಯತ್ನಿಸುತ್ತಿದ್ದ ನಾಲ್ವರನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಮೋತಿಲಾಲ್ ರಸ್ತೆಯಲ್ಲಿ ನಾಲ್ವರು ಕ್ರಿಶ್ಚಿಯನ್​ ಧರ್ಮಪ್ರಚಾರಕರು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸಿರುವುದು ಕಂಡು ಬಂದಿತ್ತು.

ಇಲ್ಲಿನ ಬೇಬಮ್ಮ ಎನ್ನುವವರ ಮನೆಯಲ್ಲಿ ಈ ಮತಾಂತರ ಯತ್ನ ನಡೆಯುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಮತಾಂತರಕ್ಕೆ ಬಳಸಿದ್ದ ಪುಸ್ತಕ ಹಾಗೂ ಭಿತ್ತಿಪತ್ರಗಳನ್ನ ರಸ್ತೆಗೆ ಹಾಕಿ ಬೆಂಕಿ ಹಚ್ಚಿದ್ದಾರೆ.

ಮಾಹಿತಿ ತಿಳಿದ ಶ್ರೀನಿವಾಸಪುರ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಬಳಿಕ ನಾಲ್ವರು ಕ್ರಿಶ್ಚಿಯನ್ ಗುರುಗಳು ಹಾಗೂ ಅವರು ಬಂದಿದ್ದ ವಾಹನವೊಂದನ್ನು ವಶಕ್ಕೆ ಪಡೆದಿದ್ದಾರೆ. 

click me!