Sexual Harassment: ಉತ್ತರ ಪ್ರದೇಶದಲ್ಲಿ 13ರ ಹರೆಯದ ಬಾಲಕಿಯನ್ನು ಕೂಡಿ ಹಾಕಿ ಅತ್ಯಚಾರವೆಸಗಿದ 17ರ ಬಾಲಕ!

Published : Dec 11, 2021, 01:00 PM IST
Sexual Harassment: ಉತ್ತರ ಪ್ರದೇಶದಲ್ಲಿ 13ರ ಹರೆಯದ ಬಾಲಕಿಯನ್ನು ಕೂಡಿ ಹಾಕಿ ಅತ್ಯಚಾರವೆಸಗಿದ 17ರ ಬಾಲಕ!

ಸಾರಾಂಶ

ಕೋಚಿಂಗ್ ಕ್ಲಾಸ್‌ನಿಂದ ಹಿಂತಿರುಗುತ್ತಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಬಾಲಕಿಯನ್ನು ಕೂಡಿ ಹಾಕಿ ಅತ್ಯಾಚಾರವೆಸಗಿದ 17ರ ಬಾಲಕ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದ ಘಟನೆ

ಬರೇಲಿ: ಕೋಚಿಂಗ್ ಕ್ಲಾಸ್‌ನಿಂದ ಹಿಂತಿರುಗುತ್ತಿದ್ದ ಬಾಲಕಿ ಮೇಲೆ ಮೆಡಿಕಲ್ ಸ್ಟೋರ್‌ನಲ್ಲಿ 17 ವರ್ಷದ ಹುಡುಗ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬರೇಲಿ (Bareilly) ಜಿಲ್ಲೆಯಲ್ಲಿ ನಡೆದಿದೆ. 13 ವರ್ಷದ ಬಾಲಕಿ ಮಂಗಳವಾರ ಸಂಜೆ ಟ್ಯೂಷನ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ಆರೋಪಿ ತನ್ನ ಕುಟುಂಬದ ಒಡೆತನದ ಮೆಡಿಕಲ್ ಸ್ಟೋರ್ ನಲ್ಲಿ ಬಾಲಕಿಯನ್ನು ಕೂಡಿ ಹಾಕಿ ಈ ದುಷ್ಕೃತ್ಯ ಎಸಗಿದ್ದಾನೆ. ವಿಚಾರ ತಿಳಿದ ಹುಡುಗಿಯ ಮನೆಯವರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 328, 376, ಮತ್ತು ಪೋಕ್ಸೋ ಕಾಯ್ದೆಯ ಇತರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. 

ಕೋಚಿಂಗ್ ತರಗತಿಗಳಿಗೆ (coaching classes)ತೆರಳಿ ಮಗಳು ಮನೆಗೆ ಬರದಿದ್ದಾಗ ತಂದೆ ಮತ್ತು ಸಹೋದರ ಹುಡುಕಾಡಲು ಆರಂಭಿಸಿದ್ದಾರೆ. ಈ ವೇಳೆ ಆಕೆಯ ಸ್ನೇಹಿತರು ಮೆಡಿಕಲ್ ಸ್ಟೋರ್‌ನಲ್ಲಿ ನೋಡಿದ್ದಾಗಿ ಕುಟುಂಬದವರಿಗೆ ತಿಳಿಸಿದ್ದಾರೆ. ಬಾಲಕಿಯ ತಂದೆ ಅಂಗಡಿಗೆ ಧಾವಿಸಿದಾಗ, ಅಂಗಡಿ ಮುಚ್ಚಿರುವುದನ್ನು ಕಂಡಿದ್ದಾರೆ. ಆದರೆ ಲೈಟ್ ಗಳು ಉರಿಯುತ್ತಿದ್ದವು. ಸಂತ್ರಸ್ತೆಯ ತಂದೆ ಜೋರಾಗಿ ಬಡಿದಾಗ ಹುಡುಗ ಬಾಗಿಲು ತೆರೆದಿದ್ದಾನೆ. ಅಂಗಡಿಯೊಳಗೆ ನೋಡಿದಾಗ, ಮಗಳು ಪ್ರಜ್ಞಾಹೀನ ಸ್ಥಿತಿಯಲ್ಲಿರುವುದು ಮತ್ತು ಆಕೆಯ ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿರುವುದನ್ನು ನೋಡಿದ್ದಾರೆ. ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಾಲಕಿಯ ತಂದೆ ನೀಡಿದ ದೂರಿನ ಮೇರೆಗೆ ಪೊಲೀಸರು ಪೋಕ್ಸೋ ಕಾಯ್ದೆಯಡಿ  ಪ್ರಕರಣ ದಾಖಲಿಸಿದ್ದಾರೆ.

Rape on Minor Girl : ಪತ್ನಿ ಹೆರಿಗೆಗೆ ಕಳಿಸಿ ಅಪ್ರಾಪ್ತೆ ಗರ್ಭಿಣಿಯಾಗಿಸಿದ : ಹೆದರಿ ಆತ್ಮಹತ್ಯೆಗೆ ಯತ್ನಿಸಿದ

ಉತ್ತರ ಪ್ರದೇಶದ ಶಾಲೆಯೊಂದರಲ್ಲಿ 17 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: ಉತ್ತರ ಪ್ರದೇಶದಲ್ಲಿ ಪದೇ ಪದೇ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಎರಡು (Muzaffarnagar District) ಖಾಸಗಿ ಶಾಲೆಗಳ ಮ್ಯಾನೇಜರ್‌ಗಳ ವಿರುದ್ಧ 17 ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Harassment) ಎಸಗಿದ್ದಾರೆ ಮತ್ತು ಮಾದಕ ದ್ರವ್ಯ ನೀಡಿ ಅತ್ಯಾಚಾರಕ್ಕೆ (Rape) ಯತ್ನಿಸಿದ್ದಾರೆ ಎಂಬ ಆರೋಪ ಕೆಳಿ ಬಂದಿತ್ತು. ಈ ಸಂಬಂಧ ಪೊಲೀಸರು ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡಿದ್ದರು. ಈ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದಕ್ಕೆ ಪೊಲೀಸ್ ಅಧಿಕಾರಿಯೊಬ್ಬರನ್ನು (Police Officer) ತರಾಟೆಗೆ ತೆಗೆದುಕೊಂಡಿದ್ದರು.

Muzaffarnagar: ಪ್ರ್ಯಾಕ್ಟಿಕಲ್ ನೆಪ, 17 ಬಾಲಕಿಯರಿಗೆ ನಶೆ ಪದಾರ್ಥ ನೀಡಿ ರೇಪ್ ಯತ್ನ, ಶಾಲಾ ಮ್ಯಾನೇಜರ್ ಅರೆಸ್ಟ್‌!

ಪ್ರಕರಣಕ್ಕೆ ಸಂಬಂಧಿಸಿ  ಸೂರ್ಯ ದೇವ್ ಪಬ್ಲಿಕ್ ಸ್ಕೂಲ್‌ನ ನಿರ್ವಾಹಕ ಯೋಗೇಶ್ ಕುಮಾರ್ ಚೌಹಾಣ್ ಮತ್ತು ಪುರ್ಕಾಜಿ ಪ್ರದೇಶದ ಜಿಜಿಎಸ್ ಇಂಟರ್ನ್ಯಾಷನಲ್ ಸ್ಕೂಲ್‌ನ ನಿರ್ವಾಹಕ ಅರ್ಜುನ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಾದಕ ದ್ರವ್ಯಗಳನ್ನು ನೀಡಿದ ಸೆಕ್ಷನ್‌ ಹಾಗೂ  POCSO ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.

ಯೋಗೇಶ್ ತನ್ನ ಶಾಲೆಯಲ್ಲಿ ಓದುತ್ತಿರುವ 17 ಹುಡುಗಿಯರನ್ನು ಪ್ರಾಯೋಗಿಕ ಪರೀಕ್ಷೆಗಾಗಿ ಜಿಜಿಎಸ್ ಶಾಲೆಗೆ ಕರೆದೊಯ್ದ ಸಂದರ್ಭ ಮಾದಕ ವಸ್ತು ನೀಡಿ ಅತ್ಯಾಚಾರ ಎಸಗಿದ್ದ. ಜಿಜಿಎಸ್ ಇಂಟರ್ನ್ಯಾಷನಲ್ ಸ್ಕೂಲ್‌ನ ನಿರ್ವಾಹಕ ಅರ್ಜುನ್ ಸಿಂಗ್ ಇದಕ್ಕೆ ಸಾಥ್ ನೀಡಿದ್ದ.  ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಆರೋಪಿಗಳು ಹುಡುಗಿಯರಿಗೆ ಬೆದರಿಕೆ ಕೂಡ ಹಾಕಿದ್ದರು. ವಿದ್ಯಾರ್ಥಿಗಳ ಕುಟುಂಬದವರ ಪ್ರಕಾರ, ಅವರು ಸ್ಥಳೀಯ ಪೊಲೀಸರಿಗೆ ತಿಳಿಸಿದಾಗ ಅವರು ಯಾವುದೇ ಕ್ರಮ ತೆಗೆದುಕೊಳ್ಳಲಿಲ್ಲ, ನಂತರ ಅವರು ಶಾಸಕರನ್ನು ಸಂಪರ್ಕಿಸಿದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!