Man Arrested For Spying: ಪಾಕಿಸ್ತಾನ ಪರ ಬೇಹುಗಾರಿಕೆ : ಓರ್ವ ಸೆರೆ!

Published : Nov 28, 2021, 12:15 PM IST
Man Arrested For Spying: ಪಾಕಿಸ್ತಾನ ಪರ ಬೇಹುಗಾರಿಕೆ : ಓರ್ವ ಸೆರೆ!

ಸಾರಾಂಶ

*ಪಾಕಿಸ್ತಾನದ ಪರ ಬೇಹುಗಾರಿಕೆ: ಜೈಪುರದಲ್ಲಿ ಓರ್ವ ಸೆರೆ :  *ಪಾಕಿಸ್ತಾನದಲ್ಲಿ ಆರೋಪಿ 15 ದಿನಗಳ ತರಬೇತಿ *ಬಂಧಿತ ನವಾಬ್ ISI ನ ಸ್ಲೀಪರ್ ಸೆಲ್ ಆಗಿ ಕೆಲಸ 

ಜೈಪುರ(ನ.28): ರಾಜಸ್ಥಾನದ ಜೈಸಲ್ಮೇರ್‌ನಲ್ಲಿ(Jaisalmer), ನೆರೆಯ ರಾಷ್ಟ್ರವಾದ ಪಾಕಿಸ್ತಾನಕ್ಕಾಗಿ (Pakistan) ಬೇಹುಗಾರಿಕೆ (Spy) ನಡೆಸಿದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲಾಗಿದೆ. ಆರೋಪಿಯನ್ನು 32 ವರ್ಷ ಚಾನೆಸರ್ ಖಾನ್‌ನ ಧಾನಿ ನಿವಾಸಿ ನವಾಬ್ ಖಾನ್ (Nawab Khan) ಎಂದು ಗುರುತಿಸಲಾಗಿದೆ. ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿರುವ ಶಂಕೆಯ ಮೇರೆಗೆ ಜೈಪುರದಿಂದ ಭಾರತೀಯ ಭದ್ರತಾ ಏಜೆನ್ಸಿಗಳು ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ನವಾಬ್ Inter Service Intelligence (ISI) ನ ಸ್ಲೀಪರ್ ಸೆಲ್ (Sleeper Cell) ಆಗಿ ಕೆಲಸ ಮಾಡುತ್ತಿದ್ದ ಎಂದು ಭದ್ರತಾ ಸಂಸ್ಥೆಯ ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ. ಸದ್ಯ ಆತನನ್ನು ಜೈಪುರಕ್ಕೆ ಕರೆತಂದು ಅನುಮಾನದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ನವಾಬನನ್ನು ವಿಚಾರಣೆಗೊಳಪಡಿಸಿದ ಬಳಿಕ ಹಲವು ಮಹತ್ವದ ಮಾಹಿತಿಗಳು ಹೊರಬೀಳಬಹುದು ಹಾಗೂ ಸ್ಲೀಪರ್ ಸೆಲ್ ಬಗ್ಗೆ ಹಲವು ಮಾಹಿತಿ ಹೊರಬೀಳಬಹುದು ಎಂದು ನಂಬಲಾಗಿದೆ.

ಪಾಕಿಸ್ತಾನದಲ್ಲಿ 15 ದಿನಗಳ ತರಬೇತಿ! 

ಆರೋಪಿ ನವಾಬ್ ಖಾನ್ ಮೊಬೈಲ್ ಸಿಮ್ ಕಾರ್ಡ್‌ಗಳನ್ನು (Sim Card) ಮಾರಾಟ ಮಾಡುವ ಸಣ್ಣ ಅಂಗಡಿಯನ್ನು ನಡೆಸುತ್ತಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ (Pakistanʼs ISI) ದೀರ್ಘಕಾಲ ಬೇಹುಗಾರಿಕೆ ನಡೆಸುತ್ತಿದ್ದ ಎಂದು ಗುಪ್ತಚರ ಮಹಾನಿರ್ದೇಶಕ ಉಮೇಶ್ ಮಿಶ್ರಾ (Umesh Mishra) ಹೇಳಿದ್ದಾರೆ. ಖಾನ್ 2015 ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದರು, ಅಲ್ಲಿ ಅವರು ಐಎಸ್‌ಐ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕ ಹೊಂದಿದ್ದರು ಎಂದು ಮಿಶ್ರಾ ಹೇಳಿದ್ದಾರೆ. 

ಹನಿಟ್ರ್ಯಾಪ್‌ ಆಗಿದ್ದ ‘ಪಾಕ್‌ ಗೂಢಚರ’ ಬೆಂಗ್ಳೂರಲ್ಲಿ ಸೆರೆ!

ಅಲ್ಲಿ ಅವರಿಗೆ 15 ದಿನಗಳ ತರಬೇತಿ ನೀಡಲಾಯಿತು ಮತ್ತು ಪ್ರತಿಯಾಗಿ 10,000 ರೂಪಾಯಿಗಳನ್ನು ಸಹ ನೀಡಲಾಯಿತು. ನಂತರ ಭಾರತಕ್ಕೆ ಮರಳಿದ ನಂತರ ಪಾಕ್ ಏಜೆನ್ಸಿಗಾಗಿ ಬೇಹುಗಾರಿಕೆ ಆರಂಭಿಸಿದ್ದರು. ಆರೋಪಿಯು ಭಾರತೀಯ ಸೇನೆಯ ಸ್ಥಳೀಯ ಚಟುವಟಿಕೆಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದ ಮೂಲಕ ತನ್ನ ಹ್ಯಾಂಡ್ಲರ್‌ಗೆ ರವಾನಿಸುತ್ತಿದ್ದ ಎಂದು ಮಿಶ್ರಾ ಹೇಳಿದ್ದಾರೆ.

ಪಾಕಿಸ್ತಾನದ ಐಎಸ್ಐ (ISI) ಅಧಿಕಾರಿಗಳ ಜೊತೆ ನೇರ ಸಂಪರ್ಕ

ಇದೇ ಮಾದರಿಯಲ್ಲಿ ಸೇನೆಯ ಮಾಹಿತಿಯನ್ನು ಪಾಕಿಸ್ತಾನದ ಇಂಟೇಲಿಜೇನ್ಸ್‌ಗೆ ರವಾನಿಸುತ್ತಿದ್ದ ವ್ಯಕ್ತಿಯನ್ನು ಇತ್ತೀಚೆಗೆ ಬಂಧಿಸಲಾಗಿತ್ತು.ದೇಶದ ಮಿಲಿಟರಿ ಮಾಹಿತಿಯನ್ನು (Military Information) ವೈರಿಗಳಿಗೆ ಲೀಕ್ ಮಾಡುತ್ತಿದ್ದ  ರಾಜಸ್ಥಾನ ಮೂಲದ ವ್ಯಕ್ತಿಯನ್ನು ಸೆಪ್ಟೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು.  ಕಿರಾತಕ ಜೀತೇಂದ್ರ ರಾಥೋಡ್ (Jitendra Rathore) ಸೇನಾ ಯುನಿಫಾರ್ಮ್ ಸಹ ಇಟ್ಟುಕೊಂಡಿದ್ದ.

ಈತ  ರಾಜಸ್ಥಾನದ (Rajasthan) ಬಾರ್ಮರ್ ಹಳ್ಳಿಯವನಾಗಿದ್ದು, ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿತ್ತು. ಪಾಕಿಸ್ತಾನದ ಐಎಸ್ಐ (ISI) ಅಧಿಕಾರಿಗಳ ಜೊತೆ ನೇರ ಸಂಪರ್ಕ ಹೊಂದಿದ್ದು,  ವಾಟ್ಸಪ್ ಸಂದೇಶ, ಕಾಲ್ ಮೂಲಕ ಸೇನೆಯ ಸ್ಥಳ ಹಾಗೂ ಮಾಹಿತಿ ಕಳುಹಿಸಿದ್ದ. ಕಣ್ಣಿಗೆ ಕಾಣದ ಯುವತಿಯ ಮಾತಿಗೆ ಮರುಳಾಗಿ ಮಾಹಿತಿ ಕಳಿಸುತ್ತಿದ್ದ ಎಂಬ ಅಂಶವೂ ಬಹಿರಂಗವಾಗಿತ್ತು. ವೈರಿಗಳು ಯುವತಿ  ಹೆಸರಿನಲ್ಲಿ ಸೋಶಿಯಲ್ ಮೀಡಿಯಾ ಖಾತೆ ಸೃಷ್ಟಿ ಮಾಡಿಕೊಂಡು ಈತನನ್ನು ಸಂಪರ್ಕ ಮಾಡಿದ್ದರು. 

ಪೆಗಾಸಸ್: ಜನತೆಗೆ ತಮ್ಮ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕಿದೆ, ಕೇಂದ್ರಕ್ಕೆ ಸುಪ್ರೀಂ ತರಾಟೆ!

ಭಯೋತ್ಪಾದನೆ ನಿಗ್ರಹ ದಳ (Anti terrorist cell) ಇತನ ಮೋಬೈಲ್‌ ರಿಟ್ರೀವ್‌ (Retrieve) ಮಾಡಿದೆ. ಈ ವೇಳೆ ಮೋಬೈಲ್‌ನಲ್ಲಿ 50 ಕ್ಕೂ ಹೆಚ್ಚು ಯುವತಿಯರ ಫೋಟೋಗಳು ಪತ್ತೆಯಾಗಿವೆ.  ಇನ್ಸ್ಟಾಗ್ರಾಮ್‌ (Instagram) ಹಾಗೂ ಫೇಸ್‌ಬುಕ್‌ (Facebook) ಬಳಸಿ ಕಾರಾಚಿಯ ಮೂಲದ ಯುವತಿಯನ್ನು ಪರಿಚಯ ಮಾಡಿಕೊಳ್ಳುವುದರ ಮೂಲಕ ಪಾಕ್‌ ಇಂಟಲಿಜನ್ಸ್‌ಗೆ (Pakistan Intelligence) ಕೆಲವು ಫೋಟೋಗಳನ್ನು ರವಾನಿಸಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!