Fraud: ಸರ್ಕಾರಿ ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ವಂಚನೆ..!

By Kannadaprabha News  |  First Published Nov 28, 2021, 11:10 AM IST

*  ಸರ್ವೆ ಇಲಾಖೆಯಲ್ಲಿ ಉನ್ನತಾಧಿಕಾರಿ ಸೋಗಲ್ಲಿ ನಿರುದ್ಯೋಗಿಗಳಿಗೆ ಗಾಳ
*  ಸರ್ಕಾರಿ ಗೂಟದ ಕಾರು, ನಕಲಿ ಐಡಿ ತೋರಿಸಿ ಖೆಡ್ಡಾ
*  15ಕ್ಕೂ ಹೆಚ್ಚು ಜನರಿಗೆ ಕೆಲಸ ಕೊಡಿಸುವುದಾಗಿ ನಂಬಿಸಿ, ಒಬ್ಬೊಬ್ಬರಿಂದಲೂ ಲಕ್ಷಾಂತರ ರು. ಸುಲಿಗೆ 
 


ಬೆಂಗಳೂರು(ನ.28):  ಕೇಂದ್ರ ಸರ್ಕಾರದ ಸರ್ವೆ ಇಲಾಖೆಯಲ್ಲಿ ಉನ್ನತಾಧಿಕಾರಿ ಎಂದು ಉದ್ಯೋಗಾಕಾಂಕ್ಷಿಗಳಿಗೆ ಪರಿಚಯಿಸಿಕೊಂಡು, ಸರ್ಕಾರಿ ಉದ್ಯೋಗ(Government Job) ಕೊಡಿಸುವುದಾಗಿ 15ಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರು. ಪಡೆದು ವಂಚಿಸಿರುವ(Fraud) ಆರೋಪಿಯನ್ನು ಕೇಂದ್ರ ಅಪರಾಧ ವಿಭಾಗ(CCB) ಪೊಲೀಸರು ಬಂಧಿಸಿದ್ದಾರೆ.

ಉಡುಪಿ(Udurpi) ಜಿಲ್ಲೆಯ ಬಸ್ರೂರು ಮೂಲದ ರಾಘವೇಂದ್ರ(39) ಬಂಧಿತ. ಆರೋಪಿಯಿಂದ(Accused) ಕೇಂದ್ರ ಸರ್ಕಾರದ(Central Government) ನಾಮಫಲಕ ಅಳವಡಿಸಿದ್ದ ಕಾರು, ಸರ್ವೆ ಇಲಾಖೆ ಡೆಪ್ಯೂಟಿ ಕಮಿಷನರ್‌ ಹೆಸರಿನ ನಕಲಿ ಗುರುತಿನ ಚೀಟಿ, ಒಂದು ದ್ವಿಚಕ್ರ ವಾಹನ, ಮೊಬೈಲ್‌ ಫೋನ್‌, ಟ್ಯಾಬ್‌, ಲ್ಯಾಪ್‌ಟಾಪ್‌, ಚೆಕ್‌ಗಳು, ಬಾಂಡ್‌ ಪೇಪರ್‌ಗಳು ಹಾಗೂ ಆಸ್ತಿ ಖರೀದಿ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಯಿಂದ ವಂಚನೆಗೆ ಒಳಗಾದ ವ್ಯಕ್ತಿಯೊಬ್ಬರು ಬನಶಂಕರಿ ಠಾಣೆಗೆ ದೂರು(Complaint) ನೀಡಿದ್ದರು. ಹೆಚ್ಚಿನ ವಿಚಾರಣೆಗಾಗಿ ಪ್ರಕರಣವನ್ನು ಸಿಸಿಬಿ ವರ್ಗಾವಣೆ ಮಾಡಲಾಗಿತ್ತು. ಹೀಗಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Tap to resize

Latest Videos

undefined

Suvarna FIR; ತೆಲಗಿ ತೊಲಗಿದ್ದರೂ ನಿಂತಿಲ್ಲ ನಕಲಿ, ಸಾಮ್ರಾಜ್ಯ ಕಂಡು ಬೆಚ್ಚಿಬಿದ್ದ ಪೊಲೀಸರು!

ಕಳೆದ ಐದಾರು ವರ್ಷಗಳಿಂದ ನಗರದ ಜೆ.ಪಿ.ನಗರದಲ್ಲಿ ನೆಲೆಸಿದ್ದ ಆರೋಪಿ, ಕೇಂದ್ರ ಸರ್ಕಾರದ ಸರ್ವೆ ಇಲಾಖೆ(Department of Survey) ಡೆಪ್ಯೂಟಿ ಕಮಿಷನ್‌ ಹೆಸರಿನ ನಕಲಿ ಗುರುತಿನ ಚೀಟಿ ಮಾಡಿಸಿದ್ದ. ಕಾರಿಗೆ ಕೇಂದ್ರ ಸರ್ಕಾರದ ನಾಮಫಲಕ ಅಳವಡಿಸಿಕೊಂಡಿದ್ದ. ನಿರುದ್ಯೋಗಿಗಳಿಗೆ ತಾನು ಸರ್ವೆ ಇಲಾಖೆ ಉನ್ನತಾಧಿಕಾರಿ ಎಂದು ಪರಿಚಯಿಸಿಕೊಂಡು ಸರ್ವೆ ಇಲಾಖೆ ಹಾಗೂ ಇತರೆ ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಕೊಡಿಸುವುದಾಗಿ ತಲಾ 8 ಲಕ್ಷ ರು.ನಿಂದ 10 ಲಕ್ಷ ರು. ಪಡೆದು ವಂಚಿಸಿದ್ದ. ಆರೋಪಿಯ ವಿರುದ್ಧ ಈ ಹಿಂದೆ ಜೆ.ಪಿ.ನಗರ, ಯಶವಂತಪುರ, ಬನವಾಸಿ ಸೇರಿದಂತೆ ರಾಜ್ಯದ ಹಲವು ಪೊಲೀಸ್‌(Police) ಠಾಣೆಗಳಲ್ಲಿ ವಂಚನೆ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಊರಲ್ಲಿ ಖಾಸಗಿ ಸರ್ವೆಯರ್‌

ದಶಕದ ಹಿಂದೆ ಆರೋಪಿ ರಾಘವೇಂದ್ರ ಕುಂದಾಪುರದಲ್ಲಿ ಖಾಸಗಿ ಸರ್ವೆಯರ್‌ ಆಗಿ ಕೆಲಸ ಮಾಡುತ್ತಿದ್ದ. ಬಳಿಕ ಭಾರೀ ಹಣ(Money) ಗಳಿಸುವ ದುರಾಸೆಯಿಂದ ನಕಲಿ ಸರ್ವೆ ಅಧಿಕಾರಿ ಸೋಗಿನಲ್ಲಿ ವಂಚನೆಗೆ ಇಳಿದಿದ್ದ. ಜೆ.ಪಿ.ನಗರದಲ್ಲಿ ರಾಘವೇಂದ್ರ ಎಂಟರ್‌ ಪ್ರೈಸಸ್‌ ಎಂಬ ಕಚೇರಿ ತೆರೆದಿದ್ದ ಆರೋಪಿ ಖಾಸಗಿ ಸರ್ವೆ ಸಹ ಮಾಡುತ್ತಿದ್ದ. ನಿರುದ್ಯೋಗಿಗಳಿಗೆ ಸರ್ವೆ ಇಲಾಖೆ ಅಥವಾ ಇತರೆ ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷ ಲಕ್ಷ ಹಣ ಪಡೆಯುತ್ತಿದ್ದ. ಈ ವೇಳೆ ಬಾಂಡ್‌ ಪೇಪರ್‌ ಹಾಗೂ ಸಹಿ ಮಾಡಿದ್ದ ಖಾಲಿ ಚೆಕ್‌ಗಳನ್ನು ಪಡೆದುಕೊಳ್ಳುತ್ತಿದ್ದ. ಎಷ್ಟುದಿನವಾದರೂ ಕೆಲಸದ ಬಗ್ಗೆ ಮಾತನಾಡುತ್ತಿರಲಿಲ್ಲ. ಹಣ ಕೊಟ್ಟವರು ವಾಪಾಸ್‌ ಕೇಳಿದರೆ, ಅವರೇ ನೀಡಿದ್ದ ಖಾಲಿ ಚೆಕ್‌ಗಳನ್ನು ಬೌನ್ಸ್‌(Check Bounce) ಮಾಡಿ ಕೇಸ್‌ ಹಾಕಿ ಬೆದರಿಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ.

ರಾಜ್ಯದ ಹಲವೆಡೆ ಆಸ್ತಿ

ಆರೋಪಿ ನಿರುದ್ಯೋಗಿಗಳಿಗೆ ವಂಚಿಸಿ ಪಡೆದಿದ್ದ ಕೋಟ್ಯಂತರ ರು. ಹಣದಿಂದ ಸ್ವಂತ ಊರು ಬಸ್ರೂರಿನಲ್ಲಿ ಮನೆ, ತುಮಕೂರಿನಲ್ಲಿ ಹೋಟೆಲ್‌, ಕೆಂಗೇರಿಯಲ್ಲಿ ಫ್ಲ್ಯಾಟ್‌, ಲಕ್ಷಾಂತ ರು. ಮೌಲ್ಯದ ಚಿನ್ನಾಭರಣ, ಎರಡು ಕಾರುಗಳನ್ನು ಖರೀದಿಸಿರುವುದಾಗಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಇತ್ತೀಚೆಗೆ ಬಾಗಲಕೋಟೆ, ಬೆಳಗಾವಿ ಹಾವೇರಿ, ಶಿವಮೊಗ್ಗ ಮೂಲದ 15ಕ್ಕೂ ಹೆಚ್ಚು ಜನರಿಂದ ಕೋಟ್ಯಂತರ ರು. ಪಡೆದು ವಂಚಿಸಿರುವುದು ತನಿಖೆಯಲ್ಲಿ(Investigation)s ಕಂಡು ಬಂದಿದೆ.

Fraud: ಕಡಿಮೆ ಬಡ್ಡಿ ಸಾಲದ ಆಮಿಷ 2 ಕೋಟಿ ರೂ. ವಂಚನೆ

ಮೂರು ವಿವಾಹ!

ಆರೋಪಿ ರಾಘವೇಂದ್ರ ಮೂರು ವಿವಾಹವಾಗಿದ್ದಾನೆ. ದಾವಣಗೆರೆ, ಬಾಗಲಕೋಟೆ ಹಾಗೂ ಬೆಂಗಳೂರು ಮೂಲದ ಮೂವರನ್ನು ವಿವಾಹವಾಗಿ ಸಂಸಾರ ಮಾಡುತ್ತಿದ್ದ. ಆದರೆ, ಮೂವರು ಪತ್ನಿಯರ ಪೈಕಿ ಒಬ್ಬರಿಗೂ ಈತ ಮೂರು ಮದುವೆಯಾಗಿರುವ ವಿಚಾರ ಗೊತ್ತಿರಲಿಲ್ಲ. ಆರೋಪಿಯ ಬಂಧನದ ಬಳಿಕವೇ ಈ ವಿಚಾರ ಪತ್ನಿಯರಿಗೆ ತಿಳಿದಿದೆ ಎನ್ನಲಾಗಿದೆ.

ಟ್ರೂ ಕಾಲರ್‌ನಲ್ಲಿ ಡೆಪ್ಯೂಟಿ ಕಮಿಷನ್‌ !

ಆರೋಪಿಯು ಉದ್ಯೋಗಾಕಾಂಕ್ಷಿಗಳಿಗೆ ತಾನು ಸರ್ವೆ ಇಲಾಖೆ ಡೆಪ್ಯೂಟಿ ಕಮಿಷನರ್‌ ಎಂದು ಬಲವಾಗಿ ನಂಬಿಸುತ್ತಿದ್ದ. ಟ್ರೂಕಾಲರ್‌ನಲ್ಲಿ(Truecaller) ಈತನ ಮೊಬೈಲ್‌ ನಂಬರ್‌ ಪರಿಶೀಲಿಸಿದರೆ, ರೆವೆನ್ಯೂ ಕಮಿಷನರ್‌, ಡೆಪ್ಯೂಟಿ ಕಮಿಷನರ್‌ ಎಂದು ಬರುವಂತೆ ಮಾಡಿಸಿಕೊಂಡಿದ್ದ ಎಂಬ ವಿಚಾರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
 

click me!