
ಪೇಶಾವರ (ಫೆ.10): ತಲೆಗೆ ಮೊಳೆ ಹೊಡೆದರೆ ಗಂಡು ಮಗು ಹುಟ್ಟುತ್ತದೆ ಎಂದು ಬೊಗಳೆ ಮಾಂತ್ರಿಕನೊಬ್ಬ (Fake Peer) ಗರ್ಭಿಣಿಯ (Pregnant) ತಲೆಗೆ ಮೊಳೆ ಹೊಡೆದ ಭೀಕರ ಘಟನೆಯೊಂದು ಪಾಕಿಸ್ತಾನದಲ್ಲಿ (Pakistan) ನಡೆದಿದೆ.
ಪೇಶಾವರದ ಮಹಿಳೆಯೊಬ್ಬರು ಈಗಾಗಲೇ 3 ಹೆಣ್ಣುಮಕ್ಕಳನ್ನು ಹೆತ್ತಿದ್ದರು. 4 ಬಾರಿ ಗರ್ಭಿಣಿಯಾದಾಗ ಗಂಡುಮಗುವನ್ನು ಪಡೆಯಲು ಸ್ಥಳೀಯ ಮಾಂತ್ರಿಕನೊಬ್ಬನನ್ನು ಸಂಪರ್ಕಿಸಿದ್ದರು. ಆತ ಮಹಿಳೆಯ ಹಣೆಯ ಮೇಲೆ ಮೊಳೆಯನ್ನು ಸುತ್ತಿಗೆಯಿಂದ ಹೊಡೆದಿದ್ದಾರೆ. ಅಪಾರವಾದ ನೋವನ್ನು ಸಹಿಸಲಾರದೇ ಆಕೆ ಇಕ್ಕಳದಿಂದ ಅದನ್ನು ಹೊರತೆಗೆಯಲು ಪ್ರಯತ್ನಿಸಿ ವಿಫಲಳಾಗಿ ಆಸ್ಪತ್ರೆಗೆ ಧಾವಿಸಿದ್ದಾಳೆ.
ಅವಳಿಗೆ ಚಿಕಿತ್ಸೆ ನೀಡಿದ ವೈದ್ಯ ಹೈದರ್ ಖಾನ್ (Hyder Khan) ಮೊಳೆಯನ್ನು ಹೊರತೆಗೆದಿದ್ದು, ಅದೃಷ್ಟವಶಾತ್ ಆಕೆಯ ಮೆದುಳಿಗೆ ಮೊಳೆ ತಗುಲದೇ ಇರುವ ಕಾರಣ ಬದುಕುಳಿದಿದ್ದಾಳೆ ಎಂದಿದ್ದಾರೆ. ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ (CCTV Camera) ಮೂಲಕ ಪೀಡಿತ ಮಹಿಳೆಯನ್ನು ಹುಡುಕಿ ಇಂತಹ ಕ್ರೂರ ಕೃತ್ಯ ನಡೆಸಿದ ಶೃದ್ಧಾಚಿಕಿತ್ಸಕನ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಯಿ, ತಂಗಿ ಸೇರಿ ಕುಟುಂಬವನ್ನೇ ಹತ್ಯೆಗೈದ 14ರ ಬಾಲಕ: ಪಬ್‌ಜಿ ಗೇಮ್(PUBG Game) ವಿಶ್ವದಲ್ಲಿ ಮಾಡಿದ ಅವಾಂತರ ಒಂದೆರಡಲ್ಲ. ಹಲವು ಮಕ್ಕಳು, ಕುಟುಂಬದ ಬದುಕು ಅನಾಥವಾಗಿದೆ. ಮಕ್ಕಳನ್ನು(Childrens0 ಕಳೆದುಕೊಂಡು ಪೋಷರ ಬದುಕು ದುಸ್ತರವಾದ ಹಲವು ಊದಾಹರಣೆಗಳು ಕಣ್ಣಮುಂದಿದೆ. ಇದೀಗ ಈ ಸಾಲಿಗೆ ಮತ್ತೊಂದು ಘಟನೆ ಸೇರಿಕೊಂಡಿದೆ. ಪಾಕಿಸ್ತಾನದ(Pakistan) ಪಂಜಾಬ್ ಪ್ರಾವಿನ್ಸ್‌ನಲ್ಲಿ 14ರ ಬಾಲಕ ಪಬ್‌ಜಿ ಪ್ರಭಾವದಿಂದ ಇಡೀ ಕುಟುಂಬವನ್ನೇ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
Weapons Home Delivery: ಪಾಕಿಸ್ತಾನದಲ್ಲಿ ಪಿಝ್ಝಾ ರೀತಿ ಎಕೆ 47 ಬಂದೂಕು ಹೋಂ ಡೆಲಿವರಿ!
ಈ ಘನಘೋರ ಘಟನೆ ಅತ್ಯಂತ ದುಃಖಕರವಾಗಿದೆ. 45 ವರ್ಷದ ನಾಹಿದ್ ಮುಬಾರಕ್ ಆರೋಗ್ಯ ಕಾರ್ಯಕರ್ತೆ. ನಾಹಿದ್‌ಗೆ ನಾಲ್ವರು ಮಕ್ಕಳು. ಇದರಲ್ಲಿ 14 ವಯಸ್ಸಿನ ಬಾಲಕ ಕಳೆದ 6 ತಿಂಗಳಿನಿಂದ ಪಬ್‌ಜಿ ಗೇಮ್‌ನಲ್ಲಿ ಮುಳುಗಿದ್ದ. ಈ ಕುರಿತು ತಾಯಿ ನಾಹಿದ್ ಕೆಲ ಬಾರಿ ವಾರ್ನಿಂಗ್ ಮಾಡಿದ್ದರೂ ಬಾಲಕ ಮಾತ್ರ ಪಬ್‌ಜಿ ಗೇಮ್‌ನಿಂದ ಹಿಂದೆ ಸರಿದಿರಲಿಲ್ಲ. ಇಷ್ಟೇ ಆಗಿದ್ದರೆ ಸಮಸ್ಯೆ ಇರಲಿಲ್ಲ.
ಪಬ್‌ಜಿಯಲ್ಲಿ ಮುಳುಗಿದ್ದ ಬಾಲಕ ಮಾನಸಿಕವಾಗಿ ಜರ್ಝರಿತನಾಗಿದ್ದ. ನಾಹಿದ್ ಕೆಲಸ ಮುಗಿಸಿ ಮನೆಗೆ ಬಂದ ವೇಳೆ ಬಾಲಕ ಪಬ್‌ಜಿ ಆಟ ಗಮನಿಸಿದ ತಾಯಿ ಸರಿಯಾಗಿ ಬುದ್ದಿವಾದ ಹೇಳಿದ್ದಾರೆ. ಮೊದಲೆ ಮಾನಸಿಕವಾಗಿ ಕುಗ್ಗಿಹೋಗಿದ್ದ ಬಾಲಕ, ತಾಯಿ ಡ್ರವರ್‌ನಲ್ಲಿಟ್ಟಿದ್ದ ಪಿಸ್ತೂಲ್ ತೆಗೆದು ಪಬ್‌ಜಿಯಲ್ಲಿ ಶೂಟ್ ಮಾಡುವಂತೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾನೆ(Shot Dead). ತಾಹಿ ನಾಹಿದ್ ಮುಬಾರಕ್, 22 ವಯಸ್ಸಿನ ಹಿರಿಯ ಪುತ್ರ, 17 ಹಾಗೂ 11 ವಯಸ್ಸಿನ ಇಬ್ಬರು ಪುತ್ರಿಯರ ಮೇಲೆ ಗಂಡು ಹಾರಿಸಿದ್ದಾನೆ. 3 ನಿಮಿಷದಲ್ಲಿ ಮನೆ ಸ್ಮಶಾನವಾಗಿದೆ. ಗುಂಡು ಹಾರಿಸಿದ ಬಳಿಕ ನೇರವಾಗಿ ಪಬ್‌ಜಿ ಆಟದಲ್ಲಿ ತಲ್ಲೀನನಾಗಿದ್ದಾನೆ.
ಕೆಲ ಹೊತ್ತು ಪಬ್‌ಡಿ ಆಡಿದ ಬಾಲಕ ಮರಳಿ ಬಂದು ನೋಡಿದ್ದಾನೆ. ಇಡೀ ಕುಟುಂಬವೇ ಸತ್ತು ಬಿದ್ದಿದೆ. ಪಬ್‌ಜಿಯಲ್ಲಿರುವಂತೆ ಹೊಸ ಗೇಮ್ ಶುರುವಾದಾಗ ಇವರೆಲ್ಲಾ ಮತ್ತೆ ಬದುಕಿ ಬರುತ್ತಾರೆ ಎಂದು ರಾತ್ರೀಯಿಡಿ ಪಬ್‌ಜಿ ಆಡಿ ಮಲಗಿದ್ದಾನೆ. ಮರುದಿನ ಬೆಳಗ್ಗೆ ಸನಿಹದಲ್ಲಿರುವ ಮನೆಯರ ಬಳಿ ಹೋಗಿ ಅಳಲು ಆರಂಭಿಸಿದ್ದಾನೆ. ಈ ವೇಳೆ ರಕ್ತದ ಕಲೆಗಳನ್ನು ಗಮನಿಸಿದ ನೆರ ಮನೆಯವರು ಬಂದು ನೋಡಿದಾ ಅತೀ ದೊಡ್ಡ ದುರಂತವೇ ನಡೆದು ಹೋಗಿದೆ. ಪೊಲೀಸರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
Corruption Perception Index : ಭ್ರಷ್ಟಾಚಾರ ಸೂಚ್ಯಂಕದಲ್ಲಿ 85ರಲ್ಲೇ ಉಳಿದ ಭಾರತ
ನಾಹೀದ್ ಮುಬಾರಕ್ ಪತಿ ದೂರವಾಗಿ ವರ್ಷಗಳೇ ಉರುಳಿದೆ. ನಾಹಿದ್ ಕುಟುಂಬದಲ್ಲಿದ್ದ ಐವರ ಬೈಕಿ ಬದುಕುಳಿದಿದ್ದು ಕೊಲೆ ಆರೋಪಿ 14 ವರ್ಷದ ಬಾಲಕ ಮಾತ್ರ. ಬಾಲಕನ ವಶಕ್ಕೆ ಪಡೆದ ಪೊಲೀಸರು ಬಾಲಕನನ್ನು ಆಸ್ಪತ್ರೆ ದಾಖಲಿಸಿ ಮಾನಸಿಕಿ ಚಿಕಿತ್ಸೆ ನೀಡುತ್ತಿದ್ದಾರೆ. ಇತ್ತ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ. ಆದರೆ ಪಬ್‌ಜಿಯಿಂದ ಒಂದು ಕುಟುಂಬವೇ ಕೊಲೆಯಲ್ಲಿ ಅಂತ್ಯವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ