* ಯೋಗ ಕಲಿಯಲು ಹೋದಾಗ ಪರ ಪುರುಷನೊಂದಿಗೆ ಲವ್ವಿ ಡವ್ವಿ
* ಗಂಡನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿದಳು
* ಶಾಲೆಯಿಂದ ಮಕ್ಕಳನ್ನು ಕರೆತರಲು ಹೋದವ ಹೆಣವಾದ
* ಮಹಿಳೆ ಮತ್ತು ಆಕೆಯ ಪ್ರಿಯಕರನ ಬಂಧನ
ಹಾಸನ ( ಫೆ. 09) ಹಾಸನ (Hassan) ಜಿಲ್ಲೆ ಚನ್ನರಾಯಪಟ್ಟಣದ ಕಾವಲು ಹೊಸೂರಿನಲ್ಲಿ ವ್ಯಕ್ತಿಯ ಕೊಲೆ (Murder) ಪ್ರಕರಣವನ್ನು ಪೊಲೀಸರು (Karnataka Police) ಪತ್ತೆ ಮಾಡಿದ್ದು ಪ್ರೇಮಿ ಜೊತೆ ಸೇರಿ ಗಂಡನನ್ನೇ ಕೊಲ್ಲಿಸಿದ್ದ ಖತರ್ನಾಕ್ ಪತ್ನಿಯನ್ನು (Wife) ಬಂಧಿಸಲಾಗಿದೆ.
ಜನವರಿ 31 ರಂದು ಮಕ್ಕಳನ್ನು ಶಾಲೆಯಿಂದ ಕರೆತರಲು ತೆರಳೊ ವೇಳೆ ಬೈಕ್ ಅಡ್ಡಗಟ್ಟಿ ಆನಂದ್ ಎಂಬುವರ ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿ ನನಗೇನು ಗೊತ್ತಿಲ್ಲ ಎನ್ನುತ್ತಿದ್ದವಳಿಂದ ಇದೀಗ ಪೊಲೀಸರು ಸತ್ಯ ಬಾಯಿ ಬಿಡಿಸಿದ್ದಾರೆ.
Kidnap Case: ಮುನಿಸಿಕೊಂಡ ಪ್ರಿಯತಮೆ ಓಲೈಕೆಗೆ ಅಣ್ಣನ ಕಿಡ್ನಾಪ್: ಪಾಗಲ್ ಪ್ರೇಮಿ ಅಂದರ್
ಚನ್ನರಾಯಪಟ್ಟಣ ತಾಲ್ಲೂಕಿನ ಕಾವಲು ಹೊಸೂರು ಗ್ರಾಮದ ಆನಂದ್ (42) ಹತ್ಯೆಯಾಗಿತ್ತು. ಕೊಲೆ ಆರೋಪದಲ್ಲಿ ಪತ್ನಿ ಸುನಿತಾ ಹಾಗೂ ಆಕೆಯ ಪ್ರಿಯಕರನ ಬಂಧನವಾಗಿದೆ.
ಯೋಗ ಕ್ಲಾಸ್ ನಲ್ಲಿ ಪರಿಚಯವಾಗಿದ್ದ ನವೀನ ಜೊತೆ ಸುನಿತಾ ಲವ್ವಿ ಡವ್ವಿ (Illicit Relationship) ಶುರುಹಚ್ಚಿಕೊಂಡಿದ್ದಳು. ಗಂಡನಿಗೆ ವಿಚಾರ ಗೊತ್ತಾಗಿ ಆಡ್ಡಿಯಾಗುತ್ತಾನೆ ಎಂದು ಭಾವಿಸಿ ಗಂಡನನ್ನೇ ಹತ್ಯೆ ಮಾಡಿಸಿದ್ದಾಳೆ. ಬೆಂಗಳೂರಿನ ಇಬ್ಬರಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ.
ನುಗ್ಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. 2014 ರಲ್ಲಿ ಡ್ರೈವಿಂಗ್ ಕಲಿಯಲು ಹೋಗಿ ಮಹಿಳೆ ಕೊಲೆ ಕೇಸ್ ನಲ್ಲಿ ಆರೋಪಿಯಾಗಿದ್ದ ಸುನಿತಾ ಈಗ ಗಂಡನ ಕೊಲೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾಳೆ. ಕೊಲೆ ಕೇಸ್ ನಲ್ಲಿ ಬಿಡುಗಡೆಯಾಗಿ ಮನೆಯಲ್ಲಿದ್ದ ವೇಳೆ ಇನ್ನೊಬ್ಬನ ಜೊತೆ ಸ್ನೇಹ ಬೆಳೆಸಿದ್ದಳು.
ಆನೇಕಲ್ ಪ್ರಕರಣ: ಬನ್ನೇರುಘಟ್ಟ ಸಮೀಪದ ಕರಿಯಪನಹಳ್ಳಿ ನಿವಾಸಿ ಭಾರತಿ(32) ಕೊಲೆಯಾದ ಮಹಿಳೆ. ಪತಿ ರಘು(38) ಬಂಧಿತ. ರಘು ಬನ್ನೇರುಘಟ್ಟದಲ್ಲಿ ಆಟೋ ಚಾಲಕನಾಗಿದ್ದ. ಪತ್ನಿ ಮೇಸ್ತ್ರಿಯೊಬ್ಬನ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು. ಈ ವಿಚಾರಕ್ಕೆ ಸಂಬಂಧಿಸಿ ದಂಪತಿ ನಡುವೆ ಜಗಳ ನಡೆದಿತ್ತು.
ಜಗಳ ತಾರಕಕ್ಕೇರಿದಾಗ ರಘು, ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದ. ಕೊಲೆ ಮಾಡಿದ ಬಳಿಕ ಬನ್ನೇರುಘಟ್ಟ ಠಾಣೆಗೆ ಆಗಮಿಸಿದ ಆರೋಪಿ ನಡೆದ ಎಲ್ಲ ಘಟನೆಯನ್ನು ಪೊಲೀಸರ ಮುಂದೆ ಹೇಳಿ ಶರಣಾಗಿದ್ದಾನೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದಲ್ಲಿ 6 ವರ್ಷದ ಮಗುವನ್ನು ಕೊಂದು ವ್ಯಕ್ತಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ತಿರುವು ಸಿಕ್ಕಿದ್ದು, ಪತ್ನಿಯ ಅಕ್ರಮ ಸಂಬಂಧವೇ ಇದಕ್ಕೆ ಪ್ರಮುಖ ಕಾರಣ ಎನ್ನುವುದು ಬಹಿರಂಗವಾಗಿತ್ತು.
ಜ.13 ರಂದು ಪಿಟ್ಟೆಕೊಪ್ಪಲು ಗ್ರಾಮದ ಗಂಗಾಧರ್ ತನ್ನ ಮಗ ಜಶ್ವಿತ್ (6) ಜೊತೆಗೆ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈತನ ಪತ್ನಿ ಸಿಂಧು, ನಂಜುಂಡೇಗೌಡ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು. ವಿಡಿಯೋ ಮಾಡಿ ಆತ್ಮಹತ್ಯೆಗೆ ಶರರಣಾಗಿದ್ದ ಗಂಗಾಧರ್ ತನ್ನ ಸ್ಥಿತಿ ಯಾರಿಗೂ ಬರಬಾರದು ಎಂದಿದ್ದರು.
ಪತ್ನಿಯ ತಂಗಿ ಮೇಲೆ ಕಣ್ಣು: ಪತ್ನಿಯ ತಂಗಿ ಜೊತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯನ್ನು ಗರ್ಭಿಣಿಯನ್ನಾಗಿಸಿದ ಆರೋಪಿ ಸದ್ಯ ಪೊಲೀಸರ ಅತಿಥಿಯಾಗಿದ್ದ. ಶಿವಮೊಗ್ಗ ತಾಲೂಕು ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ಪ್ರವೀಣ ಎಂಬಾತನ್ನು ಪೊಲೀಸರು ಬಂಧಿಸಿದ್ದರು.
ಪ್ರವೀಣ ಹೋಟೆಲ್ ನಡೆಸುತ್ತಿದ್ದನು. ಮದುವೆಯಾದ ಬಳಿಕ ತನ್ನ ಹೆಂಡತಿಯ ತಂಗಿಯನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು ಓದಿಸುತ್ತಿದ್ದನು. ಕಳೆದ ಐದಾರು ವರ್ಷಗಳಿಂದ ಮನೆಯಲ್ಲೇ ಇದ್ದ ತನ್ನ ಪತ್ನಿ ತಂಗಿಯ ಮೇಲೆ ಕಣ್ಣಿಟ್ಟಿದ್ದ ಪ್ರವೀಣ ಬಲವಂತದಿಂದ ಕಳೆದ ಒಂದು ವರ್ಷದಿಂದ ನಿರಂತರವಾಗಿ ದೈಹಿಕ ಸಂಪರ್ಕ ಬೆಳೆಸಿಕೊಂಡು ಬಂದಿದ್ದ.