Sexual Harassment Case: ನಾನು ಶಾಸಕ ತೇಲ್ಕೂರ್‌ ಬ್ಲಾಕ್‌ಮೇಲ್‌ ಮಾಡಿಲ್ಲ: ಮಹಿಳೆ

Kannadaprabha News   | Asianet News
Published : Feb 09, 2022, 12:00 PM IST
Sexual Harassment Case: ನಾನು ಶಾಸಕ ತೇಲ್ಕೂರ್‌ ಬ್ಲಾಕ್‌ಮೇಲ್‌ ಮಾಡಿಲ್ಲ: ಮಹಿಳೆ

ಸಾರಾಂಶ

* ಅವರಿಂದ ನನಗೆ ಅನ್ಯಾಯ ಆಗಿದೆ, ಹಣ ಪಡೆದಿಲ್ಲ * ಸುಲಿಗೆ ಪ್ರಕರಣದಲ್ಲಿ 3 ತಾಸು ಮಹಿಳೆ ವಿಚಾರಣೆ * ಯಲಹಂಕ ಎಸಿಪಿಗೆ ಮಹಿಳೆ ದೂರು ವರ್ಗಾವಣೆ  

ಬೆಂಗಳೂರು(ಫೆ.09): ಕಲಬುರಗಿ(Kalaburagi) ಜಿಲ್ಲೆ ಸೇಡಂ ಕ್ಷೇತ್ರದ ಬಿಜೆಪಿ ಶಾಸಕ ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌(Rajkumar Patil Telkur) ಅವರಿಗೆ ಬ್ಲ್ಯಾಕ್‌ಮೇಲ್‌ ಪ್ರಕರಣ ಸಂಬಂಧ ಶಾಸಕರ ಪರಿಚಿತ ಮಹಿಳೆಯನ್ನು ವಿಧಾನಸೌಧ ಠಾಣೆ ಪೊಲೀಸರು ಮಂಗಳವಾರ ಮೂರು ತಾಸಿಗೂ ಅಧಿಕ ಹೊತ್ತು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ನೋಟಿಸ್‌ ಹಿನ್ನೆಲೆಯಲ್ಲಿ ಮಧ್ಯಾಹ್ನ ಠಾಣೆಗೆ ವಿಚಾರಣೆಗೆ ಹಾಜರಾದ ಆಕೆಯನ್ನು ಸುದೀರ್ಘವಾಗಿ ಪ್ರಶ್ನಿಸಿ ಪೊಲೀಸರು(Police) ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ತನಗೆ ಶಾಸಕರ ಬಾಲ್ಯದಿಂದಲೂ ಪರಿಚಯವಿದ್ದಾರೆ. ನಾನು ಹಣಕ್ಕಾಗಿ ಅವರಿಗೆ ಬ್ಲ್ಯಾಕ್‌ಮೇಲ್‌(Blackmail) ಮಾಡಿಲ್ಲ. ನನಗೆ ಅವರಿಂದ ಮೋಸವಾಗಿದೆ ಎಂದು ಆಕೆ ಪುನರುಚ್ಚರಿಸಿದ್ದಾಳೆ ಎನ್ನಲಾಗಿದೆ.

Sexual Harassment : 'ನ್ಯಾಯ ಕೇಳಿದ್ದಕ್ಕೆ ಠಾಣೆಗೆ ಕರೆಸಿ ಕೂರಿಸಿಕೊಂಡರು

‘ನಾನು ಶಾಸಕರಿಂದ ಹಣ ಪಡೆದಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ’ ಎಂದು ಮಹಿಳೆ(Woman) ಅಲವತ್ತುಕೊಂಡಿದ್ದಾಳೆ. ಮತ್ತೆ ವಿಚಾರಣೆಗೆ ಅಗತ್ಯವಾದರೆ ಬರಬೇಕು ಎಂದು ಹೇಳಿ ಆಕೆಯನ್ನು ಪೊಲೀಸರು ಕಳುಹಿಸಿರುವುದಾಗಿ ಮೂಲಗಳು ಹೇಳಿವೆ.

ಶಾಸಕರ ಭೇಟಿಗೆ ನಿರಾಕರಿಸಿದ ಆಯುಕ್ತ:

ವಿವಾದಿತ ಸೇಡಂ ಶಾಸಕ ರಾಜ್‌ ಕುಮಾರ್‌ ಪಾಟೀಲ್‌ ತೇಲ್ಕೂರ್‌ ಅವರನ್ನು ಭೇಟಿಯಾಗಲು ನಗರ ಪೊಲೀಸ್‌ ಆಯುಕ್ತ ಕಮಲ್‌ ಪಂತ್‌(Kamal Pant) ನಿರಾಕರಿಸಿದ್ದಾರೆ.

ತಮ್ಮ ಮೇಲಿನ ವಂಚನೆ ಆರೋಪ ಸಂಬಂಧ ಆಯುಕ್ತರನ್ನು ಭೇಟಿಯಾಗಲು ಶಾಸಕ ತೇಲ್ಕೂರ್‌ ಅವರು, ನಗರ ಪೊಲೀಸ್‌ ಆಯುಕ್ತರ ಕಚೇರಿಗೆ ಸಂಜೆ ತೆರಳಿದ್ದರು. ಆದರೆ ಕೆಲಸದೊತ್ತಡ ಕಾರಣ ನೀಡಿ ಶಾಸಕರನ್ನು ಭೇಟಿ ಮಾಡಲು ಪಂತ್‌ ನಿರಾಕರಿಸಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೊಳಗಾಗಿ ಶಾಸಕರು ಪೆಚ್ಚು ಮೊರೆ ಹಾಕಿಕೊಂಡು ಆಯುಕ್ತರ ಕಚೇರಿಯಿಂದ ಹೊರ ನಡೆದರು.

ಯಲಹಂಕ ಎಸಿಪಿಗೆ ಮಹಿಳೆ ದೂರು ವರ್ಗಾವಣೆ:

ಶಾಸಕ ತೇಲ್ಕೂರ್‌ ವಿರುದ್ಧ ಮಹಿಳೆ ನೀಡಿರುವ ವಂಚನೆ ದೂರನ್ನು ಮುಂದಿನ ಕಾನೂನು ಕ್ರಮಕ್ಕೆ ಯಲಹಂಕ ಉಪ ವಿಭಾಗದ ಎಸಿಪಿ ಅವರಿಗೆ ಹೆಚ್ಚುವರಿ ಆಯುಕ್ತ (ಪೂರ್ವ) ವರ್ಗಾಯಿಸಿದ್ದಾರೆ. ಆರೋಪ ಸಂಬಂಧ ಪುರಾವೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಎಸಿಪಿ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.

ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ, ಮಹಿಳೆ ಆರೋಪಕ್ಕೆ ಗಳಗಳನೇ ಅತ್ತ ಬಿಜೆಪಿ ಶಾಸಕ

ಕಲಬುರಗಿ: ಸೇಡಂನ ಬಿಜೆಪಿ ಶಾಸಕ (BJP MLA), ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರೂ ಆಗಿರುವ ರಾಜಕುಮಾರ್ ಪಾಟೀಲ್ ತೆಲ್ಕೂರ್ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದೆ. ನನ್ನ ಮಗನಿಗೆ ಲೀಗಲ್​ ಉತ್ತರದಾಯಿತ್ವ ಕೊಡಿ, ಮದ್ವೆ ಆಗ್ತೀನಿ ಅಂತ ಮಗು ಕೊಟ್ಟು ಕೈ ಕೊಟ್ಟಿದ್ದಾರೆ. ನನ್ನ ಮಗನಿಗೆ ನ್ಯಾಯ ಬೇಕು ಅಂತ ಮಹಿಳೆ ಮನವಿ ಮಾಡಿದ್ದಾಳೆ.  

ಇದಕ್ಕೆ ಫೆ.07 ರಂದು ಕಲಬುರಗಿಯ ಏರ್‌ಪೋರ್ಟ್‌ನಲ್ಲಿ ಸುದ್ದಿಗಾರಿಗೆ ಪ್ರತಿಕ್ರಿಯಿಸಿರುವ ಶಾಸಕ ರಾಜಕುಮಾರ್, ಯಾವುದೇ ತಪ್ಪು ಮಾಡಿಲ್ಲ. ಎಂತಹ ತನಿಖೆಗೂ ಸಿದ್ಧನಿದ್ದೇನೆ. ತಾವು ಆರೋಪ ಮುಕ್ತರಾಗಿ ಹೊರಬರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಫೆ.4ರಂದು ಸಿಎಂ ಅವರ ಟ್ವಿಟರ್‌ನಲ್ಲಿ ಈ ಬಗ್ಗೆ ಟ್ವೀಟ್ ಸಂದೇಶ ಬಂದಿದೆ ಎಂದು ನನಗೆ ಮಾಹಿತಿ ಬಂತು. ಆಗ ನಾನು ಕಲಬುರಗಿಯಲ್ಲಿ ಮೇಯರ್ ಚುನಾವಣೆಯಲ್ಲಿ ಇದ್ದೆ. ತಕ್ಷಣ ಫೆ.5ರಂದು ಬೆಂಗಳೂರಿಗೆ ಹೋಗಿ ವಿಧಾನಸಭೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು

ತನಿಖೆ ಎದುರಿಸಲು ಸಿದ್ಧ

ಬಿಜೆಪಿ ರಾಜ್ಯ ವಕ್ತಾರರೂ ಆಗಿರುವ ಶಾಸಕ  ತೇಲ್ಕೂರ್ ಬೆಂಗಳೂರಿನಿಂದ ಸೋಮವಾರ ಕಲಬುರಗಿಗೆ ವಾಪಸ್ಸಾಗಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತ ಯಾವುದೇ ತಪ್ಪು ಮಾಡಿಲ್ಲ, ಸರ್ಕಾರ ಯಾವುದೇ ರೀತಿಯ ತನಿಖೆ ಬೇಕಾದರೂ ನಡೆಸಬಹುದು. ತಪ್ಪಿತಸ್ಥರು ಯಾರೇ ಇದ್ದರೂ ಕ್ರಮ ಕೈಗೊಳ್ಳಲಿ ಎಂದು ಸ್ಪಷ್ಟಪಡಿಸಿದ್ದರು. 

Sexual Harassment : 'ನನ್ನ ಮೊದಲ ಮಗು ಶಾಸಕರಿಂದಲೇ ಜನಿಸಿದ್ದು'

ನಾನು ಯಾರ ಮಾನಕ್ಕೂ ಧಕ್ಕೆ ತರುವ ಕೆಲಸ ಮಾಡಿಲ್ಲ. ಪಕ್ಷಕ್ಕೆ ಹಾಗೂ ಮತದಾರರಿಗೆ ಮುಜುಗರ ತರುವ ಕೆಲಸ ಎಂದಿಗೂ ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ನಿಷ್ಪಕ್ಷಪಾತ ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬರಲಿ ಎಂದು ಹೇಳಿ ತಮ್ಮ ವಿರುದ್ಧ ಮಹಿಳೆ ಮಾಡಿರುವ ಆರೋಪವನ್ನು ಸಾರಾ ಸಾಗಾಟಾಗಿ ತಳ್ಳಿ ಹಾಕಿದ್ದರು. 

ಮಹಿಳೆಯೊಬ್ಬರು ನನಗೆ ನಿರಂತರವಾಗಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪೊಲೀಸ್ ಕಂಪ್ಲೇಂಟ್ ನೀಡಿದ್ದೇನೆ. ಹೀಗಾಗಿ ವಿಧಾನಸೌಧ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ನಾನು ಕಾನೂನು ರೀತಿಯಲ್ಲಿ ಇದನ್ನು ಎದರಿಸಲು ಸಿದ್ಧ ಎಂದು ತೆಲ್ಕೂರ್ ಹೇಳಿದ್ದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ