ಮೊಬೈಲ್‌ನಲ್ಲಿ ಮಾತಾಡಿಕೊಂಡು ರಸ್ತೆ ದಾಟುವಾಗ ಸ್ಕೂಟರ್ ಡಿಕ್ಕಿ, ವೃದ್ಧೆ ಸಾವು

By Kannadaprabha NewsFirst Published Mar 9, 2024, 4:40 AM IST
Highlights

ಮೊಬೈಲ್‌ನಲ್ಲಿ ಮಾತನಾಡಿಕೊಂಡು ರಸ್ತೆ ದಾಟುತ್ತಿದ್ದಾಗ ಸ್ಕೂಟರ್ ಡಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಮಾ.9) : ಮೊಬೈಲ್‌ನಲ್ಲಿ ಮಾತನಾಡಿಕೊಂಡು ರಸ್ತೆ ದಾಟುತ್ತಿದ್ದಾಗ ಸ್ಕೂಟರ್ ಡಿಕ್ಕಿಯಾಗಿ ವೃದ್ಧೆಯೊಬ್ಬರು ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ತಿಗಳರಪಾಳ್ಯದ ನಿವಾಸಿ ಶಾಂತಮ್ಮ (65) ಮೃತ ದುರ್ದೈವಿ. ತಮ್ಮ ಮನೆ ಸಮೀಪ ದೇವಾಲಯ ಬಳಿ ಶಾಂತಮ್ಮ ರಸ್ತೆ ದಾಟುವಾಗ ಈ ಘಟನೆ ನಡೆದಿದೆ. ಕೂಡಲೇ ಗಾಯಾಳು ರಕ್ಷಣೆಗೆ ಸ್ಕೂಟರ್ ಸವಾರ ಅರ್ಚಕ ಧಾವಿಸಿದ್ದಾರೆ. ತಾವೇ ಆ್ಯಂಬುಲೆನ್ಸ್ ಮಾಡಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಶಾಂತಮ್ಮ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವೀರ ಸೇನಾನಿ ಜನರಲ್ ತಿಮ್ಮಯ್ಯ ಪ್ರತಿಮೆ ಪುನರ್ ಸ್ಥಾಪನೆ

ಆ್ಯಂಬುಲೆನ್ಸ್‌ನಲ್ಲೇ 8 ಗಂಟೆ ಮೃತದೇಹ:

ಅಪಘಾತದಲ್ಲಿ ಮೃತಪಟ್ಟ ಸಂಬಂಧ ಸ್ಕೂಟರ್ ಸವಾರನ ವಿರುದ್ಧ ದೂರು ನೀಡಲು ಮೃತ ಶಾಂತಮ್ಮ ಕುಟುಂಬದವರು ನಿರಾಕರಿಸಿದ್ದಾರೆ. ಅಪಘಾತದ ಬಳಿಕ ಆಸ್ಪತ್ರೆಗೆ ದಾಖಲಿಸಿದ್ದಲ್ಲದೆ ಕೊನೆವರೆಗೂ ಅರ್ಚಕರು ನೆರವು ನೀಡಿದ್ದಾರೆ. ಹೀಗಾಗಿ ನಾವು ಘಟನೆ ಬಗ್ಗೆ ದೂರು ನೀಡುವುದಿಲ್ಲ ಎಂದು ಮೃತರ ಕುಟುಂಬದವರು ಹೇಳಿದ್ದಾರೆ. ಆದರೆ ಅಪಘಾತಗಳಲ್ಲಿ ಪೊಲೀಸ್ ದೂರು ದಾಖಲಾಗದೆ ಹೋದರೆ ಮೃತ ಸಾಗಿಸಲು ಸಮಸ್ಯೆಯಾಗುತ್ತದೆ ಎಂದು ಹೇಳಿ ಮೃತದೇಹವನ್ನು ತೆಗೆದುಕೊಂಡು ಹೋಗಲು ಆ್ಯಂಬುಲೆನ್ಸ್‌ ಚಾಲಕ ಪಟ್ಟು ಹಿಡಿದಿದ್ದಾನೆ.

ಕೊನೆಗೆ ದೂರು ಕೊಡಲು ಮುಂದಾದ ಮೃತರ ಕುಟುಂಬದವರು, ಮೊದಲು ಪೀಣ್ಯ ಸಂಚಾರ ಠಾಣೆಗೆ ತೆರಳಿದ್ದಾರೆ. ಆದರೆ ತಮ್ಮ ವ್ಯಾಪ್ತಿಯಲ್ಲಿ ಘಟನೆ ನಡೆದಿಲ್ಲ. ನೀವು ಕಾಮಾಕ್ಷಿಪಾಳ್ಯ ಸಂಚಾರ ಠಾಣೆಗೆ ತೆರಳಿ ದೂರು ನೀಡುವಂತೆ ಪೀಣ್ಯ ಪೊಲೀಸರು ಸೂಚಿಸಿದ್ದಾರೆ. ಅಂತಿಮವಾಗಿ ಕಾಮಾಕ್ಷಿಪಾಳ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗುವ ಹೊತ್ತಿಗೆ ಸೂರ್ಯೋದಯವಾಗಿದೆ. ಅಲ್ಲಿವರೆಗೆ ಆ್ಯಂಬುಲೆನ್ಸ್‌ನಲ್ಲೇ ಮೃತದೇಹ ಇತ್ತು.

ಸುವರ್ಣ ನ್ಯೂಸ್ ವರದಿ ಬೆನ್ನಲ್ಲೇ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ; ರಸ್ತೆಗೆ ಅಡ್ಡಾದಿಡ್ಡಿ ನಿಂತ ವಾಹನಗಳ ತೆರವು

ಮಗಳ ಮೇಲೆ ಪತ್ನಿ, ಆಕೆಯ ಪ್ರಿಯಕರನಿಂದ ಹಲ್ಲೆ: ಪತಿಕನ್ನಡಪ್ರಭ ವಾರ್ತೆ ಬೆಂಗಳೂರುತಮ್ಮ ಹತ್ತು ವರ್ಷದ ಮಗಳ ಮೇಲೆ ಪ್ರಿಯಕರನ ಜತೆ ಸೇರಿ ದೌರ್ಜನ್ಯ ನಡೆಸಿದ್ದಾಳೆ ಎಂದು ಪತ್ನಿ ವಿರುದ್ಧ ಜೆ.ಜೆ.ನಗರ ಪೊಲೀಸ್ ಠಾಣೆಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.ಜೆ.ಜೆ.ನಗರದ ಇಮ್ರಾನ್ ಖಾನ್‌ ಪುತ್ರಿ ಮೇಲೆ ದೌರ್ಜನ್ಯ ನಡೆದಿದ್ದು, ಈ ಸಂಬಂಧ ಖಾನ್‌ ಪತ್ನಿ ಚಿಕ್ಕಬಸ್ತಿ ನಿವಾಸಿ ಆಯಿಷಾ ಬೇಬಿ, ಆಕೆಯ ಸ್ನೇಹಿತರಾದ ಸಲೀಂ ಹಾಗೂ ಜಬೀರ್ ಖಾನ್‌ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

 

ಮಗುವಿನ ಮೇಲೆ ಕಾರು ಹತ್ತಿಸಿದ, ಕೈ ಮುಗಿದು ಬೇಡಿಕೊಂಡರು ಆಸ್ಪತ್ರೆ ಸೇರಿಸಲು ನಿರಾಕರಿಸಿದ : ಮಗು ಸಾವು

ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ವಿರುದ್ಧ ಪತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಯಿಷಾ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.ಹತ್ತು ವರ್ಷಗಳ ಹಿಂದೆ ಇಮ್ರಾನ್ ಖಾನ್ ಹಾಗೂ ಆಯಿಷಾ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಳಿಕ ಕೌಟುಂಬಿಕ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳಿಂದ ಪತಿಯಿಂದ ದೂರವಾಗಿ ಆಯಿಷಾ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಈ ಸಂಸಾರಿಕ ಗಲಾಟೆಯಲ್ಲಿ ಮಕ್ಕಳು ಹಿಂಸೆ ಅನುಭವಿಸುವಂತಾಗಿದೆ. ತಮ್ಮ ಮಗಳ ಕೈ ಕಚ್ಚಿ ಪತ್ನಿ ಹಿಂಸೆ ನೀಡಿದ್ದಾಳೆ. ಇದಕ್ಕೆ ಆಕೆ ಪ್ರಿಯಕರ ಸಹ ಕಾರಣವಾಗಿದ್ದಾನೆ ಎಂದು ಖಾನ್ ದೂರಿದ್ದಾರೆ

click me!