ಮಹಾಬಿರ್ತಲಾ ಮತ್ತು ನ್ಯೂ ಅಲಿಪುರದ ಬಳಿ ಇರುವ ಬಾಡಿಗೆ ಮನೆಗೆ ಪೊಲೀಸರು ಆಗಮಿಸಿದ ಬಳಿಕ, ಪತ್ನಿ ಸಂಪತಿಯ ಶವದ ಮುಂದೆ ಪತಿ ಶಾಂತವಾಗಿ ಕುಳಿತಿರುವುದನ್ನು ಕಂಡಿದ್ದರು.
ನವದೆಹಲಿ (ಮಾ.8): ಪಶ್ಚಿಮ ಬಂಗಾಳದ ಬೆಹಾಲಾ ಮೂಲದ 41 ವರ್ಷದ ವ್ಯಕ್ತಿ ಗುರುವಾರ ರಾತ್ರಿ ತನ್ನ 28 ವರ್ಷದ ಹೆಂಡತಿಯನ್ನು ಕತ್ತು ಹಿಸುಕಿ ಕೊಂದಿದ್ದಲ್ಲದೆ, ಆ ಬಳಿಕ ಇಡೀ ಮನೆಯ ಕೆಲಸವನ್ನು ಸ್ವತಃ ತಾನೇ ಮುಗಿಸಿ, ಬೆಳಗ್ಗೆ ಅಡುಗೆ ಮಾಡಿ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾನೆ. ಆ ಬಳಿಕ ತಾನು ಕೊಲೆ ಮಾಡುವ ವಿಚಾರವನ್ನು ಪೊಲೀಸರಿಗೆ ತಿಳಿಸಿ ತಪ್ಪೊಪ್ಪಿಕೊಂಡಿದ್ದಾನೆ. ವರದಿಗಳ ಪ್ರಕಾರ, ಗುರುವಾರ ಮುಂಜಾನೆ 1 ಗಂಟೆಯ ಸುಮಾರಿಗೆ ಕಾರ್ತಿಕ್ ದಾಸ್ ಎನ್ನುವ ವ್ಯಕ್ತಿ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದಿದ್ದಾರೆ. ತನ್ನ ಕೈಯಾರೆ ಕೊಲೆ ಮಾಡಿದ ಬಳಿಕವೂ ಶಾಂತವಾಗಿದ್ದ ವ್ಯಕ್ತಿ, ಬೆಳಗ್ಗೆ ಎಂದಿನಂತೆ ಎದ್ದು ಮನೆಕೆಲಸಗಳು ಪೂರ್ಣ ಮಾಡಿದ್ದಾರೆ. ಮಗಳು ಹಾಗೂ ಮಗನನ್ನು ಶಾಲೆಗೆ ಕಳಿಸುವ ನಿಟ್ಟಿನಲ್ಲಿ ಬೇಗನೆ ಎಚ್ಚರಗೊಂಡ ಆತ, ಅಡುಗೆ ತಯಾರಿಸಿ ಅವರನ್ನು ಶಾಲೆಗೆ ಕಳುಹಿಸಿದ ಬಳಿಕ ಪೊಲೀಸರಿಗೆ ಕರೆ ಮಾಡಿ ಪತ್ನಿಯನ್ನು ಕೊಲೆ ಮಾಡಿದ ವಿಚಾರ ತಿಳಿಸಿದ್ದಾನೆ. ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ ಬಳಿಕ ಪತ್ನಿಯ ತಾಯಿಗೆ ಕರೆ ಮಾಡಿ, ಮಕ್ಕಳನ್ನು ಶಾಲೆಯಿಂದ ಕರೆದುಕೊಂಡು ಬರಲು ಹೋಗುವಂತೆ ತಿಳಿಸಿದ್ದಾರೆ.
ಪೊಲೀಸರು ಮನೆಗೆ ಬರುವ ಹೊತ್ತಿಗಾಗಲೇ, ಮಕ್ಕಳ ಅಗತ್ಯ ವಸ್ತುಗಳನ್ನು ಒಂದು ಬ್ಯಾಗ್‌ನಲ್ಲಿರಿಸಿ ಪ್ಯಾಕ್ ಮಾಡಿಟ್ಟಿರುವ ಘಟನೆ ನಡೆದಿದೆ. ಮಹಾಬಿರ್ತಲಾ ಮತ್ತು ನ್ಯೂ ಅಲಿಪುರದ ಬಳಿ ಇರುವ ಬಾಡಿಗೆ ಮನೆಗೆ ಪೊಲೀಸರು ಆಗಮಿಸುವ ವೇಳೆ ಕಾರ್ತಿಕ್ ದಾಸ್, ಪತ್ನಿ ಸಂಪತಿಯ ಶವದ ಮುಂದೆ ಶಾಂತವಾಗಿ ಕುಳಿತಿರುವುದು ಕಂಡಿತ್ತು. ಪೊಲೀಸರ ವರದಿಯ ಪ್ರಕಾರ, ಕಾರ್ತಿಕ್ ಇದೇ ಪ್ರದೇಶದಲ್ಲಿ ದಿನಸಿ ಹಾಗೂ ಮಾಂಸದ ಅಂಗಡಿಯನ್ನು ಹೊಂದಿದ್ದರು. ಆದರೆ, ಪತ್ನಿ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದಾರೆ ಎನ್ನುವ ವಿಚಾರದಲ್ಲಿ ಅನುಮಾನಗೊಂಡು ಅವರ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಬುಧವಾರ ರಾತ್ರಿ ಗಲಟೆ ಇನ್ನಷ್ಟು ಉಲ್ಭಣಗೊಂಡಿದ್ದರಿಂದ ಕಾರ್ತಿಕ್ ಕೋಪದ ಭರದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.
undefined
ಪ್ರಿಯತಮೆ ದೂರ ಆಗಿದ್ದಕ್ಕೆ ನೊಂದ ದಾವಣಗೆರೆ ಮೂಲದ ಪ್ರಿಯಕರ ಬೆಂಗಳೂರಿನಲ್ಲಿ ಸಾವು!
ಸಂಪತಿಯನ್ನು ಕೊಲೆ ಮಾಡಿದ ಬಳಿಕ, ಮಕ್ಕಳಿಗೆ ತಾಯಿಗೆ ಹುಷಾರಿಲ್ಲ. ಆಕೆ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಳೆ ಎಂದು ತಿಳಿಸಿದ್ದ. ಆದರೂ, ಅಧಿಕಾರಿಗಳು ಪ್ರಸ್ತುತ ಕಾರ್ತಿಕ್ ಅವರ ಮಾತಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಮತ್ತು ಅವರು ಮಕ್ಕಳನ್ನು ಅವರ ಅಜ್ಜಿಯ ನಿವಾಸಕ್ಕೆ ವೈಯಕ್ತಿಕವಾಗಿ ಬೆಂಗಾವಲು ಮಾಡಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ, ಜೊತೆಗೆ ಅವರು ಅಪರಾಧ ಮಾಡುವ ಮೊದಲು ಅವರನ್ನು ಕಳುಹಿಸಿರುವ ಸಾಧ್ಯತೆಯನ್ನು ಅನ್ವೇಷಿಸುತ್ತಿದ್ದಾರೆ. ಪೊಲೀಸರು ಮೃತದೇಹವನ್ನು ಆಸ್ಪತ್ರೆಗೆ ರವಾನಿಸಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ತಿಕ್ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.
ವೈದ್ಯಾಧಿಕಾರಿ ನಿರ್ಲಕ್ಷ್ಯ ದಿಂದ ಹೆರಿಗೆ ಬಳಿಕ ತೀವ್ರ ರಕ್ತಸ್ರಾವದಿಂದ ಮಹಿಳೆ ಸಾವು!