ವಿದ್ಯಾರ್ಥಿನಿಯರ ಅಶ್ಲೀಲ ಚಿತ್ರಗಳು ವೈರಲ್‌: ಎಬಿವಿಪಿ ಅಧ್ಯಕ್ಷ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

Published : Jun 18, 2023, 12:29 PM IST
ವಿದ್ಯಾರ್ಥಿನಿಯರ ಅಶ್ಲೀಲ ಚಿತ್ರಗಳು ವೈರಲ್‌: ಎಬಿವಿಪಿ ಅಧ್ಯಕ್ಷ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ

ಸಾರಾಂಶ

ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ತಾಲೂಕು ಎಬಿವಿಪಿ ಸಂಘಟನೆಯ ಅಧ್ಯಕ್ಷನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕು ಎನ್‌ಎಸ್‌ಯುಐ ವತಿಯಿಂದ ಶನಿವಾರ ಇಲ್ಲಿನ ಡಿವೈಎಸ್‌ಪಿ ಗಜಾನನ ವಾಮನ ಸುತಾರ್‌ ಅವರಿಗೆ ದೂರು ಸಲ್ಲಿಸಲಾಯಿತು.

ತೀರ್ಥಹಳ್ಳಿ (ಜೂ.18): ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿರುವ ತಾಲೂಕು ಎಬಿವಿಪಿ ಸಂಘಟನೆಯ ಅಧ್ಯಕ್ಷನ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲೂಕು ಎನ್‌ಎಸ್‌ಯುಐ ವತಿಯಿಂದ ಶನಿವಾರ ಇಲ್ಲಿನ ಡಿವೈಎಸ್‌ಪಿ ಗಜಾನನ ವಾಮನ ಸುತಾರ್‌ ಅವರಿಗೆ ದೂರು ಸಲ್ಲಿಸಲಾಯಿತು.

ತಾಲೂಕು ಎಬಿವಿಪಿ ಘಟಕ ಅಧ್ಯಕ್ಷ ಪ್ರತೀಕ್‌ ಗೌಡ(Pratik gowdda ABVP) ಆರೋಪಿ. ಸಂಘಟನೆಯ ಸದಸ್ಯತ್ವದ ಆಮಿಷ ತೋರಿಸಿ ಕಾಲೇಜು ವಿಧ್ಯಾರ್ಥಿನಿಯರನ್ನು ಬ್ಲಾಕ್‌ಮೈಲ್‌ ಮೂಲಕ ವಂಚಿಸುವ ಆರೋಪಿ, ಅವರ ಅಶ್ಲೀಲ ಚಿತ್ರಗಳನ್ನು ಚಿತ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದಾನೆ. ಇದೀಗ ತಾಲೂಕಿನಾದ್ಯಂತ ಈ ಚಿತ್ರಗಳು ವೈರಲ್‌ ಆಗುತ್ತಿದ್ದು, ಈ ಘಟನೆಯಿಂದ ಹೆಣ್ಣುಮಕ್ಕಳ ಶಿಕ್ಷಣದ ಮೇಲೂ ಗಂಭೀರ ಪರಿಣಾಮ ಬೀರುವಂತಾಗಿದೆ.

ಮಾಜಿ ಗೆಳೆಯತಿಯನ್ನೇ ಮದುವೆಯಾಗಲು ಪ್ಲಾನ್, ಅಶ್ಲೀಲ ಫೋಟೋ ಬಹಿರಂಗಪಡಿಸಿದ ಗೆಳೆಯ

ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ತಾಲೂಕು ಎನ್‌ಎಸ್‌ಯುಐ ಅಧ್ಯಕ್ಷ ಟಿ.ಎಸ್‌.ಸುಜಿತ್‌ ನೇತೃತ್ವದಲ್ಲಿ ಸಲ್ಲಿಸಿರುವ ದೂರಿನಲ್ಲಿ ಆಗ್ರಹಿಸಲಾಗಿದೆ. ಪಪಂ ಸದಸ್ಯ ಜಯಪ್ರಕಾಶ್‌ ಶೆಟ್ಟಿ, ತಾಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷ ಅಮರನಾಥ ಶೆಟ್ಟಿ, ಅಶ್ವಲ್‌ ಗೌಡ ಇದ್ದರು.

ಫೋಟೋ ವಿರೂಪ ಮಾಡಿ ಹಣಕ್ಕೆ ಬೇಡಿಕೆ, ಆರೋಪಿಗೆ ಶಿಕ್ಷೆ

ಕಾರವಾರ ಮಾಹಿತಿ ತಂತ್ರಜ್ಞಾನ ಕಾಯಿದೆ ಅಡಿಯಲ್ಲಿ ದಾಖಲಾದ ಪ್ರಕರಣದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಶಿಕ್ಷೆ ವಿಧಿಸಿ ಇಲ್ಲಿನ ನ್ಯಾಯಾಲಯ ತೀರ್ಪು ನೀಡಿದೆ.

ಕುಮಟಾ ತಾಲೂಕಿನ ಬಾಡದ ಸಂಜಯ ಭಾಸ್ಕರ ನಾಯ್ಕಗೆ ಶಿಕ್ಷೆಯಾಗಿದ್ದು, ಈತನು ಇನ್‌ಸ್ಟಾಗ್ರಾಂ ಸಾಮಾಜಿಕ ಜಾಲತಾಣದಲ್ಲಿ ಡಿ. 2, 2021ರಂದು ನಕಲಿ ಖಾತೆ ತೆರೆದು ಕಾಲೇಜು ವಿದ್ಯಾರ್ಥಿನಿ ಒಬ್ಬಳಿಗೆ ನಗ್ನವಾಗಿರುವ ಚಿತ್ರಕ್ಕೆ ಅವಳ ಮುಖವನ್ನು ಸೇರಿಸಿ, ಎಡಿಟ್‌ ಮಾಡಿ ಫೋಟೋ ಕಳುಹಿಸಿ, ಫೋಟೊ ಡಿಲೀಟ್‌ ಮಾಡಲು .5000 ಕೊಡಬೇಕು ಅಥವಾ ನಗ್ನವಾಗಿ ವಿಡಿಯೋ ಕಾಲ್‌ ಮಾಡಬೇಕು ಎಂದು ಬೆದರಿಕೆ ಹಾಕಿದ್ದ. ವಿದ್ಯಾರ್ಥಿನಿಯ ಸಹೋದರ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಅಶ್ಲೀಲ ಫೋಟೊ ತೋರಿಸಿ ಮಾನಸಿಕ ಕಿರುಕುಳ ಪ್ರಕರಣ; ಸೈಕೋ ವಿರುದ್ಧ ದೂರು

ಪೊಲೀಸ್‌ ನಿರೀಕ್ಷಕ ನಿತ್ಯಾನಂದ ಪಂಡಿತ ಆರೋಪಿಯ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯಿದೆ 66(ಸಿ), 66(ಡಿ), 67(ಏ) ಮತ್ತು ಐಪಿಸಿ ಕಲಂ 384, 509, 511, 292 ಅಡಿಯಲ್ಲಿ ದೋಷಾರೋಪಣಾ ಪಟ್ಟಿಸಲ್ಲಿಸಿದ್ದರು. ಇಲ್ಲಿನ ಸಿಜೆಎಂ ನ್ಯಾಯಾಧೀಶೆ ರೇಷ್ಮಾ ರೊಡ್ರಿಗೀಸ್‌ ವಿಚಾರಣೆ ನಡೆಸಿ ಆರೋಪಿ ಭಾಸ್ಕರ ನಾಯ್ಕ ಈತನಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ, .1,00,000 ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ನೊಂದ ಬಾಲಕಿಗೆ ದಂಡದ ಪೈಕಿ .75,000 ಪರಿಹಾರ ನೀಡಲು ಮತ್ತು .25,000 ಸರ್ಕಾರಕ್ಕೆ ಜಮಾ ಮಾಡಲು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಮಂಜುನಾಥ ಹೊನ್ನಯ್ಯ ನಾಯ್ಕ ವಾದ ಮಂಡಿಸಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ವಿಜಯ್ ಗುರೂಜಿ ಗ್ಯಾಂಗ್ ಸಮೇತ ಅರೆಸ್ಟ್; ಟೆಕ್ಕಿಗೆ ಲೈಂಗಿಕ ಶಕ್ತಿ ಹೆಚ್ಚಿಸೋದಾಗಿ ₹40 ಲಕ್ಷ ವಂಚನೆ!
ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಶಿಕ್ಷಕನಿಗೆ ಪೋಷಕರಿಂದ ಧರ್ಮದೇಟು!