ಕಲಬುರಗಿ: ಟ್ರ್ಯಾಕ್ಟರ್‌ ಹರಿಸಿದ ಪೇದೆ ಹತ್ಯೆ ಕೇಸ್‌ ಆರೋಪಿಗೆ ಗುಂಡೇಟು

By Kannadaprabha News  |  First Published Jun 18, 2023, 11:20 AM IST

ಪ್ರಮುಖ ಆರೋಪಿ ಸೈಬಣ್ಣನನ್ನು ಬಂಧಿಸಿರುವ ಪೊಲೀಸರು ಈತ ದಾರಿಯಲ್ಲಿ ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟಿ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾದಾಗ ಜೇವರ್ಗಿ ಪಿಎಸ್‌ಐ ಸಂಗಮೇಶ ಆರೋಪಿ ಕಾಲಿಗೆ ಗುಂಡು ಹೊಡೆದು ಮತ್ತೆ ವಶಕ್ಕೆ ಪಡೆದಿದ್ದಾರೆ.


ಕಲಬುರಗಿ(ಜೂ.18): ಇಲ್ಲಿನ ಜೇವರ್ಗಿ ಭೀಮಾ ತೀರದಲ್ಲಿನ ಮರಳು ಮಾಫಿಯಾಗೆ ಹೆಡ್‌ ಕಾನ್‌ಸ್ಟೇಬಲ್‌ ಬಲಿ ಪ್ರಕರಣದ ನಂತರ ಕಲಬುರಗಿ ಪೊಲೀಸರು ಮರಳು ದಂಧೆಕೋರರ ಮೇಲೆ ಮುಗಿಬಿದ್ದಿದ್ದಾರೆ. ಪ್ರಮುಖ ಆರೋಪಿ ಸೈಬಣ್ಣನನ್ನು ಬಂಧಿಸಿರುವ ಪೊಲೀಸರು ಈತ ದಾರಿಯಲ್ಲಿ ಯಡ್ರಾಮಿ ಪಿಎಸ್‌ಐ ಬಸವರಾಜ ಚಿತಕೋಟಿ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾದಾಗ ಜೇವರ್ಗಿ ಪಿಎಸ್‌ಐ ಸಂಗಮೇಶ ಆರೋಪಿ ಕಾಲಿಗೆ ಗುಂಡು ಹೊಡೆದು ಮತ್ತೆ ವಶಕ್ಕೆ ಪಡೆದಿದ್ದಾರೆ.

ಚಾಕುವಿನಿಂದ ಯಡ್ರಾಮಿ ಪಿಎಸ್‌ಐ ಚಿತಕೋಟೆ ಮೇಲೆಯೇ ಹಲ್ಲೆಗೆ ಮುಂದಾಗಿದ್ದ ಆರೋಪಿ ಸೈಬಣ್ಣ ಅಲ್ಲಿಂದ ಪರಾರಿಗೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗೆ ಎಚ್ಚರಿಕೆ ನೀಡಿದರೂ ಅದರಿಂದ ಆರೋಪಿ ಸೈಬಣ್ಣ ಎಚ್ಚೆತ್ತುಕೊಳ್ಳದೆ ಹೋದಾಗ ಕಾಲಿಗೆ ಗುಂಡೇಟು ಹೊಡೆಯಲಾಗಿದೆ.

Tap to resize

Latest Videos

undefined

ಮರಳು ಮಾಫಿಯಾ: ರಾತ್ರಿ ಗಸ್ತು ಮುಗ್ಸಿ ಬರ್ತೀನಿ ಅಂದಾಂವ ಹಾದಿ ಹೆಣವಾದ!

ಜೇವರ್ಗಿಯ ನೆಲೋಗಿ ಠಾಣೆ ವ್ಯಾಪ್ತಿಯಲ್ಲಿ ನಾರಾಯಣಪುರ- ಹುಲ್ಲೂರ್‌ ಹತ್ತಿರ ಗುರುವಾರ ರಾತ್ರಿ ಸಂಭವಿಸಿದಂತಹ ಪೇದೆ ಮಯೂರ್‌ ಚವ್ಹಾಣ್‌ ಹತ್ಯೆ ಪ್ರರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಅದಾಗಲೇ ಟ್ರ್ಯಾಕ್ಟ​ರ್‌ ಚಾಲಕ ಸಿದ್ದಪ್ಪ ಕರ್ಜಗಿ ಈತನನ್ನು ಬಂಧಿಸಿ ವಶಕ್ಕೆ ಪಡೆದಿದ್ದರು. ಇದೇ ಪ್ರಕರಣದ ಪ್ರಮುಖ ಪ್ರಕರಣದ ಇನ್ನೋರ್ವ ಆರೋಪಿ ಸೈಬಣ್ಣ ಕರಜಗಿ ಬಂಧನಕ್ಕೆ ನಿನ್ನೆಯಿಂದಲೇ ಜಾಲ ಬೀಸಿದ್ದರು.

ಈತನನ್ನು ವಶಕ್ಕೆ ಪಡೆದು ಠಾಣೆಗೆ ವಿಚಾರಣೆಗೆಂದು ಕರೆ ತರುವಾಗ ದಾರಿಯಲ್ಲಿ ಜೇರಟಗಿ- ಮಂದೇವಾಲ ನಡುವೆ ಬಹಿರ್ದೆಸೆ ನೆಪದಲ್ಲಿ ಆರೋಪಿ ಸೈಬಣ್ಣ ಕೆಳಗಿಳಿದು ಅಲ್ಲೇ ಇದ್ದ ನೆಲೋಗಿ ಪಿಎಸ್‌ಐ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಮುಂದಾಗುತ್ತಿದ್ದಂತೆಯೇ ನೆಲೋಗಿ ಪಿಎಸ್‌ಐ ತಮ್ಮ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿ ಆರೋಪಿ ಸೈಬಣ್ಣ ಕಾಲಿಗೆ ಆಳ ಗಾಯ ಮಾಡಿ ಮತ್ತೆ ಆತನನ್ನು ವಶಕ್ಕ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಗುಂಡೇಟು ತಗುಲಿರುವ ಆರೋಪಿ ಸೈಬಣ್ಣ ಕರ್ಜಗಿ ಈತ ಈಗಾಗಲೇ ಪೊಲೀಸ್‌ ವಶದಲ್ಲಿರುವ ಚಾಲಕ ಸಿದ್ದಪ್ಪ ಕರ್ಜಗಿ ಸಹೋದರ. ಗಾಯಗೊಂಡಿರುವ ಸೈಬಣ್ಣಗೆ ಚಿಕಿತ್ಸೆಗಾಗಿ ಕಲಬುರಗಿಯ ಜಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೈಬಣ್ಣ ಜೇವರ್ಗಿ ಬಿಜೆಪಿ ಮುಖಂಡನ ಬಲಗೈ ಬಂಟ!

ಮರಳು ಮಾಫಿಯಾದ ಪ್ರಮುಖ ಆರೋಪಿ ಸೈಬಣ್ಣ ಕರ್ಜಗಿ ಈತ ಜೇವರ್ಗಿ ಬಿಜೆಪಿ ಮುಖಂಡರ ಜೊತೆ ಇರೋ ಪೋಟೋಗಳು ವೈರಲ್‌ ಆಗಿವೆ. ಜೇವರ್ಗಿ ತಾಲೂಕಿನ ನಾರಾಯಣಪುರ ಗ್ರಾಮದ ನಿವಾಸಿ ಸೈಬಣ್ಣ ಪೇದೆ ಹತ್ಯೆಯ ಘಟನೆ ನಂತರ ನಾಪತ್ತೆಯಾಗಿದ್ದ. ಜೇವರ್ಗಿ ಬಿಜೆಪಿ ಮುಖಂಡರೊಬ್ಬರ ಬಲಗೈ ಬಂಟನಂತಿದ್ದ ಸೈಬಣ್ಣ ಕರ್ಜಗಿ ಮುಖಂಡರ ಜೊತೆಗೆ ನಿಂತಿರೋ ಫೋಟೋಗಳು ಜೇವರ್ಗಿಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್‌ ಆಗಿವೆ. ಮರಳು ಸಾಗಾಟ ಟ್ರ್ಯಾಕ್ಟರ್‌ ಹಿಡಿಯಲು ಹೋದಾಗ ಪೇದೆ ಮಯೂರ್‌ ಮೇಲೆಯೇ ಟ್ರ್ಯಾಕ್ಟ​ರ್‌ ಹರಿಸಿ ಹತ್ಯೆ ನಡೆದಿತ್ತು. ಈ ಪ್ರಕರಣಲ್ಲಿ ಸೈಬಣ್ಣ ಆರೋಪಿಯಾಗಿದ್ದ.

click me!