ಉದ್ಯೋಗ ಇಲ್ಲದ ಗಂಡನಿಗೆ ಸಿವಿಲ್ ಇಂಜಿನಿಯರ್ ಹೆಂಡ್ತಿ ಮೇಲೆ ಅನುಮಾನ: ಸುತ್ತಿಗೆಯಿಂದ ಹೊಡೆದು ಕೊಲೆ

ತ್ನಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಮೇಲೆ ದಿನವೂ ಜಗಳವಾಡುತ್ತಿದ್ದ ಗಂಡ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ.


ನೋಯ್ಡಾ: ಪತ್ನಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದ ಮೇಲೆ ದಿನವೂ ಜಗಳವಾಡುತ್ತಿದ್ದ ಗಂಡ ಆಕೆಯನ್ನು ಸುತ್ತಿಗೆಯಿಂದ ಹೊಡೆದು ಕೊಂದ ಘಟನೆ ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದಿದೆ. ನೋಯ್ಡಾದ ಸೆಕ್ಟರ್ 15 ರಲ್ಲಿ ವಾಸಿಸುತ್ತಿದ್ದ ಅಸ್ಮಾ ಖಾನ್ (42) ಕೊಲೆಯಾದವರು. ಶುಕ್ರವಾರ ರಾತ್ರಿ ಕೊಲೆ ನಡೆದಿದೆ. ಕೊಲೆಯ ಬಳಿಕ ಅಸ್ಮಾ ಅವರ ಪತಿ ನೂರುಲ್ಲಾ ಹೈದರ್ (55) ಸಮೀಪದ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾರೆ. ಮೃತ ಅಸ್ಮಾ ಅವರು ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಸಿವಿಲ್ ಎಂಜಿನಿಯರಿಂಗ್ ಅಧ್ಯಯನ ಮಾಡಿದ್ದರು. ಇತ್ತೀಚೆಗೆ ಅವರಿಗೆ ನೋಯ್ಡಾದ ಸೆಕ್ಟರ್ 62 ರಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತ್ತು. ಪತ್ನಿಗೆ ಕೆಲಸ ಸಿಕ್ಕಿದ್ದರಿಂದ ಪತಿ ನೂರುಲ್ಲಾ ಹೈದರ್‌ಗೆ ಅಸಮಾಧಾನವಿತ್ತು. ಇತ್ತ ಅಸ್ಮಾ ಪತಿಗೆ ನಿಶ್ಚಿತವಾದ ಕೆಲಸವಿರಲಿಲ್ಲ, ಆತ ಮನೆಯಲ್ಲೇ ಕುಳಿತು ಟ್ರೇಡಿಂಗ್ ಬ್ಯುಸಿನೆಸ್ ಮಾಡುತ್ತಿದ್ದ. 

2005ರಲ್ಲಿ ಅಸ್ಮಾ ಖಾನ್ ಹಾಗೂ ನೂರುಲ್ಲಾಗೆ ಮದುವೆಯಾಗಿತ್ತು. ಮೊದಲ ಮಗ ಎಂಜಿನಿಯರಿಂಗ್ ಓದುತ್ತಿದ್ದರೆ, ಮಗಳು 8ನೇ ತರಗತಿಯಲ್ಲಿ ಓದುತ್ತಿದ್ದಳು. ಎರಡಂತಸ್ತಿನ ಮನೆಲ್ಲಿ ವಾಸವಿದ್ದ ಈ ದಂಪತಿ ಮನೆಯ ಮೊದಲ ಮಹಡಿಯನ್ನು ಪೇಯಿಂಗ್ ಗೆಸ್ಟ್ ಆಗಿರುವವರಿಗೆ ಬಾಡಿಗೆ ನೀಡಿದ್ದರು. ಇತ್ತ ಅಸ್ಮಾಳ ತಾಯಿ ಹಾಗೂ ಇಬ್ಬರೂ ಮಕ್ಕಳು ಗಲಾಟೆ ನಡೆಯುವ ವೇಳೆ ಮನೆಯಲ್ಲಿರಲಿಲ್ಲ,  ಇತ್ತ ನೂರುಲ್ಲಾಗೆ ಪತ್ನಿ ಅಸ್ಮಾ ಮೇಲೆ ಮೊದಲಿನಿಂದಲೂ ಅನುಮಾನವಿತ್ತು. ಆಕೆ ಬೇರೊಬ್ಬರನ ಜೊತೆ ಸಂಬಂಧ ಹೊಂದಿದ್ದಾಳೆ ಎಂದು ಆತ ದಿನವೂ ಮನೆಯಲ್ಲಿ ಜಗಳ ಮಾಡುತ್ತಿದ್ದ ಶುಕ್ರವಾರ ರಾತ್ರಿ ಈ ಜಗಳ ವಿಕೋಪಕ್ಕೆ ಹೋಗಿದ್ದು, ಮನೆಯಲ್ಲಿದ್ದ ಸುತ್ತಿಗೆ ತಂದು ಅಸ್ಮಾಳ ತಲೆಗೆ ಹೊಡೆದು ಕೊಂದೇ ಬಿಟ್ಟಿದ್ದಾನೆ. 

Latest Videos

ವಿದೇಶದಿಂದ ಚಿನ್ನ ತರಲು ಭಾರತದಲ್ಲಿರುವ ನಿಯಮಗಳು: ಓರ್ವ ಮಹಿಳೆ ಅಥವಾ ಪುರುಷ ಎಷ್ಟು ತರಬಹುದು?

ಮಗಳನ್ನು ನೋಡುವುದಕ್ಕೆ ಸೌದಿಗೆ ಹೋಗಿದ್ದ ಕೇರಳದ ವ್ಯಕ್ತಿ ಅಲ್ಲೇ ಸಾವು

click me!