10ನೇ ಕ್ಲಾಸ್ ಬಾಲಕಿ 8 ತಿಂಗಳ ಗರ್ಭಿಣಿ: ಪಕ್ಕದ ಮನೆಯ 55 ವರ್ಷದ ವ್ಯಕ್ತಿಯ ಬಂಧನ

Published : Apr 03, 2025, 07:11 PM ISTUpdated : Apr 03, 2025, 07:22 PM IST
10ನೇ ಕ್ಲಾಸ್ ಬಾಲಕಿ 8 ತಿಂಗಳ ಗರ್ಭಿಣಿ: ಪಕ್ಕದ ಮನೆಯ 55 ವರ್ಷದ ವ್ಯಕ್ತಿಯ ಬಂಧನ

ಸಾರಾಂಶ

ಕೇರಳದ ಎರ್ನಾಕುಲಂನಲ್ಲಿ 10ನೇ ತರಗತಿ ವಿದ್ಯಾರ್ಥಿನಿ 8 ತಿಂಗಳ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ನೆರೆಮನೆಯ 55 ವರ್ಷದ ವ್ಯಕ್ತಿಯಿಂದ ಬಾಲಕಿ ಬಲತ್ಕಾರಕ್ಕೊಳಗಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಚ್ಚಿ: ತಿಂಗಳ ಹಿಂದಷ್ಟೇ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಪ್ರಕರಣ ಕೇರಳದ ಆಲಪ್ಪುಳದಲ್ಲಿ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಆಕೆಯ ಕ್ಲಾಸ್‌ಮೇಟನ್ನು ನಿನ್ನೆಯಷ್ಟೇ ಪೊಲೀಸರು ಬಂಧಿಸಿದ್ದರು. ಈ ಘಟನೆ ಮಾಸುವ ಮೊದಲೇ ಈಗ 10ನೇ ತರಗತಿ ವಿದ್ಯಾರ್ಥಿನಿಯೋರ್ವಳು 8 ತಿಂಗಳ ಗರ್ಭಿಣಿಯಾಗಿರುವ ಪ್ರಕರಣವೊಂದು ಕೇರಳದಿಂದ ವರದಿಯಾಗಿದೆ. 

ಎರ್ನಾಕುಲಂ ಚೆಂಬರಕ್ಕಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿಯನ್ನು ಬಲತ್ಕಾರ ಮಾಡಿ ಗರ್ಭಿಣಿಯನ್ನಾಗಿಸಲಾಗಿದೆ. ಘಟನೆಗೆ ಸಂಬಂಧಿಸಿದ ನೆರೆಮನೆಯ 55 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ತಮಿಳುನಾಡು ಮೂಲದ ರಾಜನ್‌ ಬಂಧಿತ ವ್ಯಕ್ತಿ. ಬಾಲಕಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿ ವೈದ್ಯರು ತಪಾಸಣೆ ನಡೆಸಿದ ವೇಳೆ ಆಕೆ ಗರ್ಭವತಿಯಾಗಿರುವುದು ಬೆಳಕಿಗೆ ಬಂದಿದೆ. ಆದರೆ ಈ ವಿಚಾರವನ್ನು ಪೋಷಕರು ಮಾನಕ್ಕೆ ಅಂಜಿ ಮುಚ್ಚಿಟ್ಟಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 

ಈ ವಿಚಾರಕ್ಕೆ ಸಂಬಂಧಿಸಿದಂತೆ ಬಾಲಕಿಯ ಪಕ್ಕದ ಮನೆಯವನೇ ಆದ 55 ವರ್ಷದ ವ್ಯಕ್ತಿಯನ್ನು ತಡಿಯಿಟ್ಟಪರಂಬು ಪೊಲೀಸರು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನವಾಗಿದೆ.  ಇತ್ತೀಚೆಗೆ ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಪೋಷಕರು ಹದಿಹರೆಯದ ಮಕ್ಕಳನ್ನು ಕಾಮುಕರ ಕಣ್ಣುಗಳಿಂದ ರಕ್ಷಿಸುವುದೇ ದೊಡ್ಡ ಸವಾಲಾಗಿದೆ. ಕೆಲವು ಪೋಷಕರಿಗಂತೂ ಹದಿಹರೆಯದ ಮಕ್ಕಳ ಮೇಲೆ ಗಮನವೇ ಇರುವುದಿಲ್ಲ, ಅಪ್ರಾಪ್ತ ಮಗಳು, ಮಗು ಹೆತ್ತ ನಂತರವೇ ಪ್ರಕರಣ ಬೆಳಕಿಗೆ ಬಂದತಹ ಹಲವು ಘಟನೆಗಳು ಸಮಾಜದಲ್ಲಿ ನಡೆದಿವೆ. ಮೊಬೈಲ್ ಪೋನ್ ಹಾಗೂ ಸೋಶಿಯಲ್ ಮೀಡಿಯಾಗಳು ಮಕ್ಕಳು ಹಾದಿ ತಪ್ಪುವುದಕ್ಕೆ ದೊಡ್ಡ ಪ್ರಮಾಣದ ಕೊಡುಗೆಯನ್ನೇ ನೀಡುತ್ತಿವೆ. 

ಸೋಶಿಯಲ್ ಮೀಡಿಯಾ ಕಾಲಘಟ್ಟದಲ್ಲಿ ಹದಿಹರೆಯದ ಮಕ್ಕಳ ರಕ್ಷಣೆ ಹೇಗೆ?
ಬ್ಯಾಡ್ ಟಚ್‌ ಗುಡ್‌ ಟಚ್ ತಿಳಿಸಿಕೊಡುವ ಕಾಲ ಈಗ ಹಳೆಯದಾಯ್ತು. ಮಕ್ಕಳಿಗೆ ಎಲ್ಲವೂ ಮೊಬೈಲ್ ಮೂಲಕ ತಿಳಿಯುತ್ತಿದ್ದು, ಮಕ್ಕಳ ಚಟುವಟಿಕೆಯ ಮೇಲೆ ಸೂಕ್ಷ್ಮವಾದ ಗಮನವಿಡಿ. ತಪ್ಪು ಮಾಡಿದಾಗ ಗದರದೇ ನಿಧಾನವಾಗಿ ಎಲ್ಲವನ್ನು ತಿಳಿಯುವ ಪ್ರಯತ್ನ ಮಾಡಿ, ಅವರ ಸ್ನೇಹಿತರು ಅವರ ಚಟುವಟಿಕೆಗಳು ನಡವಳಿಕೆಗಳ ಮೇಲೆ ಒಂದು ಕಣ್ಣಿಟ್ಟಿರಿ, ಸ್ನೇಹಿತೆ/ಸ್ನೇಹಿತರಂತೆ ವರ್ತಿಸಿ ಅವರ ಮನಸ್ಸಿನಲ್ಲಿರುವುದೆಲ್ಲವನ್ನು ಹೊರತರುವ ಪ್ರಯತ್ನ ಮಾಡಿ, ಟೀನೇಜ್‌ ಲವ್‌, ಲೈಂಗಿಕ ಸಂಪರ್ಕಗಳು ಅದರಿಂದಾಗುವ ಅನಾಹುತಗಳ ಬಗ್ಗೆ ಅವರಿಗೆ ಸೂಕ್ಷ್ಮವಾಗಿ ತಿಳಿಸಿಕೊಡುವ ಪ್ರಯತ್ನ ಮಾಡಿ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ