Marriage Crime ಮೂರು ಮದ್ವೆ ಅದ್ರೂ ನಿಂತಿಲ್ಲ ರಂಗಿನಾಟ, ಚೆಂದುಳ್ಳಿ ಚೆಲುವೆ ಮೋಸಕ್ಕೆ ಗಂಡಂದಿರ ಪರದಾಟ!

Published : Mar 23, 2022, 07:53 PM ISTUpdated : Mar 23, 2022, 07:59 PM IST
Marriage Crime ಮೂರು ಮದ್ವೆ ಅದ್ರೂ ನಿಂತಿಲ್ಲ ರಂಗಿನಾಟ, ಚೆಂದುಳ್ಳಿ ಚೆಲುವೆ ಮೋಸಕ್ಕೆ ಗಂಡಂದಿರ ಪರದಾಟ!

ಸಾರಾಂಶ

3 ಮುದ್ವೆಯಾದ ಬ್ಯೂಟಿ, ನಿಲ್ಲದ ರಂಗಿನಾಟಕ್ಕೆ ಗಂಡಂದಿರು ಪಜೀತಿ ಯುವಕನ ಜೊತೆ ಕಾರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ  ಆದರೂ ಡಿವೋರ್ಸ್ ಕೊಡಲ್ಲ ಅಂತಾಳೆ ಚೆಂದುಳ್ಳಿ ಚೆಲುವೆ

ಮೈಸೂರು(ಮಾ.23): ಚೆಂದುಳ್ಳಿ ಚೆಲುವೆ. ಒಂದೇ ನೋಟದಲ್ಲಿ ಯುವಕರನ್ನು ಖೆಡ್ಡಾಗೆ ಬೀಳಿಸುವ ಮೈಮಾಟ. ಇದನ್ನೇ ದಾಳವಾಗಿಸಿಕೊಂಡ ಮೈಸೂರಿನ ಬ್ಯೂಟಿ ನಿಧಾನ ಖಾನ್, ಒಂದಲ್ಲ, ಎರಡಲ್ಲ, ಮೂರು ಮದ್ವೆಯಾಗಿದ್ದಾಳೆ. ಮುದ್ವೆ ಮೂರಾದ್ರೂ ಸಂಸಾರ ಹಲವು. ಜೊತೆಗೆ ಡೇಟಿಂಗ್, ಚಾಟಿಂಗ್ ಮತ್ತಷ್ಟು. ಆದರೆ ಈಕೆಯ ಅಸಲಿ ಬಣ್ಣ ಇದೀಗ ಹೊರಬಿದ್ದಿದೆ. ಮೂರನೇ ಪತಿಗೆ ಮೋಸ ಮಾಡಲು ಹೋಗಿ ರಂಗಿನಾಟ ಬೆಳಕಿಗೆ ಬಂದಿದೆ. 

ಮೈಸೂರಿನ ಉದಯಗಿರಿ ನಿವಾಸಿಯಾಗಿರುವ ನಿಧಾ ಖಾನ್, ನೋಡೆಕೆ ಸುಂದರವಾಗಿರುವ ಚೆಂದುಳ್ಳಿ ಚೆಲುವೆ.  ಇದೀಗ ಮೂರನೇ ಪತಿಗೆ ಚಮಕ್ ಕೊಟ್ಟಿದ್ದಾಳೆ. ಅಂದರೆ ಈಕೆಯ ಮೂರನೇ ಪತಿ.  ಗಂಡ ಮೂರು ಮೂರು ಮದುವೆ ಆದ್ರೆ ಮೋಸ ಮಾಡ್ದ, ಕಟ್ಕೊಂಡ ಹೆಂಡ್ತಿಗೆ ಕೈ ಕೊಟ್ಟ ಅನ್ನೋ‌ ಅಪವಾದಗಳು ಕಾಮನ್. ಆದ್ರೆ ಮೊದಲನೇ ಮದುವೆ ಮುಚ್ಚಿಟ್ಟು ಎರಡನೇ ಮದುವೆ  ಮೂರನೇ ಮದುವೆಯಾಗಿ ಪತಿಯನ್ನ ಯಾಮಾರಿಸಿದ್ದಾಳೆ ಈಕೆ.

Bengaluru ಪತಿ ವಿರುದ್ಧವೇ ಅತ್ಯಾಚಾರ ಕೇಸ್ ದಾಖಲಿಸಿದ ಪತ್ನಿ!

ಕ್ಲೀನ್ ಬೋಲ್ಡ್ ಆಗುವ ಸೌಂದರ್ಯ, ಜೊತೆಗೆ ಮಾತಿನಲ್ಲೇ ಮಂಟಪಕ್ಕೆ ಕಟ್ಟೋ ಚಾಕಚಕತ್ಯೆ.ಇದೇ ಕಾರಣದಿಂದ ಒಂದಲ್ಲ, ಎರಡಲ್ಲ, ಮೂರು ಮದ್ವೆಯಾರೂ ಈ ಬ್ಯೂಟಿಯ ದಾಹ ತಣಿದಿಲ್ಲ. ಮೂರನೆ ಗಂಡ ಪಕ್ಕದಲ್ಲಿರುವಾಗಲೇ  ಮೆಸೇಜ್, ಚಾಟಿಂಗ್, ಡೇಟಿಂಗ್, ಕದ್ದು ಮುಚ್ಚಿ ಚೆಲ್ಲಾಟ ಕೂಡ ನಡೆಯುತ್ತಲೇ ಇತ್ತು. ಟಿಂಡರ್ ಆ್ಯಪ್ ಮೂಲಕ ಪರಿಚಯವಾದ ನಿಧಾ ಖಾನ್ ಗೆ ಮದುವೆ ಪ್ರಪೋಜ್ ಮಾಡಿದ್ದಾನೆ. ಮದುವೆ ಪ್ರಪೋಜಲ್ ಗೆ ಒಪ್ಪಿಕೊಂಡ ನಿಧಾ ಖಾನ್ ನವಂಬರ್ 2019 ರಲ್ಲಿ ಮದುವೆಯಾಗಿದ್ದಾರೆ. ಮದುವೆ ನಂತ್ರ ನಿಧಾ ಖಾನ್ ಮತ್ತೊಂದು ಮೊದಲ ಮದುವೆ ವಿಚಾರ ಗೊತ್ತಾಗಿದೆ.

Ex Wife ಮರು ಮದುವೆಯಾಗ್ತಿರೋನ ಹೆಸರು ಕೇಳಿ ನಿದ್ರೆ ಬಿಟ್ಟ ಮಾಜಿ ಪತಿ!

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆಚ್ ಆರ್ ಆಗಿ ಕೆಲ್ಸ ಮಾಡ್ತಿರೋ ಅಜಾಮ್ ಖಾನ್ ಗೆ ನಿಧಾ ಖಾನ್ ನಡವಳಿಕೆ ಮೇಲೆ ಅನುಮಾನ ಬಂದಿದೆ. ಬೇರೆ ಯುವಕರ ಜೊತೆಗೆ ಚಾಟಿಂಗ್ ಡೇಟಿಂಗ್ ಕೂಡ ನಡಿತಾ ಇತ್ತು.ಕಳೆರ ವಾರವಷ್ಟೇ ಕಾರಿನಲ್ಲಿ ಬೇರೊಂದು ಯುವಕನ ಜೊತೆ ಕಾರಿನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪತ್ನಿ ಹಾಗೂ ಪ್ರಿಯಕರನನ್ನ ಹಿಡಿದು ಉದಯಗಿರಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಬಳಿಕ ಮದರಾಸದಲ್ಲೂ ಡಿವೋರ್ಸ್ ಬೇಕು ಅಂತಾ ಕೋಮಿನ ಮುಖಂಡರನ್ನ ಕೇಳಿದ್ದಾರೆ. ಆದ್ರೆ ಆಕೆ ಡಿವೋರ್ಸ್ ಕೊಡಲ್ಲ ಅಂತಿದ್ದಾಳಂತೆ. ಆಕೆಯಿಂದ ನನಗೆ  ಜೀವ ಬೆದರಿಕೆ ಇದೆ. ಡಿವೋರ್ಸ್ ಸಿಕ್ರೆ ಸಾಕಪ್ಪ ಅಂತಾ ಅಜಾಮ್ ಖಾನ್ ವಕೀಲರ ಮೊರೆ ಹೊಗಿದ್ದಾನೆ. ಪ್ರಕರಣ ಠಾಣೆ ಮೆಟ್ಟಿಲೇರಿದರೂ ಇನ್ನೂ ಎಫ್‌ಐಆರ್ ಮಾತ್ರ ದಾಖಲಾಗಿಲ್ಲ.

ಉಪನ್ಯಾಸಕಿ ಆತ್ಮಹತ್ಯೆ: ಪ್ರಿಯಕರ ಮದುವೆ ಮಂಪಟದಿಂದ ಪರಾರಿ
ಪ್ರೀತಿಸಿದ್ದ ಉಪನ್ಯಾಸಕ ಕೈ ಕೊಟ್ಟು, ಬೇರೊಬ್ಬಳ ಕೊರಳಿಗೆ ತಾಳಿ ಕಟ್ಟುತ್ತಿದ್ದಂತೆ ಮನನೊಂದ ಉಪನ್ಯಾಸಕಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ನಗರದ ಓ.ಟಿ. ರಸ್ತೆಯ ನಿವಾಸಿ ರೂಪಾ (28) ಆತ್ಮಹತ್ಯೆಗೆ ಶರಣಾದ ಯುವತಿ. ಕಳೆದ ನಾಲ್ಕೈದು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ರೂಪಾ ಹಾಗೂ ಮುರಳಿ ಇಬ್ಬರೂ ಉಪನ್ಯಾಸಕರಾಗಿದ್ದರು. ಭಾನುವಾರ ನಗರದ ಕಲ್ಯಾಣ ಮಂಟಪವೊಂದರಲ್ಲಿ ಮುರಳಿ ಬೇರೆ ಯುವತಿಯೊಂದಿಗೆ ಮದುವೆ ಆಗಿದ್ದಾರೆ. ಇತ್ತ ಮುಹೂರ್ತದ ಸಮಯಕ್ಕೆ ರೂಪಾ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ವಿಷಯ ತಿಳಿದು ಮುರಳಿ ಮದುವೆ ಮನೆಯಿಂದಲೇ ನಾಪತ್ತೆಯಾಗಿದ್ದು, ವಿಷಯ ತಿಳಿದ ನೂತನ ವಧು ಸಹ ಮದುವೆ ಮಂಟಪದಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಪೋಷಕರು ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ದೊಡ್ಡಪೇಟೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುರಳಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ
ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?