ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ ಜನ: ಅತಿ ಆಸೆ ಗತಿಗೇಡು ಅನ್ನೋದು ಇದಕ್ಕೆ..!

Published : Mar 23, 2022, 08:03 AM IST
ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ ಜನ: ಅತಿ ಆಸೆ ಗತಿಗೇಡು ಅನ್ನೋದು ಇದಕ್ಕೆ..!

ಸಾರಾಂಶ

*  ಮುತ್ತು ಪೋಣಿಸಿ ‌ಕೊಟ್ರೇ ಕೊಡ್ತಾರಂತೆ ಹತ್ತರಷ್ಟು ಬಡ್ಡಿ *  ಹೆಚ್ಚುವರಿ ಹಣದಾಸೆಗೆ ಐದು ಕೋಟಿಗೂ ಹೆಚ್ಚು ಹಣ ಮೋಸ *  2000 ಸಾವಿರಕೆ 200 ಹೆಚ್ಚುವರಿ ಹಣ  

ನರಸಿಂಹ ಮೂರ್ತಿ ‌ಕುಲಕರ್ಣಿ ಏಷ್ಯಾನೆಟ್ ಸುವರ್ಣ ನ್ಯೂಸ್ ಬಳ್ಳಾರಿ

ಬಳ್ಳಾರಿ(ಮಾ.23): ಇದು ಒಂದು ‌ಮುತ್ತಿನ ಕಥೆ ಸಿನಿಮಾ ಅಲ್ಲ. ಸರಣಿ ಮತ್ತುಗಳ ಪೋಣಿಸಿ ಸರ ಮಾಡೋ ವಂಚನೆಯ ಕಥೆ. ಮುತ್ತಿನ ಕಥೆಯನ್ನು ನಂಬಿ‌ ಕೋಟಿ ಕೋಟಿ ಕಳೆದುಕೊಂಡವರ ಕಥೆ. ಹೌದು, ಬಳ್ಳಾರಿಯಲ್ಲಿ ನಡೆದ ಈ ಮುತ್ತಿನ ಕಥೆ ನಂಬಿ ಸರಿಸುಮಾರು ಐದು ಕೋಟೆ ಹಣವನ್ನು ಜನರು ಹಣ ಕಳೆದುಕೊಂಡಿದ್ದಾರೆ. ಇನ್ನೂ ಮೋಸದ ಜಾಲದಲ್ಲಿ ಮತ್ತೊಮ್ಮೆ ಮಧ್ಯಮ ವರ್ಗದ ಕುಟುಂಬದ ಜನರೇ ಹೆಚ್ಚು ಟಾರ್ಗೆಟ್ ಆಗಿದ್ದಾರೆ.
ಮುತ್ತು ಪೋಣಿಸೋ ವ್ಯಾಪಾರದ ಲಾಭಂಶ ನಂಬಿ‌ ಮೋಸ

ಐಎಂಎ(IMA) ಮಾದರಿಯಲ್ಲಿ ಇದು ಕೂಡ ಬಹುಕೋಟಿ ವಂಚನೆ(Fraud) ಪ್ರಕರಣವಾಗಿದೆ. ಅಲ್ಲಿ ಬಂಗಾರದ ವ್ಯಾಪಾರದ ಹೆಸರಿನ ಮೋಸವಾದ್ರೆ ಇಲ್ಲಿ‌ ಮುತ್ತಿನ ವ್ಯಾಪಾರದ ಮೋಸವಾಗಿದೆ. ಮುತ್ತಿನ ಬ್ಯುಸಿನೆಸ್‌ನಲ್ಲಿ(Business) ಅಧಿಕ ಲಾಭ ಕೊಡೋದಾಗಿ ನಂಬಿಸಿ 500ಕ್ಕೂ ಹೆಚ್ಚು ಜನರಿಗೆ ಡಿಪಾಸಿಟ್ ಸಂಗ್ರಹ ಮಾಡಿ ಪಂಗನಾಮ ಹಾಕಿದ್ದಾರೆ. ಹೀಗಾಗಿ ನಿನ್ನೆ ತಡರಾತ್ರಿಯಿಂದ ವಂಚನೆಗೊಳಗಾದ ನೂರಾರು ಜನರು ದೂರು ಕೊಡಲು ಬರುತ್ತಿದ್ದಾರೆ..

Cyber Fraud: ಗೂಗಲ್‌ನಲ್ಲಿ ಹೆಲ್ಪ್‌ಲೈನ್ ನಂಬರ್ಸ್‌ ಸರ್ಚ್ ಮಾಡ್ತೀರಾ? ಹಾಗಿದ್ರೆ ಹುಷಾರ್!

ಘಟನೆ ಹಿನ್ನೆಲೆ: 

ಕಳೆದ ಎಂಟು ಹತ್ತು ತಿಂಗಳ ‌ಹಿಂದೆ ಆಂಧ್ರ(Andhra Pradesh) ಮೂಲದ ಒಂದಷ್ಟು ‌ಜನರು ಬಳ್ಳಾರಿಯ(Ballari) ಎಸ್ಪಿ ಸರ್ಕಲ್ ಬಳಿ ಪರ್ಲ್ ವರ್ಲ್ಡ್ ಎನ್ನುವ ಕಂಪನಿಯನ್ನು ಪ್ರಾರಂಭಿಸಿದ್ದರು. ಈ ಕಂಪನಿಯ ನಿಯಮದ ಪ್ರಕಾರ ಎರಡು ಸಾವಿರ ಡೆಪಾಸಿಟ್ ಮಾಡಿದ್ರೆ ಒಂದು ಮುತ್ತಿನ ಪ್ಯಾಕೇಟ್ ಕೊಡ್ತಾರೆ. ಆ ಪ್ಯಾಕೇಟ್‌ನಲ್ಲಿರುವ ಮುತ್ತನ್ನ ಹತ್ತು ದಿನಗಳೊಳಗೆ ಸರಕ್ಕೆ ಪೋಣಿಸಿ ಕೊಡಬೇಕು ಆಗ ಡಿಪಾಸಿಟ್ ಮಾಡಿದ 2000 ಹಣದ ಜೊತೆಗೆ 200 ರೂಪಾಯಿ ಹೆಚ್ಚುವರಿ ಹಣ ಕೊಡುವ ಸ್ಕೀಂ ಇದಾಗಿದೆ. 

ಮೇಲ್ನೋಟಕ್ಕೆ ಮಹಿಳೆಯರಿಗೆ(Women) ಒಂದು ಮುತ್ತಿನ ಸರ ಪೋಣಿಸಲು ಆರ್ಧ ಗಂಟೆ ಸಾಕು. ಒಂದು ಗಂಟೆ ಕೆಲಸಕ್ಕೆ ಎರಡು ನೂರು ಲಾಭಾಂಶ ಬರೋದು ಒಂದು ಕಡೆಯಾದ್ರೇ, ಸಾವಿರಾರು ರೂಪಾಯಿ ಡಿಪಾಸಿಟ್ ಮಾಡಿದ್ರೇ ಹತ್ತೇ ದಿನದಲ್ಲಿ ಹೆಚ್ಚುವರಿ ಸಾವಿರಾರು ರೂಪಾಯಿ ಗಳಿಕೆ ‌ಮಾಡಬಹುದೆನ್ನುವ ಆಸೆಗೆ ಇರೋ ಹಣ ಕಳೆದುಕೊಂಡಿದ್ದಾರೆ. ಸುಮಾರು ಐದು ನೂರಕ್ಕೂ ಹೆಚ್ಚು ಜನರು ಕೋಟಿ ಗಟ್ಟಲೇ ಹಣ ನೀಡಿ‌ ಮುತ್ತುಗಳನ್ನು ಖರೀದಿ ‌ಮಾಡಿದ್ದು ಇದೀಗ ಕಂಪನಿ ಮಾಲೀಕ ಪರಾರಿಯಾಗಿದ್ದಾನೆ. 

Fraud Case: ಎಸಿಬಿ ತನಿಖೆ ತಪ್ಪಿಸೋದಾಗಿ ಲಕ್ಷಾಂತರ ರೂ. ಟೋಪಿ..!

2000 ಸಾವಿರಕೆ 200 ಹೆಚ್ಚುವರಿ ಹಣ

ಇನ್ನೂ ಮುತ್ತಿನ(Pearl) ಸರ ಪೋಣಿಸೋದು ನೆಪ ಮಾತ್ರಕ್ಕೆ. ಗ್ರಾಹಕರು ಡಿಪಾಸಿಟ್ ಮಾಡಿದ ಹಣವನ್ನು ಬಡ್ಡಿಯ ಲಾಭಾಂಶದಿಂದ ನೋಡಿದ್ರೇ ಗ್ರಾಹಕರಿಗೆ(Customers) ತಾವು ನೀಡಿದ ಡಿಪಾಸಿಟ್ ಹಣಕ್ಕೆ ಹತ್ತು ದಿನದಲ್ಲಿ 10% ಲಾಭ ಬರುತ್ತದೆ  ತಿಂಗಳ ಲೆಕ್ಕದಲ್ಲಿ ಶೇಕಡಾ 20-30 ಹೆಚ್ಚುವರಿ ಲಾಭಾಂಶ ಬರುತ್ತದೆ. ‌ಹೀಗಾಗಿ ಹೆಚ್ಚಿನ ಹಣದ ಆಸೆಗೆ ಒಬ್ಬೊಬ್ವರು ಒಂದರಿಂದ ಹತ್ತು ಲಕ್ಷ ಹಣ ಹೂಡಿಕೆ ಮಾಡಿ‌ ಮೋಸ ಹೋಗಿದ್ದಾರೆ. ಹೆಚ್ಚುಕಡಿಮೆ 500 ಕ್ಕೂ ಹೆಚ್ಚು ಜನರಿಂದ 5 ಕೋಟಿಗೂ ಅಧಿಕ ಹಣದ ವಂಚನೆ ಮಾಡಿದ್ದು ಇದೀಗ ‌ಮಾಲೀಕ ಪರಾರಿಯಾಗಿದ್ದಾ‌ನೆ.. 

ಬಯಲಿಗೆ ಬಂದಿದ್ದೇಗೆ

ಆರಂಭದಲ್ಲಿ ಕೇವಲ‌ ಮಹಿಳೆಯರನ್ನು ಟಾರ್ಗೆಟ್ ಮಾಡಿದ ಕಂಪನಿಯು ಮುತ್ತು ಪೋಣಿಸೋ ಕಥೆ ಕಟ್ಟಿದೆ. ನಂತರ ಲಾಭಾಂಶ ನೋಡಿ ಪುರುಷರು ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡಿದ್ದಾರೆ.. ಡಿಪಾಸಿಟ್ ಹಣ ಅಲ್ಲಿಯೇ ಉಳಿಸೋದು ಪ್ರತಿ ಹತ್ತು ದಿನಕ್ಕೆ ಒಮ್ಮೆ ಲಾಭಾಂಶದ ಹಣ ಮಾತ್ರ ತೆಗೆದುಕೊಂಡು ಹೋಗ್ತಿದ್ರು. ಕಳೆದ ಎರಡು ದಿನಗಳಿಂದ‌ ಮಾಲೀಕ ನಾಪತ್ತೆಯಾಗಿದ್ದು ಪೋನ್ ನಾಟರಿಚೆಬಲ್ ಆದಾಗಲೇ ಜನರು ಗಾಬರಿಗೊಂಡಿದ್ದಾರೆ.‌ ಅವರಿವರ ಮೂಲಕ ಪೊಲೀಸರಿಗೆ ವಿಷಯ ಗೊತ್ತಾದಾಗ ಪ್ರಕರಣ ಬಯಲಿಗೆ ಬಂದಿದೆ.‌ ಒಬ್ಬರಿಂದ ದೂರು ಪಡೆಯುತ್ತಿದ್ದಂತೆ ನಿನ್ನೆ ರಾತ್ರಿ  ಸರಿಸುಮಾರು ಎರಡುನೂರಕ್ಕೂ ಹೆಚ್ಚು ಜನರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಕಂಪನಿ ಮಾಲೀಕ ರೋದ್ದಂ ರವಿ ವಿರುದ್ಧ ಪ್ರಕರಣ ದಾಖಲು ನೀಡಿದ್ದಾರೆ. ದೂರು ದಾಖಲಾಗ್ತಿದ್ದಂತೆ ಕಂಪನಿ ಮ್ಯಾನೇಜರ್ ಕುಮಾರ್‌ನನ್ನ ಪೊಲೀಸರು(Police) ಬಂಧಿಸಿದ್ದಾರೆ(Arrest). ಅತಿ ಆಸೆ ಗತಿಗೇಡು ಎನ್ನುವ ಮಾತು ಮತ್ತೊಮ್ಮೆ ಬಳ್ಳಾರಿಯಲ್ಲಿ ಸಭೀತಾಗಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ